ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಾಯುಮಾಲಿನ್ಯಕ್ಕೆ ಬೇಸತ್ತು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ: ವಿಡಿಯೋ ವೈರಲ್!

Viral Video: ಸಾಮಾನ್ಯವಾಗಿ ಜಾಗಿಂಗ್ ಮಾಡುವವರು, ಪಾರ್ಕ್ , ರೋಡ್ ಸೈಡ್ ನಲ್ಲಿ ಹೋಗು ವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಯುವಕನು ಶಾಪಿಂಗ್ ಮಾಲ್ ಒಳಗೆ ಜಾಗಿಂಗ್ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ‌. ಮುಂಬೈನ ಹವಾಮಾನ ವೈಪರೀತ್ಯಗಳಿಂದ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದ ಹಿನ್ನೆಲೆ ಶಾಪಿಂಗ್ ಮಾಲ್ ನಲ್ಲಿ ಜಾಗಿಂಗ್ ಮಾಡು ವುದು ಉತ್ತಮ ಎಂದು ಆ ಯುವಕ ತಿಳಿಸಿದ್ದಾನೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಮೈದಾನ ಬಿಟ್ಟು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ! ವಿಡಿಯೋ ವೈರಲ್

ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ -

Profile
Pushpa Kumari Jan 7, 2026 2:31 PM

ಮುಂಬೈ, ಜ. 7: ಪ್ರತಿ ದಿನ ಬೆಳಗ್ಗೆ ಜಾಗಿಂಗ್, ವಾಕಿಂಗ್‌ ಸೇರಿ ಹಲವು ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯ ಸುಸ್ಥಿತಿಯಲ್ಲಿ ಇರಲಿದೆ. ಉಸಿರಾಟದ ಸಮಸ್ಯೆ, ಕೈ ಕಾಲು ನೋವು ಇತ್ಯಾದಿ ಸಮಸ್ಯೆಗಳಿಗೆ ಇಂತಹ ಕ್ರಿಯಾಶೀಲ ಚಟುವಟಿಕೆ ಗಳು ಬಹಳ ಉತ್ತಮ ಪರಿಣಾಮ ಬೀರಲಿದೆ. ಹೀಗಾಗಿ ವೈದ್ಯರು ಕೂಡ ಈ ಬಗ್ಗೆ ಸಲಹೆ ನೀಡಿದ್ದನ್ನು ನಾವು ಕಾಣಬಹುದು. ಸಾಮಾನ್ಯವಾಗಿ ಜಾಗಿಂಗ್ ಮಾಡುವವರು, ಪಾರ್ಕ್ , ರೋಡ್ ಸೈಡ್ ನಲ್ಲಿ ಹೋಗುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಯುವಕನು ಶಾಪಿಂಗ್ ಮಾಲ್ ಒಳಗೆ ಜಾಗಿಂಗ್ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ‌.

ಮುಂಬೈನ ಹವಾಮಾನ ವೈಪರೀತ್ಯ ಗಳಿಂದ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದ ಹಿನ್ನೆಲೆ ಶಾಪಿಂಗ್ ಮಾಲ್ ನಲ್ಲಿ ಜಾಗಿಂಗ್ ಮಾಡುವುದು ಉತ್ತಮ ಎಂದು ಆ ಯುವಕ ತಿಳಿಸಿದ್ದಾನೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

ದೇಹವು ಹೆಚ್ಚು ಫಿಟ್ ಆ್ಯಂಡ್ ಫೈನ್ ಆಗಿರಲು ಜಾಗಿಂಗ್ ಪ್ರಮುಖ ಪಾತ್ರ ವಹಿಸಲಿದೆ. ಆದರೆ ಮುಂಬೈ, ದೆಹಲಿ ಇತರ ಭಾಗದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು ಮನೆ ಒಳಗೆ ಎಕ್ಸಸೈಜ್ ಮಾಡುವುದೇ ಉತ್ತಮ ಎಂಬ ಸ್ಥಿತಿ ಇದೆ. ಅದರಲ್ಲೂ ಮುಂಬೈ ನಲ್ಲಿ ಇರುವವರು ಇನ್ನು ಮುಂದೆ ಹತ್ತಿರರ ಮಾಲ್ ಗಳಿಗೆ ಜಾಗಿಂಗ್ ಹೋಗುವುದು ಉತ್ತಮ..ಇದು ಹೊರಗಿನ ಪ್ರದೇಶದಲ್ಲಿ ಜಾಗಿಂಗ್ ಮಾಡುವುದಕ್ಕಿಂತಲೂ ಉತ್ತಮ ವಾಗಿದೆ. ಇಲ್ಲಿ ಶುದ್ಧ ಗಾಳಿ ಇದೆ, ಮಾಲಿನ್ಯದ ಬಗ್ಗೆ ಕಳವಳ ಗೊಳ್ಳುವ ಅಗತ್ಯವು ಇಲ್ಲ ಎಂದು ಹೇಳುವ ವಿಡಿಯೋ ಒಂದು ವೈರಲ್ ಆಗಿದೆ.

ವಿಡಿಯೋ ನೋಡಿ:

ಇನ್ಸ್ಟಾಗ್ರಾಮ್ ನಲ್ಲಿ ಭವಿನ್ ಪರ್ಮಾರ್ ಎಂಬ ಬಳಕೆದಾರ ಹಂಚಿಕೊಂಡಿರುವ ಈ ವೈರಲ್ ಕ್ಲಿಪ್ ನಲ್ಲಿ, ಯುವಕನೊಬ್ಬನು ಮಾಲ್ ಒಳಗೆ ಕಾರಿಡಾರ್ ಗಳಲ್ಲಿ ಜಾಗಿಂಗ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಟಿ-ಶರ್ಟ್, ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸಿರುವ ವ್ಯಕ್ತಿ ಮಾಲ್ ಒಳಗೆ ಕಾರಿಡಾರ್, ಸ್ಟೇರ್ ಕೇಸ್ ಎಸ್ಕಲೇಟರ್ ಗಳಲ್ಲಿ ಓಡುತ್ತಿದ್ದದ್ದನ್ನು‌ ಕಾಣಬಹುದು. ಇದು ಧೂಳು-ಮುಕ್ತ ಪರಿಸರವೆಂದು ಕ್ಯಾಪ್ಶನ್ ನಲ್ಲಿ ಉಲ್ಲೇಖಿಸಲಾಗಿದೆ. ಮುಂಬೈ ಗಾಳಿಯ ಗುಣಮಟ್ಟ 200+ ಆಗಿದ್ದು ಇದೇ ಕಾರಣಕ್ಕೆ ನಾನು ಮಾಲ್ ಒಳಗೆ ಓಡಲು ನಿರ್ಧರಿಸಿರುವುದಾಗಿ ಆತ ತಿಳಿಸಿದ್ದಾನೆ.

Viral Video: ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ; ನೆಟ್ಟಿಗರಿಂದ ಆಕ್ರೋಶ

ವೈರಲ್ ಆದ ವೀಡಿಯೊದಲ್ಲಿ ಮಾಲ್‌ನ ವಿವಿಧ ಸ್ಥಳಗಳಿಗೆ ಆತ ಓಡುತ್ತಿರುವುದು ಕಾಣಬಹುದು. ಇವುಗಳಲ್ಲಿ ಧೂಳು-ಮುಕ್ತ ಪರಿಸರ, ಶುದ್ಧ ಗಾಳಿ ಇದೆ. ಇಲ್ಲಿ ಯಾವುದೆ ಸಂಚಾರ ದಟ್ಟಣೆ ಇಲ್ಲ ಎಂಬ ಕ್ಯಾಪ್ಶನ್ ಇಲ್ಲಿ ಹೈಲೈಟ್ ಆಗಿದೆ. ಜನವರಿ 5 ರಂದು ಈ ಪೋಸ್ಟ್ ಮಾಡಲಾಗಿದ್ದು ಈ ವೀಡಿಯೊ ಆನ್‌ಲೈನ್‌ನಲ್ಲಿ ನಟ್ಟಿಗರ ಗಮನ ಸೆಳೆದಿದೆ. ಬರೋಬ್ಬರಿ 2.94 ಲಕ್ಷ ವೀಕ್ಷಣೆಗಳನ್ನು ದಾಟಿದ್ದು, 6,600 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ಬಗ್ಗೆ ನಾನಾ ತರನಾಗಿ ಕಾಮೆಂಟ್ ಮಾಡಿದ್ದಾರೆ‌. ವಾಯುಮಾಲಿನ್ಯದ ನಡುವೆಯೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಆ ಯುವಕ ವಿಭಿನ್ನವಾಗಿ ಯೋಚಿಸಿದ್ದು ಬಹಳ ಚೆನ್ನಾಗಿದೆ. ವೈಪರಿತ್ಯಗಳ ನಡುವೆ ಆರೋಗ್ಯ ಕಾಳಜಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಆತ ತಿಳಿಸಿದ್ದು ತಮಾಷೆ ಎನಿಸಬಹುದು. ಆದರೆ ವಾಯುಮಾಲಿನ್ಯವು ಗಂಭೀರ ಸಮಸ್ಯೆ ಆಗಿದ್ದು ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಸುಧಾರಣೆ ಆಗಬೇಕು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ‌. ಮುಂಬೈ ನಲ್ಲಿ ಜನವರಿ 7 ರ ಬೆಳಗ್ಗೆ ನಗರದ ಒಟ್ಟಾರೆ ವಾಯು ಗುಣಮಟ್ಟ 332 ಸೂಚ್ಯಂಕ ತಲುಪಿದೆ. ಇದು ಮಕ್ಕಳು, ಹಿರಿಯ ನಾಗರಿಕರಿಗೆ ಉಸಿರಾಟ ಸಮಸ್ಯೆ ನೀಡಲಿದೆ. ಹೀಗಾಗಿ ಆದಷ್ಟು ಹೊರಗೆ ಹೋಗುವುದನ್ನು ಕಡಿಮೆ ಮಾಡುವಂತೆ ಈ ಬಗ್ಗೆ ಮತ್ತೊಬ್ಬ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.