ಮುಂಬೈ,ಎ.17: 'ಝಾಂಬಿ ಡ್ರಗ್’ ಹಾವಳಿ ಜೋರಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಒಂದೇ ಭಂಗಿಯಲ್ಲಿ ನಿಂತಿರುವ ದೃಶ್ಯ ಭಾರೀ ವೈರಲ್ (Viral News) ಆಗಿತ್ತು. ಜನರಿಗೂ ಈ ಬಗ್ಗೆ ಆತಂಕ ಶುರುವಾಗಿದ್ದು ಎಲ್ಲೆಡೆ ಈ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ ಮಹಾರಾಷ್ಟ್ರದ ಮೀರಾ ಭಯಂದರ್ ರಸ್ತೆಯಲ್ಲಿ ಯುವಕನೊಬ್ಬ ವಿಚಿತ್ರ ಭಂಗಿಯಲ್ಲಿ ನಿಂತಿದ್ದು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದೇ ಆತನ ಅರಿವಿಗೆ ಬಾರದೇ ಸ್ತಬ್ಧನಾಗಿ ನಿಂತಿದ್ದಾನೆ. ಸದ್ಯ ಈ ಆತಂಕಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಯೂ ಭಯಾಂದರ್ ಪಶ್ಚಿಮದ 90 ಅಡಿ ರಸ್ತೆಯಲ್ಲಿ ನಡೆದಿದೆ. ವೀಡಿಯೊದಲ್ಲಿ, ಆ ವ್ಯಕ್ತಿ ಒಂದು ಕಂಬದ ಬಳಿ ಮುಂದಕ್ಕೆ ಎರಗಿ ನಿಂತಿರುವುದು ಕಂಡು ಬಂದಿದೆ. ಈ ದೃಶ್ಯ ಕಂಡ ಅಲ್ಲಿನ ಜನರು ಇದು ಝಾಂಬಿ ಡ್ರಗ್ ಎಂದೇ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿದ್ದ ಹತ್ತಿರದ ಜನರು ಆತನನ್ನು ನೋಡುತ್ತಿರುವುದನ್ನು ಕಾಣಬಹುದು. ರಸ್ತೆಯಲ್ಲಿ ಟ್ರಕ್ ವೊಂದು ನಿಂತಿದ್ದು ಕೆಲವು ಪಾದಚಾರಿಗಳು ಅಲ್ಲೇ ಹಾದು ಹೋಗುತ್ತಾರೆ, ಆದರೆ ಆ ವ್ಯಕ್ತಿ ಅದೇ ಸ್ಥಾನದಲ್ಲಿಯೇ ಒಂದೆ ಭಂಗಿಯಲ್ಲಿ ಇರುತ್ತಾನೆ.
ವಿಡಿಯೋ ನೋಡಿ:
ವ್ಯಕ್ತಿಯೂ ಕಂಬದ ಪಕ್ಕದಲ್ಲಿ ವಿಚಿತ್ರವಾಗಿ ಬಾಗಿ ನಿಂತಿದ್ದಾನೆ. ಆತನ ದೇಹವು ಸಂಪೂರ್ಣವಾಗಿ ಸ್ಥಗಿತವಾಗಿದ್ದು ಸುತ್ತ ಮುತ್ತಲಿನ ವಾಹನಗಳ ಶಬ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅವನಿಗೆ ನೇರವಾಗಿ ನಿಲ್ಲಲು ಅಥವಾ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಜನರು ವೀಡಿಯೊವನ್ನು ವೀಕ್ಷಿಸುತ್ತಿದ್ದಂತೆ, ಕಳವಳ ವ್ಯಕ್ತಪಡಿಸಿದರು.
Viral Video: ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್
"ಇದು ಈಗ ನಿಜಕ್ಕೂ ಕಳವಳಕಾರಿಯಾಗಿದೆ" ಎಂದು ಬಳಕೆದಾರರು ಬರೆದಿದ್ದಾರೆ.ಮತ್ತೊಬ್ಬರು, ಪೊಲೀಸರು ದಯವಿಟ್ಟು ಸ್ವಲ್ಪ ಕ್ರಮ ಕೈಗೊಳ್ಳಿ.. ಕೆಲವರು ಪ್ರತಿ ರಾತ್ರಿ 10 ಗಂಟೆಯ ನಂತರ ಬಹಿರಂಗವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಾರೆ. ಮುಂದಿನ ಪೀಳಿಗೆಗೆ ಸಮಸ್ಯೆಯಾಗುವ ಮೊದಲು ಜಾಗೃತಿ ವಹಿಸಿ ಎಂದು ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಇಂತಹ ವೀಡಿಯೊ ಇದೇ ಮೊದಲಲ್ಲ. ಬಿಹಾರ ಮತ್ತು ಬೆಂಗಳೂರಿನಲ್ಲಿಯೂ ಕಂಡು ಬಂದಿದೆ.