ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಮಾನದಲ್ಲಿ ನಟಿಗೆ ಕಿರುಕುಳ: ಪ್ರಯಾಣಿಕನ ಅಸಭ್ಯ ವರ್ತನೆ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ

Viral Video: ವಿಮಾನ ಪ್ರಯಾಣದ ವೇಳೆ ನಟಿ ಜತೆ ಸಹಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ನಟಿ ಹಾಗೂ ಕಂಟೆಂಟ್ ಕ್ರಿಯೆಟರ್ ಉರ್ವಿ ಕೊಠಾರಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಚಾರ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಹುಟ್ಟು ಹಾಕಿದೆ.

ವಿಮಾನದಲ್ಲಿ ನಟಿಗೆ ಕಿರುಕುಳ

ನವದೆಹಲಿ, ಏ. 2: ಮಹಿಳೆಯರ ಸುರಕ್ಷತೆ ಬಗ್ಗೆ ಎಷ್ಟೇ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದರೂ ಲೈಂಗಿಕ ಕಿರುಕುಳದಂತ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಮಾನ ಪ್ರಯಾಣದ ವೇಳೆ ನಟಿ ಜತೆ ಸಹಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ನಟಿ ಹಾಗೂ ಕಂಟೆಂಟ್ ಕ್ರಿಯೆಟರ್ ಉರ್ವಿ ಕೊಠಾರಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಶೇರ್ (Viral News) ಮಾಡಿಕೊಂಡಿದ್ದಾರೆ.

ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಉರ್ವಿ ಕೊಠಾರಿ ವಿಡಿಯೊ ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಪದೇ ಪದೆ ಸೀಟಿನ ಹಿಂದೆ ಕೈ ಹಾಕುತ್ತ ತೊಂದರೆ ನೀಡುತ್ತಿದ್ದ ಎಂದು ತಿಳಿಸಿದ್ದಾರೆ. ಸದ್ಯ ಈ ವಿಚಾರ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಹುಟ್ಟುಹಾಕಿದೆ.

ವಿಡಿಯೊ ನೋಡಿ:



ವ್ಯಕ್ತಿಯೊಬ್ಬ ಪದೇ ಪದೆ ಸೀಟಿನ ಹಿಂದೆ ಕೈ ಹಾಕುತ್ತಿರುವ ಬಗ್ಗೆ ಕ್ಯಾಬಿನ್ ಸಿಬ್ಬಂದಿಗೆ ಅವರು ತಿಳಿಸಿದ್ದಾರೆ. ನಂತರ ವಿಮಾನಯಾನ ಸಿಬ್ಬಂದಿ ಪ್ರಯಾಣಿಕನ ಬಳಿ ಮಾತನಾಡಿ ಎಚ್ಚರಿಸಿದ್ದಾರೆ. ಆದಾಗ್ಯೂ, ಆತ ಮತ್ತೆ ತನ್ನ ವರ್ತನೆಯನ್ನು ಮುಂದುವರಿಸಿದ್ದಾನೆ. ಇದರಿಂದ ಮುಜುಗರಗೊಂಡ ಉರ್ವಿ, ಕೊನೆಗೆ ತಮ್ಮ ಸೀಟನ್ನೇ ಬದಲಾಯಿಸಿಕೊಂಡಿದ್ದಾರೆ.

ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ

ವಿಡಿಯೊ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದೆ. ಈ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು ಉರ್ವಿ, ಮಾತನಾಡಲು ಧೈರ್ಯ ಹೊಂದಿದ್ದಕ್ಕಾಗಿ ನಿಜವಾಗಿಯೂ ಹೆಮ್ಮೆಪಡುವುದಾಗಿ ತಿಳಿಸಿದ್ದಾರೆ.