ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼಧುರಂಧರ್ 2ʼ ಚಿತ್ರ ರಿಲೀಸ್‌ ಬೆನ್ನಲ್ಲೇ ಪಾಕಿಸ್ತಾನ ಪೊಲೀಸರಿಂದ ಭಾರತೀಯ ಗೂಢಚಾರರ ಹುಡುಕಾಟ; ವೈರಲ್ ವಿಡಿಯೊದ ಅಸಲಿಯತ್ತೇನು?

Indian Spies in Pak: ಬಾಲಿವುಡ್‌ನ ʼದುರಂಧರ್ 2ʼ ಸಿನಿಮಾ ಪಾಕಿಸ್ತಾನದಲ್ಲೂ ಸಂಚಲನ ಮೂಡಿಸಿದೆ. ಇದರಲ್ಲಿ ಭಾರತೀಯ ಗೂಢಾಚರರು ಪಾಕಿಸ್ತಾನದಲ್ಲಿ ಇರುವ ಬಗ್ಗೆ ತೋರಿಸಿರುವುದರಿಂದ ಪಾಕ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎಂದು ಹೇಳಲಾಗಿದೆ. ಸರ್ಕಾರ ಅಲ್ಲಿ ಅಡಗಿಕೊಂಡಿರುವ ಭಾರತೀಯ ಗೂಢಚಾರರನ್ನು ಹುಡುಕಾಡುತ್ತಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಸುದ್ದಿಯ ಅಸಲಿಯತ್ತೇನು ಎನ್ನುವ ವಿವರ ಇಲ್ಲಿದೆ.

ಪಾಕಿಸ್ತಾನ ಪೊಲೀಸರಿಂದ ಭಾರತೀಯ ಗೂಢಚಾರರ ಹುಡುಕಾಟ!

ಪಾಕಿಸ್ತಾನ ಪೊಲೀಸರಿಂದ ಭಾರತೀಯ ಗೂಢಚಾರರ ಹುಡುಕಾಟ -

Priyanka P
Priyanka P Mar 24, 2026 3:53 PM

ಇಸ್ಲಾಮಾಬಾದ್‌, ಮಾ. 24: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ʼದುರಂಧರ್ 2ʼ (Dhurandhar 2) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಜತೆಗೆ ಈ ಸಿನಿಮಾ ಪಾಕಿಸ್ತಾನದಲ್ಲೂ ಸಂಚಲನ ಮೂಡಿಸಿದೆ. ಯಾಕೆಂದರೆ ಇದರಲ್ಲಿ ಭಾರತೀಯ ಗೂಢಾಚರರು (Indian Spies) ಪಾಕಿಸ್ತಾನದಲ್ಲಿ ಮಾರುವೇಷದಲ್ಲಿದ್ದು, ಅಲ್ಲಿನ ಮಾಹಿತಿ ಸಂಗ್ರಹಿಸುವ ಬಗ್ಗೆ ವಿವರಿಸಲಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ರಸ್ತೆಬದಿ ಮಲಗಿರುವವರು, ಗುರುತು ಪರಿಚಯ ಇಲ್ಲದವರನ್ನೆಲ್ಲ ಹುಡುಕಿ ಅವರ ರಾಷ್ಟ್ರೀಯತೆಯನ್ನು ಕೇಳಲಾಗುತ್ತಿದೆ. ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ವೈರಲ್ ಆಗಿರುವ ವಿಡಿಯೊದಲ್ಲಿ ಪಾಕಿಸ್ತಾನಿ ಪೊಲೀಸರು ಶಂಕಿತ ವ್ಯಕ್ತಿಗಳಿಗಾಗಿ ತೀವ್ರ ಶೋಧ ನಡೆಸುತ್ತಿರುವುದನ್ನು ಕಾಣಬಹುದು. ʼಧುರಂಧರ್ 2ʼ ಸಿನಿಮಾದಂತೆಯೇ ಭಾರತೀಯ ಗೂಢಾಚಾರರು ಪಾಕಿಸ್ತಾನದಲ್ಲಿದ್ದಾರೆ ಎಂಬ ವಿಡಿಯೊಗಳು ಎಕ್ಸ್ ಮತ್ತು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿವೆ.

ಇಲ್ಲಿದೆ ವಿಡಿಯೊ:



ಈ ಸಿನಿಮಾದ ಬಗ್ಗೆ ಚರ್ಚೆ ಪ್ರಾರಂಭಿಸಿದ ಕೂಡಲೇ ಈ ಸಂಚಲನ ಆರಂಭವಾಯಿತು. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತ್ವರಿತವಾಗಿ ಪಾಕಿಸ್ತಾನದ ವಿಡಿಯೊಗಳನ್ನು ಚಿತ್ರದ ಕಥಾಹಂದರಕ್ಕೆ ಲಿಂಕ್ ಮಾಡಲು ಪ್ರಾರಂಭಿಸಿದವು. ಅಧಿಕಾರಿಗಳು ಭಾರತೀಯ ಏಜೆಂಟ್‌ಗಳಿಗಾಗಿ ದೇಶಾದ್ಯಂತ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿಕೊಂಡವು. ಕರಾಚಿಯ ಲಿಯಾರಿ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ಈ ವಿಡಿಯೊ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ವೇದಿಕೆಗಳಲ್ಲಿ ವೈರಲ್ ಆಗಿವೆ.

ಟಾಕ್ಸಿಕ್‌ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ

ವಿಡಿಯೊದ ಸತ್ಯಾಸತ್ಯತೆ

ವೈರಲ್‌ ಆಗಿರುವ ವಿಡಿಯೊ ಹೊಸದಲ್ಲ ಎಂದು ತಿಳಿದುಬಂದಿದೆ. ಇದು ಕರಾಚಿಯಲ್ಲಿ ನಡೆದ ಹಳೆಯ ಪೊಲೀಸ್ ಕಾರ್ಯಾಚರಣೆಯ ವಿಡಿಯೊ ಎನ್ನಲಾಗಿದೆ. ಇದೇ ರೀತಿಯ ವಿಡಿಯೊಗಳು 2025ರ ಮಧ್ಯಭಾಗದಿಂದಲೂ ಹರಿದಾಡುತ್ತಿವೆ. ಇದು ನಿಯಮಿತ ತಪಾಸಣೆಯ ಭಾಗ. ಸಿನಿಮಾದಿಂದ ಪ್ರೇರಿತವಾಗಿ ನಡೆದ ಕಾರ್ಯಾಚರಣೆಯಲ್ಲ. ಮೂಲತಃ ಇದು ಸಿನಿಮಾದಿಂದ ಪ್ರೇರಿತವಾಗಿದ್ದಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಬಳಕೆದಾರರು ಮೀಮ್ಸ್‌ಗಳ ಸುರಿಮಳೆಗೈದಿದ್ದಾರೆ. ವಿಡಿಯೊದಲ್ಲಿರುವ ಯಾರಾದರೂ ಅಕ್ಷರಶಃ ರಹಸ್ಯ ಏಜೆಂಟ್ ಆಗಿರಬಹುದು. ಪೊಲೀಸರು ಕೂಡ ಆಗಿರಬಹುದು ಎಂದು ತಮಾಷೆ ಮಾಡುತ್ತಿದ್ದಾರೆ.

ತಮಾಷೆಯ ಭಾಗವೆಂದರೆ, ಗೂಢಚಾರರ ಕುರಿತಾದ ಒಂದು ಚಲನಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ತನ್ನದೇ ಆದ ಸಣ್ಣ ಗೊಂದಲದ ಜಾಲವನ್ನು ಸೃಷ್ಟಿಸಿದೆ. ಒಟ್ಟಿನಲ್ಲಿ ʼಧುರಂಧರ್‌ 2' ಭಾರತದ ಜತೆಗೆ ವಿಶ್ವಾದ್ಯಂತ ಭಾರಿ ಸಂಚಲನ ಮೂಡಿಸಿದೆ.