96ನೇ ವಯಸ್ಸಿನಲ್ಲೂ ಶಾಲೆಗೆ ಸೇರಿ ದಾಖಲೆ ಬರೆದ ಅಜ್ಜಿ! ನೂರಕ್ಕೆ 98 ಅಂಕ ಪಡೆಯುವ ಮೂಲಕ ಸಾಧನೆ!
Viral News: ಕೇರಳದ ಕಾರ್ತ್ಯಾಯಿನಿ ಅಮ್ಮ ಶಾಲೆಯನ್ನು ತೊರೆದ ಸುಮಾರು ಎಂಟು ದಶಕಗಳ ನಂತರ ಮತ್ತೆ ಶಿಕ್ಷಣ ಪಡೆದಿದ್ದು ಭಾರತದ ಅತ್ಯಂತ ಹಿರಿಯ ಸಾಕ್ಷರತಾ ಸಾಧಕರಲ್ಲಿ ಒಬ್ಬರಾಗಿದ್ದಾರೆ. 96 ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದ ಇವರು ನೂರಕ್ಕೆ 98 ಅಂಕ ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ...
96 ನೇ ವಯಸ್ಸಿನಲ್ಲಿ 98 ಅಂಕ ಪಡೆದ ಅಜ್ಜಿ -
ಕೇರಳ, ಮೇ 13: ಕಲಿಕೆಗೆ ವಯಸ್ಸಿನ ಹಂಗಿಲ್ಲ, ಪ್ರಯತ್ನ ಪಟ್ಟರೇ ಎಲ್ಲವೂ ಸಾಧ್ಯ ಅನ್ನೋದನ್ನು 96ನೇ ವಯಸ್ಸಿನಲ್ಲೂ ಅಜ್ಜಿ ಯೊಬ್ಬರು ತೋರಿಸಿ ಕೊಟ್ಟಿದ್ದಾರೆ. ಕೇರಳದ (Kerala News) ಕಾರ್ತ್ಯಾಯಿನಿ ಅಮ್ಮ ಶಾಲೆಯನ್ನು ತೊರೆದ ಸುಮಾರು ಎಂಟು ದಶಕಗಳ ನಂತರ ಮತ್ತೆ ಶಿಕ್ಷಣ ಪಡೆದಿದ್ದು ಭಾರತದ ಅತ್ಯಂತ ಹಿರಿಯ ಸಾಕ್ಷರತಾ ಸಾಧಕರಲ್ಲಿ ಒಬ್ಬರಾಗಿದ್ದಾರೆ. 96 ನೇ ವಯಸ್ಸಿ ನಲ್ಲಿ ಸಾಕ್ಷರತಾ ಪರೀಕ್ಷೆ ಬರೆದ ಇವರು ನೂರಕ್ಕೆ 98 ಅಂಕ ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಕೇರಳದ ಬಡ ಕುಟುಂಬದಲ್ಲಿ ಜನಿಸಿದ ಕಾರ್ತ್ಯಾಯಿನಿ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ಆರ್ಥಿಕ ತೊಂದರೆಗಳಿಂದಾಗಿ ಶಾಲೆಗೆ ಸೇರಲು ಅವಕಾಶವಿಲ್ಲದ ಕಾರಣ ಅವರು ಕೆಲಸಕ್ಕೆ ಸೇರಬೇಕಾಯಿತು. ಇದರ ಪರಿಣಾಮವಾಗಿ, ಅವರು ಹಲವು ವರ್ಷಗಳ ಕಾಲ ಅನಕ್ಷರಸ್ಥರಾಗಿದ್ದರು.
Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಆದಾಗ್ಯೂ, ಕೇರಳ ರಾಜ್ಯ ಸಾಕ್ಷರತಾ ಮಿಷನ್ ವೃದ್ಧರು ಮತ್ತು ವಯಸ್ಕ ವ್ಯಕ್ತಿಗಳಿಗಾಗಿ "ಅಕ್ಷರ ಲಕ್ಷ" ಸಾಕ್ಷರತಾ ಕಾರ್ಯ ಕ್ರಮವ ನ್ನು ಪ್ರಾರಂಭಿಸಿದಾಗ ಅಜ್ಜಿಗೆ ಕಲಿಯುವ ಹಸಿವು ಹೆಚ್ಚಾಯಿತು. ಅವರಿಗೆ ತೊಂಬತ್ತು ವರ್ಷ ದಾಟಿದ್ದರೂ ಸಹ ಕಲಿಕೆಯನ್ನು ಆಯ್ದುಕೊಂಡರು. ಅಲ್ಲಿನ ಶಿಕ್ಷಕ ವರ್ಗ ಕೂಡ ಹೆಚ್ಚಿನ ಬೆಂಬಲ ಅವರಿಗೆ ನೀಡುತ್ತಿದ್ದರು.
ಸ್ವಯಂಸೇವಕರು ಮತ್ತು ಶಿಕ್ಷಕರು ಅವರ ಅಧ್ಯಯನಕ್ಕೆ ಸಹಾಯ ಮಾಡಲು ಆಗಾಗ್ಗೆ ಅವರನ್ನು ಭೇಟಿ ಮಾಡುತ್ತಿದ್ದರು. ಹರಿಪಾಡ್ ನಲ್ಲಿರುವ ತಮ್ಮ ಮನೆಯಲ್ಲಿ ಅವರು ಪ್ರತಿದಿನ ಓದುವುದು, ಬರೆಯುವುದು ಅಭ್ಯಾಸ ಮಾಡುತ್ತಿದ್ದರು. ಆದಾಗ್ಯೂ, ಪರೀಕ್ಷೆಯ ಫಲಿತಾಂಶವು ಜನರು ನಿರೀಕ್ಷಿಸಿ ದಂತಿರಲಿಲ್ಲ.
ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಸಾಕ್ಷರತಾ ಪರೀಕ್ಷೆ ಯಲ್ಲಿ ಕಾರ್ತ್ಯಾಯಿನಿ ಅಮ್ಮ 100 ರಲ್ಲಿ 98 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಪರೀಕ್ಷೆಯ ಫಲಿತಾಂಶಗಳ ಘೋಷ ಣೆಯ ನಂತರ, ಅವರ ಯಶಸ್ಸಿನ ಕಥೆ ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಯಿತು. ಆಗಿನ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡ ಈ ಯಶಸ್ಸನ್ನು ಸಮಾಜಕ್ಕೆ ಸ್ಫೂರ್ತಿ ಎಂದು ಕರೆದರು.