ಬೆಂಗಳೂರು, ಸೆ. 29: ಬಾಡಿಗೆ ಪಾವತಿಸುವ ವಿಚಾರದಲ್ಲಿ ಆಟೋ ಚಾಲಕ ಹಾಗೂ ಇಬ್ಬರು ಯುವತಿಯರ ನಡುವೆ ಮಾರಾಮಾರಿ ಉಂಟಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರ (ಸೆಪ್ಟೆಂಬರ್ 28) ಮಧ್ಯಾಹ್ನ ಎಚ್‌ಎಸ್‌ಆರ್ ಲೇಔಟ್‌ನ 3ನೇ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದೆ. ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ ವಿಡಿಯೊದಲ್ಲಿ (Viral News) ಇಬ್ಬರು ಮಹಿಳೆಯರು ಮತ್ತು ಆಟೋ ಚಾಲಕ ಪರಸ್ಪರ ಜಗಳವಾಡುತ್ತಿರುವುದು ಕಂಡು ಬಂದಿದೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಇಬ್ಬರು ಮಹಿಳೆಯರು ಮತ್ತು ಆಟೋ ರಿಕ್ಷಾ ಚಾಲಕನ ನಡುವೆ ಮಧ್ಯೆ ರಸ್ತೆಯಲ್ಲೇ ವಾಗ್ವಾದ ಉಂಟಾಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆಟೋ ಬಾಡಿಗೆ ವಿಚಾರವಾಗಿ ಆರಂಭವಾದ ಸಣ್ಣ ಮಾತಿನ ಚಕಮಕಿ ಜಗಳದವರೆಗೆ ಹೋಗಿದೆ
ವಿಡಿಯೊ ನೋಡಿ:
ಮೂವರು ಹೊಡೆದಾಡಿಕೊಳ್ಳುತ್ತಿದ್ದಾಗ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಇಬ್ಬರು ಮಹಿಳೆಯರು ಮತ್ತು ಆಟೋ ಚಾಲಕ ಗುದ್ದಾಡಿಕೊಳ್ಳುತ್ತಿರುವುದು ಕಾಣಬಹುದು.
ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ
ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಆಟೋ ಚಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಜತೆಗೆ ಯುವತಿಯರನ್ನೂ ಸಂಪರ್ಕಿಸಿ ಠಾಣೆಗೆ ಬಂದು ದೂರು ಕೊಡುವಂತೆ ಸೂಚಿಸಿದ್ದಾರೆ. ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಇಬ್ಬರು ಮಹಿಳೆಯರು ಆಟೋವನ್ನು ಬುಕ್ ಮಾಡಿದ್ದು ಪ್ರಯಾಣ ದರದ ಬಗ್ಗೆ ವಾಗ್ವಾದ ನಡೆಯಿತು. ಮಹಿಳೆಯರು ಮದ್ಯದ ಅಮಲಿನಲ್ಲಿದ್ದರು. ಅವರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಶುಲ್ಕ ಪಾವತಿಸಲು ನಿರಾಕರಿಸಿದರು ಎಂದು ಆರೋಪಿಸಿದ್ದಾರೆ.