ಗಾಂಧಿನಗರ: ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿಗೆ (Anant Ambani) ಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಎಲ್ಲಿಲ್ಲದ ಕಾಳಜಿ, ಪ್ರೀತಿ. ಇತ್ತೀಚೆಗೆ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿ. ಪ್ರಾಣಿಪಕ್ಷಿಗಳ ಮೇಲೆ ತಮಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಅನಂತ್ ಅಂಬಾನಿ ಇತ್ತೀಚೆಗೆ ಗುಜರಾತ್‌ನ ಜಾಮ್‍ನಗರದಿಂದ ದ್ವಾರಕಾಗೆ ಪಾದಯಾತ್ರೆ ಮಾಡುವ ಸಮಯದಲ್ಲಿ ವ್ಯಾನ್ನಲ್ಲಿ ಸಾಗಿಸುತ್ತಿದ್ದ ಬಾಯ್ಲರ್ ಕೋಳಿಗಳನ್ನು ಕಂಡು ಅವುಗಳನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ.
ವಿಡಿಯೊದಲ್ಲಿ ಅವರು ಕೋಳಿಗಳನ್ನು ಕೊಲ್ಲುವುದನ್ನು ತಪ್ಪಿಸಲು ತನ್ನೊಂದಿಗೆ ಪಾದಯಾತ್ರೆ ನಡೆಸುತ್ತಿದ್ದ ಸಹಚರರ ಬಳಿ ಆ ಕೋಳಿಗಳನ್ನು ಖರೀದಿಸಲು ಹೇಳಿದ್ದಾರೆ. ಅವರ ಈ ಕಾರ್ಯ ಸಾಕಷ್ಟು ಪ್ರಶಂಸೆಗಳಿಸಿದೆ. ವಿಡಿಯೊದಲ್ಲಿ ಅವರು ಕೋಳಿ ಒಂದನ್ನು ಹಿಡಿದುಕೊಂಡಿರುವುದು ಸೆರೆಯಾಗಿದೆ. ಗುಜರಾತ್‍ನ ರಸ್ತೆಗಳಲ್ಲಿ ಅವರು ಇತ್ತೀಚೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಬಾಯ್ಲರ್ ಕೋಳಿಗಳನ್ನು ರಕ್ಷಿಸಿದ ಅನಂತ್ ಅಂಬಾನಿ ವಿಡಿಯೊ ಇಲ್ಲಿದೆ ನೋಡಿ:
ಹಲವು ನೆಟ್ಟಿಗರು ಅನಂತ್ ಅಂಬಾನಿ ಅವರು ಈ ಕೋಳಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ವಿಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಇದು ವೈರಲ್ ಆಗಿ ಅನೇಕರ ಮನ ಗೆದ್ದಿದೆ.
ಅನಂತ್ ಅಂಬಾನಿ ಪ್ರಸ್ತುತ ಗುಜರಾತ್‍ನಲ್ಲಿದ್ದಾರೆ. ದಿನಕ್ಕೆ 10-12 ಕಿ.ಮೀ. ದೂರ ನಡೆಯುವ ಸಾಧ್ಯತೆ ನಡೆಯುತ್ತಿದ್ದಾರೆ. ಮಾ. 28ರಂದು ಈ ಪಾದಯಾತ್ರೆಯನ್ನು ಶುರು ಮಾಡಿದ್ದು, ಅವರು ಈಗಾಗಲೇ 60 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಈ ಪಾದಯಾತ್ರೆ ಅವರ 30ನೇ ಹುಟ್ಟುಹಬ್ಬ (ಏಪ್ರಿಲ್ 10)ಕ್ಕೆ ಮುಂಚಿತವಾಗಿ ಆರಂಭಿಸಲಾಗಿದೆ. ಏಕಂದರೆ ಅನಂತ್ ಅಂಬಾನಿ ದೇವಾಲಯಕ್ಕೆ ನಡೆದುಕೊಂಡು ಹೋದ ನಂತರ ದ್ವಾರಕಾದಲ್ಲಿ ದ್ವಾರಕಾಧೀಶನ ದರ್ಶನದೊಂದಿಗೆ ತನ್ನ ಜನ್ಮದಿನವನ್ನು ಆಚರಿಸಲಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಹಸುಗಳೊಂದಿಗೆ ಪಾಪ್‍ಕಾರ್ನ್ ತಿನ್ನುತ್ತಾ ಸಿನಿಮಾ ಎಂಜಾಯ್ ಮಾಡಿದ ಭೂಪ! ವಿಡಿಯೊ ವೈರಲ್
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಿರ್ದೇಶಕರಾಗಿರುವ ಅನಂತ್ ಅಂಬಾನಿ ಪ್ರಾಣಿಗಳ ಮೇಲಿನ ಪ್ರೀತಿಗೆ ಹೆಸರುವಾಸಿ. ಅವರು ರಿಲಯನ್ಸ್ ಜಾಮ್‍ನಗರ್ ರಿಫೈನರಿ ಕಾಂಪ್ಲೆಕ್ಸ್‌ನಲ್ಲಿ ದೊಡ್ಡ ಪ್ರಮಾಣದ ಪ್ರಾಣಿ ರಕ್ಷಣಾ ಕೇಂದ್ರ ವಂತಾರವನ್ನು ಶುರು ಮಾಡಿದ್ದಾರೆ. ಇತ್ತೀಚೆಗೆ ಪಿಎಂ ಮೋದಿ ಉದ್ಘಾಟಿಸಿದ ಈ ಸಂಕೀರ್ಣವು 'ಕಾರ್ಪೊರೇಟ್' ವಿಭಾಗದಲ್ಲಿ ಭಾರತ ಸರ್ಕಾರದಿಂದ ಪ್ರಾಣಿ ಕಲ್ಯಾಣದಲ್ಲಿ ಭಾರತದ ಅತ್ಯುನ್ನತ ಗೌರವವಾದ 'ಪ್ರಾಣಿ ಮಿತ್ರ' ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ.