ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಸುಗಳೊಂದಿಗೆ ಪಾಪ್‍ಕಾರ್ನ್‌ ತಿನ್ನುತ್ತಾ ಸಿನಿಮಾ ಎಂಜಾಯ್‌ ಮಾಡಿದ ಭೂಪ! ವಿಡಿಯೊ ವೈರಲ್

ಎಲಿಯಾಸ್ ಹೆರೆರಾ ಎಂಬ ವ್ಯಕ್ತಿ ತನ್ನ ಸಾಕು ಹಸುಗಳಾದ ಬ್ರೂಸ್ ಮತ್ತು ಬಟನ್ಸ್ ಜೊತೆಯಲ್ಲಿ ಮನೆಯಲ್ಲಿ ಕುಳಿತು ಪಾಪ್‍ಕಾರ್ನ್‌ ತಿನ್ನುತ್ತಾ ಸಿನಿಮಾ ನೋಡಿದ್ದಾನೆ. ಅವನು ತನ್ನ ಎರಡು ಹಸುಗಳೊಂದಿಗೆ ಪಾಪ್‍ಕಾರ್ನ್‌ ಹಂಚಿಕೊಳ್ಳುತ್ತಿರುವ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ಹಸುಗಳ ಜೊತೆ ಸಿನಿಮಾ ಎಂಜಾಯ್‌ ಮಾಡಿದ ಭೂಪ! ವಿಡಿಯೊ ಇದೆ

Profile pavithra Apr 1, 2025 2:14 PM

ಕೆಲವರಿಗೆ ಸಾಕು ಪ್ರಾಣಿಗಳೆಂದರೆ ಬಹಳ ಇಷ್ಟ. ಹಾಗಾಗಿ ಅವರು ಅವುಗಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜನರು ತಮ್ಮ ಸಾಕುಪ್ರಾಣಿಗಳಾದ ನಾಯಿ ಮತ್ತು ಬೆಕ್ಕಿನ ಜೊತೆ ಸಿನಿಮಾ ನೋಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹಸುಗಳ ಜೊತೆಯಲ್ಲಿ ಮನೆಯಲ್ಲಿ ಕುಳಿತು ಪಾಪ್‍ಕಾರ್ನ್‌ ತಿನ್ನುತ್ತಾ ಸಿನಿಮಾ ನೋಡಿದ್ದಾನೆ. ಅಂದಹಾಗೇ, ಈತನ ಹೆಸರು ಎಲಿಯಾಸ್ ಹೆರೆರಾ ಅಂತೆ. ಆತ ತನ್ನ ಹಸುಗಳಿಗೆ ಬ್ರೂಸ್ ಮತ್ತು ಬಟನ್ಸ್ ಎಂದು ಹೆಸರಿಟ್ಟಿದ್ದು, ಅವನು ತನ್ನ ಹಾಸಿಗೆಯ ಮೇಲೆ ಕುಳಿತು ಎರಡು ಹಸುಗಳೊಂದಿಗೆ ದೊಡ್ಡ ಪಾತ್ರೆ ಪಾಪ್‍ಕಾರ್ನ್‌ ಹಂಚಿಕೊಂಡು ತಿನ್ನುವ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಎಲಿಯಾಸ್‌ ಹಾಸಿಗೆಯನ್ನು ತೆಗೆದುಕೊಂಡು ಲಿವಿಂಗ್ ಹಾಲ್‍ನ ನೆಲದ ಮೇಲೆ ಅದನ್ನು ಹರಡಿ, ಫಿಲ್ಮ ಥಿಯೇಟರ್‌ನಂತೆ ಕಾಣುವ ಹಾಗೇ ಸೆಟ್ ಮಾಡಿದ್ದಾನೆ. ಆ ವೇಳೆ ಒಂದು ಹಸು ಅವನ ಹಿಂದೆ ಮುಂದೆ ಓಡಾಡಿದೆ. ನಂತರ ಅವನು ಒಂದು ದೊಡ್ಡ ಬಾಣಲೆಯಲ್ಲಿ ಪಾಪ್‍ಕಾರ್ನ್‌ ತಂದು ತಿನ್ನುವಾಗ ಅವನ ಜೊತೆಗಿದ್ದ ಹಸು ಕೂಡ ಅದನ್ನು ತಿಂದಿದೆ. ನಂತರ ಇನ್ನೊಂದು ಹಸುವು ಅವನ ಹತ್ತಿರ ಬಂದಿದೆ. ಮೂವರು ಸೇರಿ ಒಂದೇ ಪಾತ್ರೆಯಲ್ಲಿದ್ದ ಪಾಪ್‍ಕಾರ್ನ್‌ ಹಂಚಿಕೊಂಡು ತಿಂದಿದ್ದಾರೆ.ಈ ಅಪರೂಪದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹಸುಗಳೆರಡು ಪಾಪ್‌ಕಾರ್ನ್‌ ತಿನ್ನುತ್ತಿರುವ ಸುಂದರ ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊವನ್ನು 2024 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದ್ದರೂ, ಇದು ಇತ್ತೀಚೆಗೆ ವೈರಲ್ ಆಗಿದೆ ಮತ್ತು ಈ ವಿಡಿಯೊ ಅನೇಕ ನೆಟ್ಟಿಗರ ಗಮನಸೆಳೆದಿದೆ. ಹಾಗಾಗಿ ಈ ವಿಡಿಯೊ ಇದುವರೆಗೆ 138 ಮಿಲಿಯನ್ ವ್ಯೂವ್ಸ್ ಗಳಿಸಿದೆಯಂತೆ. ವಿಶೇಷವೆಂದರೆ, ಈ ವ್ಯಕ್ತಿ ಇತ್ತೀಚೆಗೆ ಈ ವರ್ಷದ ಮಾರ್ಚ್‍ನಲ್ಲಿ ಇದೇ ರೀತಿಯ ರೀಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊದಲ್ಲಿ, ಅವನು ತನ್ನ ಸೋಫಾದ ಮೇಲೆ ಕುಳಿತು ಬ್ರೂಸ್ ಮತ್ತು ಬಟನ್ಸ್, ಎರಡು ಹಸುಗಳಿಗೆ ಸಾಕಷ್ಟು ಪಾಪ್‍ಕಾರ್ನ್‌ ತಿನ್ನಿಸಿದ್ದಾನೆ. ನೆಟ್ಟಿಗರು ಈ ದೃಶ್ಯವನ್ನು ಕಂಡು ಫುಲ್‌ ಫಿದಾ ಆಗಿದ್ದಾರೆ.

ಈ ಸುದ್ದಿಯನ್ನೂ ಓಧಿ:Viral News: ಪಾರ್ಕ್‌ನಲ್ಲಿ ಜಾಗಿಂಗ್‌ ಮಾಡ್ತಿದ್ದ ವ್ಯಕ್ತಿಯ ಮೇಲೆ ರಾಬರ್ಸ್‌ ಡೆಡ್ಲಿ ಅಟ್ಯಾಕ್‌!

ಸಾಕು ನಾಯಿಗೆ ಪಾಪ್‌ಕಾರ್ನ್‌ ತಿನ್ನಿಸಿದ ಮಹಿಳೆ!

ಮನುಷ್ಯರು ತಮ್ಮ ಸಾಕುಪ್ರಾಣಿಗಳ ಜೊತೆಗೆ ಪಾಪ್‍ಕಾರ್ನ್‌ ಹಂಚಿ ತಿನ್ನುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯನ್ನು ಖುಷಿಪಡಿಸಲು ಅದಕ್ಕಾಗಿ ಪಾಪ್‍ಕಾರ್ನ್‌ ತಯಾರಿಸಿದ್ದಾಳಂತೆ. ಇದನ್ನು ಕಂಡು ನಾಯಿ ಓಡಿ ಬಂದು ಪಾಪ್‍ಕಾರ್ನ್‌ ತಿನ್ನುತ್ತಾ ಅವಳ ಜೊತೆ ಸಿನಿಮಾ ನೋಡಿದೆ. ಇದನ್ನು ಕಂಡು ನೆಟ್ಟಿಗರು ಖುಷಿ ಪಟ್ಟಿದ್ದಾರೆ.