ಪಾಕಿಸ್ತಾನದ ಪಾರ್ಟಿ ಸಂಭ್ರಮದಲ್ಲಿ ಧುರಂದರ್ ಹಾಡಿನ ಹವಾ: ವಿಡಿಯೊ ವೈರಲ್!
Dhurandhar Movie: ಪಾಕಿಸ್ತಾನದ ಪಾರ್ಟಿ ಒಂದರಲ್ಲಿ ಧುರಂದರ್ ಸಿನಿಮಾದ ಐಕಾನಿಕ್ ಹಾಡನ್ನು ಬಳಸಿದ್ದು ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ರೀಲ್ಸ್ ಮತ್ತು ಮೇಮ್ಸ್ ನಲ್ಲಿ ಈ ಮ್ಯೂಸಿಕ್ ಫೇಮಸ್ ಆಗಿದೆ. ಅಂತೆಯೇ ಧುರಂದರ್ ಸಿನಿಮಾಕ್ಕೆ ಪಾಕಿಸ್ತಾನದಲ್ಲಿ ವಿರೋಧ ಇದ್ದರೂ ಕೂಡ ಅದರ ಮ್ಯೂಸಿಕ್ ಮಾತ್ರ ಎಲ್ಲರು ಮೆಚ್ಚಿ ಕೊಂಡಿದ್ದಾರೆ ಎಂಬುದಕ್ಕೆ ಈ ವಿಡಿಯೋ ಒಂದು ಸಾಕ್ಷಿ ಎಂದು ಹೇಳಬಹುದು.
ಧುರಂದರ್ ಸಿನಿಮಾ -
ನವದೆಹಲಿ, ಡಿ. 19: ರಣವೀರ್ ಸಿಂಗ್ ಅಭಿನಯದ ಧುರಂದರ್ ಸಿನಿಮಾ (Dhurandhar Movie) ದೊಡ್ಡ ಮಟ್ಟಿಗೆ ಯಶಸ್ಸು ಪಡೆಯುತ್ತಿದೆ. ವಿಭಿನ್ನ ಕಥೆ ಮತ್ತು ಅಭಿನಯ ದಿಂದ ಹೆಚ್ಚು ಜನಮನ ಸೆಳೆದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ. ಇದರ ಬೆನ್ನಲ್ಲೆ ಪಾಕಿಸ್ತಾನದ ಪಾರ್ಟಿ ಒಂದರಲ್ಲಿ ಧುರಂದರ್ ಸಿನಿಮಾದ ಐಕಾನಿಕ್ ಹಾಡನ್ನು ಬಳಸಿದ್ದು ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಈಗಾಗಲೇ ರೀಲ್ಸ್ ಮತ್ತು ಮೇಮ್ಸ್ ನಲ್ಲಿ ಈ ಮ್ಯೂಸಿಕ್ ಫೇಮಸ್ ಆಗಿದೆ. ಅಂತೆಯೇ ಧುರಂದರ್ ಸಿನಿಮಾಕ್ಕೆ ಪಾಕಿಸ್ತಾನದಲ್ಲಿ ವಿರೋಧ ಇದ್ದರೂ ಕೂಡ ಅದರ ಮ್ಯೂಸಿಕ್ ಮಾತ್ರ ಎಲ್ಲರು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಈ ವಿಡಿಯೋ ಒಂದು ಸಾಕ್ಷಿ ಎಂದು ಹೇಳಬಹುದು.
ಇಸ್ಲಾಮಾಬಾದ್ ನಲ್ಲಿ ಈ ಸಿನಿಮಾದ ಬಗ್ಗೆ ಭಾರೀ ನಿಷೇಧ ಹೇರಿದ್ದರೂ ಕೂಡ ಭಾರತದ ಸ್ಪೈ ಥ್ರಿಲ್ಲರ್ 'ಧುರಂಧರ್' ಸಿನಿಮಾವು ಪಾಕಿಸ್ತಾನದಲ್ಲಿ ಜನಪ್ರಿಯತೆಯ ಪಡೆಯುತ್ತಿದೆ. ಕೆಲವು ಪಾಕಿಸ್ತಾನಿ ರಾಜಕಾರಣಿಗಳು ಈ ಚಿತ್ರದಲ್ಲಿ ಕಂಡು ಬಂದ ಪಾಕಿಸ್ತಾನ ವಿರೋಧದ ನಿಲುವಿಗಾಗಿ ಮತ್ತು ದಿವಂಗತ ಬೆನಜೀರ್ ಭುಟ್ಟೋ ಅವರ ಚಿತ್ರಗಳನ್ನು ಬಳಸಿರುವುದನ್ನು ಖಂಡಿಸಿ ಕರಾಚಿ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಧುರಂಧರ್ ಚಿತ್ರದ ಪಾತ್ರವರ್ಗ ಮತ್ತು ಸಿನಿಮಾ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ನ್ಯಾಯಾಲ ಯದ ಅರ್ಜಿಯಲ್ಲಿ ಕೋರಲಾಗಿದೆ. ಈ ನಡುವೆಯೂ ಪಾಕಿಸ್ತಾನದ ಅದ್ದೂರಿ ಕಾರ್ಯಕ್ರಮ ಒಂದಕ್ಕೆ ಇದೆ ಚಿತ್ರದ ಮ್ಯೂಸಿಕ್ ಬಳಸಿರುವುದು ಮಾತ್ರ ವಿಚಿತ್ರ ಎನಿಸುವಂತಿದೆ.
ವಿಡಿಯೋ ನೋಡಿ:
On one hand Pakistani politicians are filing FIRs against Dhurandhar, on the other hand they are welcoming Bilawal Bhutto with the banger Dhurandhar song. Pakistanis won’t admit but they are addicted to Indian cinema and songs!
— Aditya Raj Kaul (@AdityaRajKaul) December 17, 2025
pic.twitter.com/BCsqykKSdm
ಪಾಕಿಸ್ತಾನದಲ್ಲಿ ಇತ್ತೀಚೆಗಷ್ಟೇ ನಡೆದ ಪಾರ್ಟಿಯಲ್ಲಿ ಧುರಂಧರ್ ಸಿನಿಮಾ ಹಾಡು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ಕೇಳಿ ಬಂದಿದೆ. ಬಹ್ರೇನ್ ಕಲಾವಿದ ನವಾಫ್ ಫಹೇದ್ ಅಕಾ ಫ್ಲಿಪ್ಪೆರಾಚಿ ಅವರ ಜನಪ್ರಿಯ ಹಾಡನ್ನು ಈ ಪಾರ್ಟಿಯಲ್ಲಿ ಬಳಸಿರುವ ದೃಶ್ಯಗಳ ವೀಡಿಯೊ ವೈರಲ್ ಆಗುತ್ತಿದೆ. ಅದೇ ಪಾರ್ಟಿಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಕೂಡ ಹಾಜರಿ ದ್ದರು ಎಂಬುದು ಅಚ್ಚರಿ ಎನಿಸಿದೆ.
ಪಾಕಿಸ್ತಾನದಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿದೆ. ಆದರೆ ಇದೆ ಸಿನಿಮಾ ಹಾಡನ್ನು ಅಲ್ಲಿನ ಪಾರ್ಟಿಗಳಿಗೆ ಬಳಸಿದ್ದು ಅದೇ ಕಾರ್ಯಕ್ರಮಕ್ಕೆ ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಅವರು ಕೂಡ ಹಾಜರಿರುವುದು ವಿಚಿತ್ರ ಎಂಬಂತಿದೆ. ವೈರಲ್ ಆದ ವಿಡಿಯೋದಲ್ಲಿ ಭುಟ್ಟೋ ಅವರು ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಿರುವ ಕ್ಲಿಪ್ ಕಾಣಬಹುದು. ಆಗಲೇ ಧುರಂಧರ್‌ನ ಸಿನಿಮಾದ ಮ್ಯೂಸಿಕ್ ಅನ್ನು ಬಳಸಲಾಗಿದ್ದನ್ನು ಕಾಣಬಹುದು.
Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?
ಈ ಹಾಡನ್ನು ಸಿನಿಮಾದಲ್ಲಿ ಅಕ್ಷಯ್ ಖನ್ನಾ ಪಾತ್ರದ ಎಂಟ್ತಿ ಸೀನ್ ಗೆ ಬಳಸಲಾಗಿದೆ. ಅವರು ಈ ಸಿನಿಮಾದಲ್ಲಿ ಕುಖ್ಯಾತ ಡಾನ್ ರೆಹಮಾನ್ ದಕೈತ್ ಆಗಿ ಕಾಣಿಸಿಕೊಂಡಿದ್ದು ನಾಯಕ ನಟನಿ ಗಿಂತಲೂ ಈ ಪಾತ್ರ ಜನಕ್ಕೆ ಬಹಳ ಇಷ್ಟವಾಗಿದೆ. 1999 ರ ಕಂದಹಾರ್ ವಿಮಾನ ಅಪಹರಣ, ಮುಂಬೈ 26/11 ದಾಳಿಗಳು ಮತ್ತು ಲಿಯಾರಿ ಗ್ಯಾಂಗ್ ಯುದ್ಧಗಳನ್ನು ಸೇರಿದಂತೆ ಅನೇಕ ಸಂಗತಿಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಪಾಕಿಸ್ತಾನದ ಸರಕಾರ ಕೂಡ ಈ ಬೇಹುಗಾರಿಕೆ ತಡೆಯುವ ಎಲ್ಲ ಪ್ರಯತ್ನ ಗಳನ್ನು ಮಾಡಿದೆ ಹಾಗಿದ್ದರೂ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಡಿಜಿಟಲ್ ಜಾಗದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ವಿಚಾರ ಕೂಡ ಸಿನಿಮಾದಲ್ಲಿ ತಿಳಿಸಲಾಗಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಐಎಸ್ಐ ಬೆಂಬಲಿತ ಭಯೋತ್ಪಾದಕ ಜಾಲಗಳನ್ನು ನಾಶಮಾಡಲು ಪಾಕಿಸ್ತಾನದ ಲಿಯಾರಿಗೆ ನುಸುಳುವ ಭಾರತೀಯ ಗೂಢಚಾರರಾದ ಹಮ್ಜಾ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.