ಹರಿಯಾಣ,ಫೆ.11: ಸಾಮಾನ್ಯವಾಗಿ ಚಿನ್ನ, ಹಣ ಇತ್ಯಾದಿ ದುಬಾರಿ ವಸ್ತುಗಳನ್ನು ಕಳ್ಳತನ ಮಾಡಿದ್ದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಆಸ್ಟ್ರೇಲಿಯಾದಿಂದ ಬಂದ ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ತುಪ್ಪ ಮತ್ತು ಜೇನುತುಪ್ಪದ ಬಾಟಲಿಗಳನ್ನು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ವ್ಯಕ್ತಿಯನ್ನು ಮೋತಿ ನಗರದ ನಿವಾಸಿ ಅಶ್ವಿನಿ ಅಲಿಯಾಸ್ ಆಶು ಭಾಟಿಯಾ ಎಂದು ಗುರುತಿಸಲಾಗಿದೆ. ಸದ್ಯ ಇದರ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಮಾರ್ ಕಂಪನಿಗೆ ಸೇರಿದ ಚಿಲ್ಲರೆ ಅಂಗಡಿಯಿಂದ ದುಬಾರಿ ಬೆಲೆಯ ದಿನಸಿ ವಸ್ತುಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾಗ ಈ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಕಳೆದ ಒಂದು ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಪ್ರವಾಸಿ ವೀಸಾದ ಮೂಲಕ ಸುತ್ತಾಡಿ ಬಂದಿದ್ದ ಈತ ಹರಿಯಾಣದ ಸದರ್ ಬಜಾರ್ ಸಮೀಪವಿರುವ ರಿಟೇಲ್ ಸ್ಟೋರ್‌ಗೆ ನುಗ್ಗಿದ್ದಾನೆ. ಆರೋಪಿಯು ಪತ್ತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಬಟ್ಟೆಯೊಳಗೆ ಹಸುವಿನ ತುಪ್ಪ, ಜೇನುತುಪ್ಪ, ಕೆಚಪ್ ಮತ್ತು ಇತರ ವಸ್ತುಗಳನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.
ವಿಡಿಯೋ ನೋಡಿ:
ಅಂಗಡಿಯೊಳಗೆ ತೆರಳಿ ಆತ ಯಾರಿಗೂ ತಿಳಿಯದಂತೆ ತನ್ನ ಪ್ಯಾಂಟ್ ಮತ್ತು ಬಟ್ಟೆಯೊಳಗೆ ಕದ್ದ ವಸ್ತುಗಳನ್ನು ಬಚ್ಚಿಟ್ಟುಕೊಂಡಿದ್ದಾನೆ. ಆದರೆ ಬಿಲ್ ಕೌಂಟರ್ ಗೆ ಹೋಗುವಾಗ ಕೇವಲ ಮ್ಯಾಗಿ ನೂಡಲ್ಸ್‌ನ ಒಂದೆ ಪ್ಯಾಕೆಟ್ ನ ಜೊತೆಗೆ ತೆರಳಿದ್ದಾನೆ. ಅವನ ಅಸಾಮಾನ್ಯ ನಡವಳಿಕೆಯು ಅನುಮಾನವ ನ್ನು ಹುಟ್ಟುಹಾಕಿದೆ.ಈ ಸಂದರ್ಭ ಅಂಗಡಿ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಸದರ್ ಬಜಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ಮಾಡುವಾಗ ಸುಮಾರು 2,500 ರೂಪಾಯಿ ಮೌಲ್ಯದ ಹಸುವಿನ ತುಪ್ಪ 500 ರೂಪಾಯಿ ಮೌಲ್ಯದ ಜೇನುತುಪ್ಪ ಮತ್ತು ಕೆಚಪ್ ಬಾಟಲಿಗಳು ಸಿಕ್ಕಿವೆ.
Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ಆರೋಪಿಯೂ ಅಂಗಡಿಯನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ ಎಂದು ಅಂಗಡಿಯ ನೌಕರರು ಬಹಿರಂಗ ಪಡಿಸಿದ್ದಾರೆ.ಅವರು ಈ ಹಿಂದೆ ಮೂರು ಬಾರಿ ಅದೇ ಅಂಗಡಿಯಿಂದ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸ ಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಈ ಹಿಂದೆ ಅವರ ಚಲನವಲನಗಳನ್ನು ದಾಖಲಿಸಿದ್ದರೂ, ಆ ಸಮಯದಲ್ಲಿ ಸಿಬ್ಬಂದಿಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಸದ್ಯ ಈ ವಿಡಿಯೊಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. "ಆಸ್ಟ್ರೇಲಿಯಾಕ್ಕೆ ಹೋಗಿ ದೊಡ್ಡ ಇಮೇಜ್ ಬೆಳೆಸಿಕೊಂಡಿದ್ದ ಈತ ಕೇವಲ ತುಪ್ಪ ಕದ್ದು ಮರ್ಯಾದೆ ಕಳೆದುಕೊಂಡಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.