ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಾಯುವ ಮುನ್ನ ರೋಲ್, ಕ್ಯಾಮರಾ, ಆ್ಯಕ್ಷನ್ ಹೇಳುತ್ತೇನೆ; ರ‍್ಯಾಪಿಡೊ ಸವಾರನ ಕಥೆಯಿದು

Rapido Rider Shares Story: ಒಂದು ಕಾಲದಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ತರಬೇತಿ ಪಡೆದ ಸಂಗೀತಗಾರರಾಗಿದ್ದ ವಿರಾಜ್ ಶ್ರೀವಾಸ್ತವ್ ಈಗ ಬೈಕ್ ಟ್ಯಾಕ್ಸಿ ಸವಾರರಾಗಿ ಕೆಲಸ ಮಾಡುತ್ತಿದ್ದಾರೆ. ರತ್ನಂ ಕಲ್ರಾ ಎಂಬ ಕಂಟೆಂಟ್ ಕ್ರಿಯೇಟರ್ ನಗರದಲ್ಲಿರ‍್ಯಾಪಿಡೊ ಸವಾರಿ ಮಾಡಿದಾಗ ಅವರ ಕಥೆ ಬೆಳಕಿಗೆ ಬಂದಿತು.

ಸಾಯುವ ಮುನ್ನ ರೋಲ್, ಕ್ಯಾಮರಾ, ಆ್ಯಕ್ಷನ್ ಹೇಳುತ್ತೇನೆ ಎಂದ ರ‍್ಯಾಪಿಡೊ ಸವಾರ

Priyanka P Priyanka P Jul 30, 2025 7:01 PM

ಮುಂಬೈ: ಮಹಾನಗರಿ ಮುಂಬೈ ಅನ್ನು ಸಾಮಾನ್ಯವಾಗಿ ಕನಸುಗಳ ನಗರಿ ಎಂದು ಕರೆಯಲಾಗುತ್ತದೆ. ಬಾಲಿವುಡ್ ಚಿತ್ರಕ್ಕಾಗಿ ಹಲವರು ಕನಸು ಕಾಣುತ್ತಿರುತ್ತಾರೆ. ಕೆಲವರು ತಮ್ಮ ಕನಸನ್ನು ಸಾಕಾರಗೊಳಿಸಿದರೆ, ಇನ್ನೂ ಕೆಲವರಿಗೆ ತಮ್ಮ ಕನಸು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇದೀಗ ಈ ರ‍್ಯಾಪಿಡೊ ಸವಾರನೊಬ್ಬನ ಕಥೆಯೂ ಇಂಥದ್ದೇ.

ಒಂದು ಕಾಲದಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ತರಬೇತಿ ಪಡೆದ ಸಂಗೀತಗಾರರಾಗಿದ್ದ ವಿರಾಜ್ ಶ್ರೀವಾಸ್ತವ್ ಈಗ ಬೈಕ್ ಟ್ಯಾಕ್ಸಿ ಸವಾರರಾಗಿ ಕೆಲಸ ಮಾಡುತ್ತಿದ್ದಾರೆ. ರತ್ನಂ ಕಲ್ರಾ ಎಂಬ ಕಂಟೆಂಟ್ ಕ್ರಿಯೇಟರ್ ನಗರದಲ್ಲಿ ರ‍್ಯಾಪಿಡೊ ಸವಾರಿ ಮಾಡಿದಾಗ ಅವರ ಕಥೆ ಬೆಳಕಿಗೆ ಬಂತು.

ಸವಾರಿಯ ಸಮಯದಲ್ಲಿ ವಿರಾಜ್, ಕಲ್ರಾ ಅವರ ಕ್ಯಾಮರಾವನ್ನು ಗಮನಿಸಿ, ನೀವು ವ್ಲಾಗ್ಗರ್ ಆಗಿದ್ದೀರಾ ಎಂದು ಕೇಳಿದರು. ಕಲ್ರಾ ಅವರು ಚಲನಚಿತ್ರ ನಿರ್ಮಾಪಕರು ಎಂದು ಉತ್ತರಿಸಿದಾಗ, ವಿರಾಜ್ ಅವರು ಸಹ ಒಂದು ಕಾಲದಲ್ಲಿ ಅಂತಹ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಒಮ್ಮೆ ತನ್ನ ಜೀವನವೂ ಹಾಗೆಯೇ ಇತ್ತು. ಆದರೆ ಎಲ್ಲವೂ ಯೋಜಿಸಿದಂತೆ ನಡೆಯಲಿಲ್ಲ ಎಂದು ಅವರು ಹಂಚಿಕೊಂಡರು.

ಕಲ್ರಾ ಅವರೊಂದಿಗೆ ಮಾತನಾಡಿದ ವಿರಾಜ್, “ಐದು ವರ್ಷಗಳ ಕಾಲ ಮುಂಬೈಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಮನೆಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಈಗ ನಾನು ಇದನ್ನು ಅರೆಕಾಲಿಕವಾಗಿ ಮಾಡುತ್ತಿದ್ದೇನೆ. ಪರಿಸ್ಥಿತಿ ಸ್ವಲ್ಪ ಕೆಟ್ಟದಾಗಿದೆ. ನನಗೆ ಡ್ರಮ್ಸ್, ಕೊಂಗಾ, ಬೊಂಗೊ, ಉಕುಲೇಲೆ ನುಡಿಸುವುದು ಹೇಗೆಂದು ತಿಳಿದಿದೆ ಮತ್ತು ನಾನು ಹಾಡುತ್ತೀನಿ ಕೂಡ. ಠುಮ್ರಿಯನ್ನೂ ಕಲಿತಿದ್ದೇನೆ. ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಿಗೆ ಎಳೆಯುತ್ತದೆ. ಆದರೆ ಸಾಯುವ ಮೊದಲು ನಾನು ಖಂಡಿತವಾಗಿಯೂ ನನ್ನ ಕನಸನ್ನು ನನಸಾಗಿಸುತ್ತೇನೆ. ನಾನು ನಿರ್ದೇಶಕರ ಕುರ್ಚಿಯ ಮೇಲೆ ಕುಳಿತು 'ರೋಲ್ ಕ್ಯಾಮೆರಾ, ಆ್ಯಕ್ಷನ್' ಎಂದು ಕೂಗುತ್ತೇನೆ” ಎಂಬುದಾಗಿ ಹೇಳಿದರು.

“ಶ್ರೀಮಂತನೊಬ್ಬನ ಮಗ ಮಾಡಬಹುದಾದ ಎಲ್ಲವನ್ನೂ ನಾನು ಜೀವನದಲ್ಲಿ ಮಾಡಿದ್ದೇನೆ. ಆದರೆ ಜೀವನವು ನನ್ನ ಯೋಜನೆಗಳೊಂದಿಗೆ ಒಪ್ಪದಿರಬಹುದು. ನಾನು ಹಠವಾದಿ. ಹಾಗಾಗಿ ನಾನು ನಿರ್ದೇಶಕನ ಕುರ್ಚಿಯ ಮೇಲೆ ಕೂರುತ್ತೇನೆ ಎಂಬ ನಂಬಿಕೆ ನನಗಿದೆ. ನಾನು ಈಗಾಗಲೇ ಜಗತ್ತನ್ನು ನೋಡಿದ್ದೇನೆ. ಆದರೆ ವಿಧಿ ನನ್ನನ್ನು ಎಲ್ಲಿಗೆ ಮತ್ತು ಯಾವಾಗ ಕರೆದೊಯ್ಯುತ್ತದೆ ಎಂಬುದು ತಿಳಿದಿಲ್ಲ” ಎಂದು ವಿರಾಜ್ ಶ್ರೀವಾಸ್ತವ್ ತಿಳಿಸಿದರು.

ಇಲ್ಲಿದೆ ವಿಡಿಯೊ:

ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಹಂಚಿಕೊಂಡ ಕಂಟೆಂಟ್ ಕ್ರಿಯೇಟರ್ ಕಲ್ರಾ, “ನಾನು ರ‍್ಯಾಪಿಡೊ ಬುಕ್ ಮಾಡಿದೆ. ನಾನು ಭೇಟಿಯಾದ ಸವಾರ ನಿಜವಾಗಿಯೂ ವಿಶೇಷ ವ್ಯಕ್ತಿ. ಅವರು ನನ್ನ ಭುಜದ ಮೇಲಿದ್ದ ಕ್ಯಾಮರಾವನ್ನು ಗಮನಿಸಿ ನಾನು ವ್ಲಾಗರ್ ಆಗಿದ್ದೇನೆಯೇ ಎಂದು ಕೇಳಿದರು. ನಾನು ಅವರಿಗೆ ನಾನು ಚಲನಚಿತ್ರ ನಿರ್ಮಾಪಕ ಎಂದು ಹೇಳಿದೆ. ನಾವು ಮಾತನಾಡಲು ಪ್ರಾರಂಭಿಸಿದೆವು. ಅವರು ಹೆಚ್ಚುವರಿ ಹಣವನ್ನು ಗಳಿಸಲು ಅರೆಕಾಲಿಕ ಕೆಲಸವಾಗಿ ಮಾಡುತ್ತಿದ್ದರು. ಆದರೆ ಅವರು ವಿಶೇಷ, ಹಠಮಾರಿ, ನಿಷ್ಠುರ ಮತ್ತು ತುಂಬಾ ಪ್ರತಿಭಾನ್ವಿತರಾಗಿದ್ದಾರೆ” ಎಂದು ಬರೆದಿದ್ದಾರೆ.