ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shobha Shetty: ಅತಿ ಹೆಚ್ಚು ಸಂಭಾವನೆ: ಬಿಗ್ ಬಾಸ್​ನಿಂದ ಶೋಭಾ ಶೆಟ್ಟಿಗೆ ಎಷ್ಟು ಹಣ ಸಿಕ್ಕಿತು ಗೊತ್ತೇ?

Shobha Shetty Bigg Boss: ಶೋಭಾ ಇತ್ತೀಚೆಗೆ ಟಿವಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅವರು ತಮ್ಮ ಗ್ಲಾಮರಸ್ ಫೋಟೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರಷ್ಟೆ.

ಬಿಗ್ ಬಾಸ್​ನಿಂದ ಶೋಭಾ ಶೆಟ್ಟಿಗೆ ಎಷ್ಟು ಹಣ ಸಿಕ್ಕಿತು ಗೊತ್ತೇ?

Shobha Shetty

Profile Vinay Bhat Jul 31, 2025 3:18 PM

ಕಿರುತೆರೆ ಸುಂದರಿ ಶೋಭಾ ಶೆಟ್ಟಿ (Shobha Shetty) ಕನ್ನಡ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರು. ಟಿವಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿ ಕಾರ್ತಿಕ ದೀಪಂನಲ್ಲಿ ಖಳನಾಯಕಿ ಮೋನಿತಾ ಪಾತ್ರದಲ್ಲಿ ನಟಿಸುವ ಮೂಲಕ ಅವರು ತೆಲುಗು ನಾಡಿನಲ್ಲಿ ಮನೆಮಾತಾದರು. ಅದೇ ಕ್ರೇಜ್‌ನೊಂದಿಗೆ, ಅವರು ತೆಲುಗು ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಬಳಿಕ ಶೋಭಾ ಅವರು ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಪ್ರವೇಶಿಸಿದರು. ಆದರೆ, ಅವರು ಇಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಅನಾರೋಗ್ಯ ಕಾರಣದಿಂದ ಅವರು ಮನೆಯಿಂದ ಹೊರಬಂದರು. ಶೋಭಾ ಇತ್ತೀಚೆಗೆ ಟಿವಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅವರು ತಮ್ಮ ಗ್ಲಾಮರಸ್ ಫೋಟೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರಷ್ಟೆ.

ಬಿಗ್ ಬಾಸ್ ಸೀಸನ್ 7 ರಿಂದ ಹೊರಬಂದ ನಂತರ, ಶೋಭಾ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಇದರ ಮಧ್ಯೆ ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದಿದೆ. ಆದರೆ ಮದುವೆಯ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ. ಈ ವರ್ಷವೇ ಮದುವೆ ನಡೆಯಲಿದೆ ಎಂದು ಇತ್ತೀಚೆಗಷ್ಟೆ ಹೇಳಿದ್ದರು. ಬಿಗ್ ಬಾಸ್ ಕನ್ನಡ ಮನೆಯಿಂದ ಹೊರಬಂದ ನಂತರ ಶೋಭಾ ಡ್ರೆಸ್ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Bhagya Lakshmi Serial: ಪೂಜಾಗೆ ಹಿಂಸೆ ಕೊಟ್ಟ ಕನ್ನಿಕಾ-ಮೀನಾಕ್ಷಿಯ ಮೈಚಳಿ ಬಿಡಿಸಿದ ಆದೀಶ್ವರ್

ತೆಲುಗು ಬಿಗ್ ಬಾಸ್​ನಲ್ಲಿ ತಮ್ಮ ಫೈರ್ ಮಾತಿನಿಂದಲೇ ಶೋಭಾ ದೊಡ್ಡ ಹೈಪ್ ಕ್ರಿಯೇಟ್ ಮಾಡಿದರು. ತೆಲುಗು ಮಾಧ್ಯಮಗಳು ಸುದ್ದಿ ಮಾಡಿದಂತೆ ಬಿಗ್ ಬಾಸ್ ತೆಲುಗು 7 ರಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ವಾರಕ್ಕೆ 1.25 ರಿಂದ 1.5 ಲಕ್ಷ ರೂ. ಗಳವರೆಗೆ ಆಫರ್ ನೀಡಲಾಗಿತ್ತಂತೆ. ಸೀಸನ್ 6ರವರೆಗಿನ ಎಲ್ಲಾ ಸ್ಪರ್ಧಿಗಳಲ್ಲಿ ಶೋಭಾಗೆ ಅತಿ ಹೆಚ್ಚು ಸಂಭಾವನೆ ನೀಡಲಾಗಿದೆಯಂತೆ.

ಇತ್ತೀಚೆಗಷ್ಟೆ ಶೋಭಾ ಅವರು ಸಂದರ್ಶನವೊಂದರಲ್ಲಿ ತಾನು ಇಷ್ಟು ಎತ್ತರಕ್ಕೆ ಬೆಳೆಯಲು ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದರು. ಒಂದು ಹಂತದಲ್ಲಿ, ನಾನು ತೆಲುಗು, ತಮಿಳು ಮತ್ತು ಕನ್ನಡ ಇಂಡಸ್ಟ್ರಿಯಲ್ಲಿ ಬ್ರೇಕ್​ ತೆಗೆದುಕೊಳ್ಳದೆ ನಿರಂತರವಾಗಿ ಕೆಲಸ ಮಾಡಿದೆ. ಆ ಸಮಯದಲ್ಲಿ ನಾನು ತುಂಬ ಬಿಜಿಯಾಗಿದ್ದೆ. ನಾನು ಮತ್ತು ನನ್ನ ತಾಯಿ, ಅದೆಷ್ಟೋ ಸಮಯ ಏರ್​ಪೋರ್ಟ್​ನಲ್ಲಿ ಮತ್ತು ಪ್ರಯಾಣದ ವೇಳೆ ಮಲಗಿದ್ದೇವೆ. ನಾನು ಯಶಸ್ಸು ಕಂಡ ಬಳಿಕ ನನ್ನ ತಾಯಿಗೆ ಚಿನ್ನದ ಸರವನ್ನು ಮಾಡಿಸಿಕೊಟ್ಟೆ ಎಂದು ಹೇಳಿಕೊಂಡಿದ್ದರು.