ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indigo Flight Issue: ಇಂಡಿಗೋ ವಿಮಾನ ರದ್ದು; ಆಹಾರ, ನೀರಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ಉಪಹಾರ ನೀಡಿದ ಬೆಂಗಳೂರು ಫ್ಲೈಟ್ ಸಿಬ್ಬಂದಿ

Viral Video: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ನೀರು ಮತ್ತು ಉಪಹಾರವನ್ನು ವಿತರಿಸುವ ಮೂಲಕ ಮಾನವೀಯ ಮೆರೆದಿರುವ ಈ ವಿಡಿಯೋವೊಂದು ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಈ ಕ್ಲಿಪ್ ಹರಿ ದಾಡುತ್ತಿದ್ದಂತೆ ಸಿಬ್ಬಂದಿಯ ಮಾನವೀಯತೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಪ್ರಯಾಣಿಕರಿಗೆ ಉಪಹಾರ ವಿತರಣೆ ಮಾಡಿದ ಸಿಬ್ಬಂದಿ

ಬೆಂಗಳೂರು, ಡಿ. 7: ಇಂಡಿಗೋ ವಿಮಾನಗಳ ರದ್ದತಿಯಿಂದ ಪ್ರಯಾಣಿಕರು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಸತತ ಐದನೇ ದಿನವೂ ಕಾರ್ಯಾಚರಣೆಯ ಅಡಚಣೆ ಗಳಿಂದಾಗಿ ವಿವಿಧ (Indigo Flight Issue) ವಿಮಾನ ನಿಲ್ದಾಣಗಳಲ್ಲಿ ಸೇವೆಗಳು ರದ್ದು ಆಗಿ ಹಲವಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಪರದಾಡುತ್ತಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ದ ಸಿಬ್ಬಂದಿ ನೀರು ಮತ್ತು ಉಪಹಾರವನ್ನು ವಿತರಿಸುವ ಮೂಲಕ ಮಾನವೀಯ ಮೆರೆದಿರುವ ಈ ವಿಡಿಯೋವೊಂದು ವೈರಲ್ (Viral Video) ಆಗಿದೆ. ಆನ್‌ಲೈನ್‌ನಲ್ಲಿ ಈ ಕ್ಲಿಪ್ ಹರಿದಾಡುತ್ತಿದ್ದಂತೆ ಸಿಬ್ಬಂದಿಯ ಮಾನವೀಯತೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಪ್ರಯಾಣಿಕರು ಆತಂಕದಲ್ಲಿದಾಗ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ತೋರಿದ ಔದಾರ್ಯವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಪ್ರಿಯಾಂಶು ತ್ಯಾಗಿ ಎಂಬ ಬಳಕೆದಾರರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ವಿಡಿಯೊದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ ಸಿಲುಕಿರುವ ಪ್ರಯಾಣಿಕರಿಗೆ ನೀರು, ತಿಂಡಿ ಮತ್ತು ಟೀ ಮತ್ತು ಕಾಫಿಯನ್ನು ವಿತರಿಸುತ್ತಿರುವುದು ಕಂಡು ಬಂದಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ 550 ವಿಮಾನಗಳ ಸಂಚಾರ ದಿಢೀರ್ ರದ್ದಾಗಿವೆ. ಆದರೂ ಇಂಡಿಗೋ ಯಾವುದೇ ಸೌಲಭ್ಯವನ್ನೂ ನೀಡಿಲ್ಲ.‌. ಇದು ಬೆಂಗಳೂರು ವಿಮಾನ ನಿಲ್ದಾಣದ ಚಿತ್ರಣ ವಾಗಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ತೊಂದರೆ ಅನುಭವಿಸುತ್ತಿರುವ‌ ಪ್ರಯಾಣಿಕರಿಗೆ ಉಪಹಾರ ನೀಡುತ್ತಿದ್ದಾರೆ " ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವಿಡಿಯೋ ನೋಡಿ:



ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಗೆ ಹ್ಯಾಟ್ ಆಫ್ ಎಂದ ನೆಟ್ಟಿಗರು ತೀವ್ರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು "ಇದು ನಮ್ಮ ಕರ್ನಾಟಕ ಜನತೆಯ ಸಂಸ್ಕೃತಿ," ಎಂದು ಬರೆದುಕೊಂಡಿದ್ದಾರೆ.

Viral Video: ಇಂಡಿಗೋ ಪ್ರಯಾಣ ರದ್ದು; ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾದ ವಿಡಿಯೋ ವೈರಲ್

ಮೊತ್ತೊಬ್ಬರು ಎಲ್ಲಾ ಪ್ರಯಾಣಿಕರಿಗೆ ವಿನಂತಿ, ದಯವಿಟ್ಟು ವಿಳಂಬ ಅಥವಾ ರದ್ದತಿಗೆ ಅಲ್ಲಿನ ಸಿಬ್ಬಂದಿಯನ್ನು ದೂಷಿ ಸುವುದನ್ನು ನಿಲ್ಲಿಸಿ..ಅವರು ನಿಮಗೆ ನಿಜವಾಗಿಯೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದೇಶಾದ್ಯಂತ ಫ್ಲೈಟ್ ರದ್ದಾದ ಕಾರಣ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಠಾತ್ತನೇ ಫ್ಲೈಟ್‌ ರದ್ದಾದ ವಿಷಯ ತಿಳಿದ ಪ್ರಯಾಣಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.