ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಂಡಿಗೋ ಪ್ರಯಾಣ ರದ್ದು; ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾದ ವಿಡಿಯೋ ವೈರಲ್

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ದೇಶದ ಹಲವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂತೆಯೇ ಇಂಡಿಗೋ (Indigo) ವಿಮಾನ ವ್ಯತ್ಯಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸು ವಂತಾಗಿದೆ. ಇಂಡಿಗೊ ಸಂಸ್ಥೆಯ ಮೇಲೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು ಬೆಂಗಳೂರು ವಿಮಾನ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಉದ್ಯಮಿಯೊಬ್ಬರು ವಿಡಿಯೋ ಮಾಡಿದ್ದು ವಿಮಾನ ಅಡಚಣೆಯಿಂದ ಉಂಟಾದ ಸಮಸ್ಯೆಗಳನ್ನು ರೆಕಾರ್ಡ್ ಮಾಡಿದ್ದಾರೆ.

ಇಂಡಿಗೋ ಪ್ರಯಾಣ ರದ್ದು: ನಿಲ್ದಾಣದಲ್ಲಿ ಪರದಾಡಿದ  ಪ್ರಯಾಣಿಕರು!

ಇಂಡಿಗೋ ಪ್ರಯಾಣ ರದ್ದು -

Profile
Pushpa Kumari Dec 5, 2025 8:21 PM

ಬೆಂಗಳೂರು: ಉದ್ಯೋಗ, ಶಿಕ್ಷಣ, ಪ್ರವಾಸ ಇತ್ಯಾದಿ ಕಾರಣಕ್ಕೆ ವಿಮಾನಯಾನ ಮಾಡುವ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್ ಬುಕ್ ಮಾಡುವ ಮುನ್ನವೇ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಸಾವಿರಕ್ಕೂ ಅಧಿಕ ಇಂಡಿಗೋ ವಿಮಾನಗಳು ರದ್ದಾಗಿದೆ. ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ದೇಶದ ಹಲವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂತೆಯೇ ಇಂಡಿಗೋ (Indigo) ವಿಮಾನ ವ್ಯತ್ಯಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇಂಡಿಗೊ ಸಂಸ್ಥೆಯ ಮೇಲೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು ಬೆಂಗಳೂರು ವಿಮಾನ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಉದ್ಯಮಿಯೊಬ್ಬರು ವಿಡಿಯೋ ಮಾಡಿದ್ದು ವಿಮಾನ ಅಡಚಣೆಯಿಂದ ಉಂಟಾದ ಸಮಸ್ಯೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಉದ್ಯಮಿ ವಿತಿಕಾ ಅಗರ್ವಾಲ್ (Vithika Agarwal) ಎನ್ನುವವರು ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಇಂಡಿಗೋ ವಿಮಾನದಲ್ಲಿ ಪ್ರಯಾಣಿ ಸುವ ಮೊದಲು ಎರಡು ಬಾರಿ ಯೋಚಿಸಿ ಎಂದು ಬರೆದುಕೊಂಡಿದ್ದಾರೆ. ನೀವು ಹೋಗಲೆ ಬೇಕು ಎಂದು ಅಂದುಕೊಂಡಿದ್ದರೆ ಕೆಲವೊಂದು ಪೂರ್ವ ಯೋಜನೆಯನ್ನು ಮಾಡಿಕೊಳ್ಳಿ ಎಂದು ಅವರು ಪೋಸ್ಟ್‌ನ ಬರೆದಿದ್ದಾರೆ. ಸದ್ಯ ಅವರ ವಿಡಿಯೋ ಆನ್ಲೈನ್ ನಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೊ ನೋಡಿ:

ನಿಲ್ದಾಣದಲ್ಲಿ ವಿಮಾನ ವಿಳಂಬ ಆಗಿದ್ದಕ್ಕೆ ಜನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆಹಾರವನ್ನು ಪಡೆಯಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಅವರ ವಿಮಾನಗಳು ಯಾವಾಗ ಟೇಕ್ ಆಫ್ ಆಗುತ್ತದೆ, ಬೇರೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆಯೇ? ಆ ವಿಮಾನ ಸಂಪೂರ್ಣ ರದ್ದಾಗಿವೆಯೇ ಎಂದು ಅವರಿಗೆ ಯಾವ ಮಾಹಿತಿಯು ತಿಳಿದಿಲ್ಲ. ಈಗಾಗಲೇ ಚೆಕ್ ಇನ್ ಮಾಡಿರುವ ಜನರು ಹೊರಹೋಗಲು ಪ್ರಯತ್ನಿಸುತ್ತಿದ್ದಾರೆ, ಅದು ಸಾಧ್ಯ ವಾಗದೆ ಇದ್ದಾಗ ಅವರು ವಿಮಾನ ನಿಲ್ದಾಣದಲ್ಲಿ ಇರಲು ಜಾಗವನ್ನು ಹುಡುಕುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದನ್ನು ಕಾಣಬಹುದು.

Viral News: ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್

ಭಾರತದ ಏರ್ ಇಂಡಿಯಾ, ಆಕಾಶ ಏರ್ ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಅಮೆಡಿಯಸ್ ಸಾಫ್ಟ್‌ ವೇರ್ ಬಳಸುವ ವಿಮಾನ ಯಾನ ಸಂಸ್ಥೆಗಳು ಮಂಗಳವಾರ ರಾತ್ರಿ ಒಂದು ಗಂಟೆ ಚೆಕ್-ಇನ್ ವ್ಯವಸ್ಥೆಯ ವೈಫಲ್ಯವನ್ನು ಎದುರಿಸಿದವು, ಇದು ವ್ಯಾಪಕ ವಿಳಂಬ ಮತ್ತು ಹೆಚ್ಚುವರಿ ರದ್ದತಿಗೆ ಮುಖ್ಯ ಕಾರಣವಾಯಿತು. ಗುರುವಾರದಂದು ದೆಹಲಿಯಿಂದ 33 ವಿಮಾನಗಳು, ಹೈದರಾ ಬಾದ್‌ನಿಂದ 68, ಮುಂಬೈನಿಂದ 85 ಮತ್ತು ಬೆಂಗಳೂರಿನಿಂದ 73 ವಿಮಾನಗಳು ರದ್ದಾಗಿವೆ. ಬುಧವಾರದಂದು ದೆಹಲಿಯಲ್ಲಿ 67, ಬೆಂಗಳೂರು 42, ಹೈದರಾಬಾದ್ 40 ಮತ್ತು ಮುಂಬೈ 33 ವಿಮಾನಗಳು ರದ್ದಾದವು. ಬುಧವಾರ 150ಕ್ಕೂ ಅಧಿಕ ವಿಮಾನಗಳ ರದ್ದತಿಯಾಗಿದ್ದು ಗುರುವಾರ ಒಂದೆ ದಿನಕ್ಕೆ 300 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ ಎಂದು ಈ ಬಗ್ಗೆ ಅಧಿಕಾರಿಯೊಬ್ಬರ ತಿಳಿಸಿದ್ದಾರೆ.

ಭಾರತದಾದ್ಯಂತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸುದ್ದಿ ಕೂಡ ವೈರಲ್ ಆಗಿದೆ. ಅದರ ಬೆನ್ನಲ್ಲೆ ಇಂಡಿಗೋ ಕಂಪೆನಿಯು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ (IndiGo CEO Pieter Elbers) ಅವರು ಈ ಬಗ್ಗೆ ಮಾತನಾಡಿ, ವಿಮಾನದಲ್ಲಿ ತಾಂತ್ರಿಕ ದೋಷಗಳು, ವೇಳಾಪಟ್ಟಿ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಯುಯಾನ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ ಇತರೆ ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ. ನಾವು ತೊಂದರೆಗೊಳಗಾದ ಗ್ರಾಹಕರ ಸಮಸ್ಯೆಗೆ ಸ್ಪಂದಿ ಸುತ್ತಿದ್ದೇವೆ. ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ