ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆ: ಆನ್‌ಲೈನ್ ಪೇಮೆಂಟ್ ಮಾಡಿಸಿ ಬೆಂಗಳೂರು ಯುವಕನಿಗೆ ಕೈಕೊಟ್ಟ ʼಬೆಳದಿಂಗಳ ಬಾಲೆʼ

Viral News: ಬೆಂಗಳೂರಿನ ಯುವಕನೊಬ್ಬ ಡೇಟಿಂಗ್ ಆ್ಯಪ್ ಬಳಸಲು ಹೋಗಿ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಆತ ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಹನ ಮಾಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆಗೆ ಒಳಗಾದ ಬೆಂಗಳೂರು ಯುವಕ

ಸಾಂದರ್ಭಿಕ ಚಿತ್ರ -

Profile
Pushpa Kumari Sep 2, 2026 10:47 PM

ಬೆಂಗಳೂರು, ಸೆ. 2: ಇತ್ತೀಚೆಗೆ ಆನ್‌ಲೈನ್ ಆ್ಯಪ್‌ಗಳ ಮೂಲಕ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರಿನ ಯುವಕನೊಬ್ಬ ಡೇಟಿಂಗ್ ಆ್ಯಪ್ (Dating App) ಬಳಸಲು ಮಾಡಲು ಹೋಗಿ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಆತ ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು (Viral News) ಡೇಟಿಂಗ್ ಅಪ್ಲಿಕೇಷನ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಹನ ಮಾಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಸೋಷಿಯಲ್ ಮೀಡಿಯಾದ ರೆಡ್ಡಿಟ್‌ನ ಗ್ರೂಪ್‌ನಲ್ಲಿ ಸಂತ್ರಸ್ತ ವ್ಯಕ್ತಿ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾನೆ. ಡೇಟಿಂಗ್ ಪ್ಲಾಟ್‌ಫಾರ್ಮ್‌ ಮೂಲಕ ಸಂತ್ರಸ್ತ ಯುವಕನಿಗೆ 'ಶೆಲ್ಲಿ' ಎಂಬ ಹೆಸರಿನ ಯುವತಿಯ ಪರಿಚಯವಾಗಿತ್ತು. ಸ್ನೇಹಿತರಾಗಿ ಇಬ್ಬರು ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಲವಾರು ದಿನಗಳ ಚಾಟ್ ಬಳಿಕ ಕೊನೆಗೆ ಇಬ್ಬರೂ ನೇರವಾಗಿ ಭೇಟಿಯಾಗಲು ನಿರ್ಧರಿಸಿದರು.

​ಆದರೆ ಭೇಟಿಯಾಗುವ ಮುನ್ನವೇ ಶೆಲ್ಲಿ ಆ ವ್ಯಕ್ತಿಗೆ ಒಂದು ಸಂದೇಶ ಕಳುಹಿಸಿದ್ದಾಳೆ. ರಾನ್ ಎಂಬ ವ್ಯಕ್ತಿಯಿಂದ ತನಗೊಂದು ಪಾರ್ಸೆಲ್ ಬರಬೇಕಿದೆ, ಅದನ್ನು ರಿಸೀವ್ ಮಾಡಿಕೊಂಡು ಆತನಿಗೆ ಆನ್‌ಲೈನ್ ಮೂಲಕ ಪೇ ಮಾಡಲು ತಿಳಿಸಿದ್ದಾಳೆ. ತಾಯಿಯ ಬಿಸಿನೆಸ್ ಉದ್ದೇಶಕ್ಕೆ ಈ ಪಾರ್ಸಲ್ ಅಗತ್ಯವಿದೆ. ತನ್ನ ಬಳಿ ಆನ್‌ಲೈನ್ ಹಣಕ್ಕಿಂತ ನಗದಷ್ಟೇ ಹೆಚ್ಚಿರುವುದರಿಂದ, ತಾನು ಭೇಟಿಯಾದಾಗ ಕ್ಯಾಶ್ ಹಿಂದಿರುಗಿಸುವುದಾಗಿ ನಂಬಿಸಿದ್ದಳು.

ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಶೆಲ್ಲಿ ನೀಡಿದ ಲೋಕೇಷನ್‌ಗೆ ತಲುಪಿದ ಸಂತ್ರಸ್ತನಿಗೆ, ಪಾರ್ಸಲ್ ಪ್ಯಾಕ್ ಆಗುತ್ತಿದೆ, ಅಲ್ಲಿಯವರೆಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸುವಂತೆ ರಾನ್ ಎನ್ನುವ ವ್ಯಕ್ತಿ ಹೇಳಿದ್ದಾನೆ. ಅಷ್ಟಕ್ಕೇ ಮುಗಿಯದೆ, ಮಧ್ಯದಲ್ಲಿ ಆತನಿಗೆ ಸಿಗರೇಟ್ ತಂದು ಕೊಡುವಂತೆಯೂ ಶೆಲ್ಲಿ ಆ ವ್ಯಕ್ತಿಗೆ ಮೆಸೇಜ್ ಮಾಡಿದ್ದಳು. ಆದರೆ, ಹಣ ಪಾವತಿಸಿ ಪಾರ್ಸಲ್ ಪಡೆದು ಹಿಂದಿರುಗಿದ ನಂತರ ಶೆಲ್ಲಿ ಮತ್ತು ರಾನ್ ಇಬ್ಬರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದು, ಇಬ್ಬರೂ ಬ್ಲಾಕ್ ಮಾಡಿದ್ದಾರೆ.

ಇಬ್ಬರೂ ಸೇರಿಕೊಂಡು ಈ ಹಣ ದೋಚಿರುವುದು ಸಂತ್ರಸ್ತನಿಗೆ ಅರಿವಾಗಿದೆ. ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಆ ಯುವಕ ತನ್ನ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಮೆಚ್ಚುಗೆ ಸೂಚಿಸಿದ್ದಾರೆ‌.​ "ಇನ್ನೊಬ್ಬರಿಗೆ ಅರಿವು ಮೂಡಿಸಲು ನಿಮ್ಮ ಅನುಭವ ಹಂಚಿಕೊಂಡಿದ್ದು ಒಳ್ಳೆಯದಾಯಿತು" ಎಂದಿದ್ದಾರೆ. ಮತ್ತೊಬ್ಬರು ಆ ಘಟನೆಯನ್ನು ವರದಿ ಮಾಡಲು ಸಲಹೆ ನೀಡಿದ್ದು, "ನೀವು ಸೈಬರ್ ಅಪರಾಧಕ್ಕಾಗಿ 1930 ನಂಬರ್‌ಗೆ ಕರೆ ಮಾಡಿʼʼ ಎಂದು ತಿಳಿಸಿದ್ದಾರೆ.