ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್; ಕಾರ್ಮಿಕರ ಕಷ್ಟದ ಜೀವನದ ಕುರಿತು ಹೇಳಿದ್ದೇನು?

ಬೆಂಗಳೂರಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ ತನ್ನ 3 ತಿಂಗಳ ಕಾಲೇಜು ರಜೆಯ ಅವಧಿಯಲ್ಲಿ ರ‍್ಯಾಪಿಡೋ ಬೈಕ್ ರೈಡರ್ ಆಗಿ ಕೆಲಸ ಮಾಡಿ, ದಿನನಿತ್ಯ ಆನ್‌ಲೈನ್ ಗಿಗ್ ವರ್ಕರ್ಸ್ ಅನುಭವಿಸುವ ಕಹಿ ಸತ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸಧ್ಯ ಈ ಪೋಸ್ಟ್‌ ಭಾರಿ ವೈರಲ್ ಆಗಿದೆ.

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 20, 2026 5:08 PM

ಬೆಂಗಳೂರು: ಕಾಲೇಜು ರಜೆ ಎಂದರೆ ಪ್ರವಾಸ, ವಿಶ್ರಾಂತಿ ಅಥವಾ ಸಿನಿಮಾ ಎಂದು ಕಾಲ ಕಳೆಯುವ ವಿದ್ಯಾರ್ಥಿಗಳ ನಡುವೆ, ಬೆಂಗಳೂರಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ ತೀರಾ ವಿಭಿನ್ನ ಹಾದಿ ತುಳಿದಿದ್ದಾನೆ. ತಮ್ಮ 3 ತಿಂಗಳ ಕಾಲೇಜು ರಜೆಯ ಅವಧಿಯಲ್ಲಿ ನಗರದಾದ್ಯಂತ ರ್ಯಾಪಿಡೋ ಬೈಕ್ ರೈಡರ್ (Rapido Bike) ಆಗಿ ಕೆಲಸ ಮಾಡಿ, ಆನ್‌ಲೈನ್ ಗಿಗ್ ವರ್ಕರ್ಸ್ ದಿನನಿತ್ಯ ಎದುರಿಸುವ ಕಹಿ ಸತ್ಯ ಹಾಗೂ ಕಷ್ಟಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ರೆಡಿಟ್ ಜಾಲತಾಣದ r/bengaluru/ (Viral News) ಕಮ್ಯುನಿಟಿಯಲ್ಲಿ ತನ್ನ ಸಂಪಾದನೆ ಹಾಗೂ ಅನುಭವಗಳ ಲೆಕ್ಕಾಚಾರವನ್ನು ಬಹಿರಂಗಪಡಿಸಿರುವ ಈ ವಿದ್ಯಾರ್ಥಿಯ ಪೋಸ್ಟ್, ಪ್ರಸ್ತುತ ನೆಟ್ಟಿಗರ ಗಮನ ಸೆಳೆದಿದೆ.

ಪ್ರತಿದಿನ 8 ಗಂಟೆ ಕೆಲಸ, ದಿನಕ್ಕೆ 1200 ರೂ ಗಳಿಕೆ

ವಿದ್ಯಾಥಿಯು ಬೆಳಿಗ್ಗೆ 8 ಗಂಟೆಗೆ ಆಪ್‌ನಲ್ಲಿ ಲಾಗ್-ಇನ್ ಆಗಿ ಸಂಜೆ 4.30 ರವರೆಗೆ ಅಂದರೆ ದಿನಕ್ಕೆ ಸುಮಾರು 8.5ಗಂಟೆಗಳ ಕಾಲ ಬೈಕ್ ಚಲಾಯಿಸುತ್ತಿದ್ದನು. ಆರಂಭದಲ್ಲಿ ಆಪ್ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯಲಿಲ್ಲಾ, ಆದರೆ ದಿನಕಳೆದಂತೆ ನಗರದಲ್ಲಿ ಯಾವ ಪ್ರದೇಶದಲ್ಲಿ ಮತ್ತು ಯಾವ ಸಮಯದಲ್ಲಿ ರೈಡರ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂಬ ಆಲ್ಗರಿದಮಮ್ ಅರಿತುಕೊಂಡೆನು. ಸಿಸ್ಟಮ್ ಅರ್ಥವಾದ ನಂತರ ದಿನಕ್ಕೆ ಸರಾಸರಿ 1200 ರೂ. ವರೆಗೆ ಗಳಿಸಲು ಸಾಧ್ಯವಾಯಿತು ಎಂದು ಹೇಳಿದ್ದಾನೆ.

ಗಿಗ್ ವರ್ಕರ್ಸ್ ಎದುರಿಸುವ ಕಷ್ಟಗಳು

ಕೇವಲ ಹಣ ಗಳಿಕೆಯಷ್ಟೇ ಅಲ್ಲದೇ, ಗಿಗ್ ಕಾರ್ಮಿಕರ ನಿಜವಾದ ಕಷ್ಟಗಳನ್ನು ಈ ವಿದ್ಯಾರ್ಥಿ ಹಂಚಿಕೊಂಡಿದ್ದಾನೆ. ‘ಗ್ರಾಹಕರು ರೈಡ್ ಕ್ಯಾನ್ಸಲ್ ಮಾಡಿದರೂ ಸಹ ಅದಕ್ಕೆ ರೈಡರ್‌ಗಳ ರೇಟಿಂಗ್‌ಗೆ ಪೆಟ್ಟು ಬೀಳುತ್ತದೆ. ಜೊತೆಗೆ ಕಸ್ಟಮರ್ ಕೇರ್ ಬೆಂಬಲಪಡೆಯುವುದು ಅತ್ಯಂತ ಕಷ್ಟಕರ’ ಎಂದು ಹೇಳಿದ್ದಾನೆ. ‘ನಗರದ ಪ್ರಮುಖ ರೈಲ್ವೆ ಸ್ಟೇಷನ್‌ಗಳ ಬಳಿ ಆಟೋ ಚಾಲಕರು ಸಮ್ಮುಖದಲ್ಲೇ ಕೆಲಸ ಮಾಡಿದರೂ ಯಾವುದೇ ಜಗಳವಾಗಿಲ್ಲ. ಆದರೆ ಗಳಿಸುವ ಆದಾಯದಲ್ಲಿ ಪೆಟ್ರೋಲ್ ಖರ್ಚು, ಬೈಕ್ ಸಮಸ್ಯೆ ಮತ್ತು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯುವ ಆಯಾಸವೇ ಹೆಚ್ಚು ಎಂದು ಹೇಳಿಕೊಂಡಿದ್ದಾನೆ.

ವಿದ್ಯಾರ್ಥಿ ಮಧ್ಯಾಹ್ನ 12 ರಿಂದ 2 ಗಂಟೆ ವರೆಗೆ ರೈಡ್‌ಗಳು ಕಡಿಮೆಯಿದ್ದಾಗ ಸ್ವೀಗಿ ಮೂಲಕ ಫುಡ್ ಡೆಲಿವರಿ ಕೂಡಾ ಮಾಡುತ್ತಿದ್ದನು. ಈ ವೇಳೆ ತನಗಾದ ಅನುಭವನ್ನು ಹೆಂಚಿಕೊಂಡಿದ್ದಾನೆ. ‘ವಿದ್ಯಾರ್ಥಿ ರ್ಯಾಪಿಡೋ ಮೂಲಕ ಸ್ವಿಗಿ ಡೆಲಿವರಿ ಆರ್ಡರ್ ಒಂದನ್ನು ಸ್ವೀಕರಿಸಿದ್ದನು ಈ ವೇಳೆ ವಿದ್ಯಾರ್ಥಿ ಐಸಕ್ರೀಮ್ ಅಂಗಡಿಗೆ ತಲುಪಿದಾಗ ಅಲ್ಲಿ ವಿದ್ಯುತ ಕಟ್ ಅಗಿತ್ತು. ಮಷಿನ್‌ಗಳು ಬಂದ್ ಆಗಿದ್ದರಿಂದ ಅಂಗಡಿಯವರು ಐಸಕ್ರೀಮ್ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆರ್ಡರ್ ಕ್ಯಾನ್ಸಲ್ ಮಾಡಲು ಅಂಗಡಿಯವರು ಸ್ವಿಗ್ಗಿಗೆ ಕರೆ ಮಾಡಲು ಹೇಳುತ್ತಾರೆ. ವಿದ್ಯಾರ್ಥಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ, ‘ನಾವು ಕ್ಯಾನ್ಸಲ್ ಮಾಡಲು ಬರುವುದಿಲ್ಲ, ನೀವು ರ್ಯಾಪಿಡೋ ಆಪ್‌ನಲ್ಲಿ ಕಂಟ್ಯಾಕ್ಟ್ ಮಾಡಿ’ ಎಂದರು. ರ್ಯಾಪಿಡೋಗೆ ಕರೆ ಮಾಡಿದರೆ ‘ಇದು ಸ್ವಿಗ್ಗಿ ಆರ್ಡರ್, ಅವರನ್ನೇ ಕೇಳಿ ಎಂದು ಕೈತೊಳೆದುಕೊಂಡರು. ಹೀಗೆ ಇಬ್ಬರ ನಡುವೆ ಸಿಲುಕಿ ಬರೋಬ್ಬರಿ 45 ನಿಮಿಷಗಳ ಕಾಲ ಆತ ರಸ್ತೆಯಲ್ಲೆ ಕಳೆಯಬೇಕಾಯಿತು. 45 ನಿಮಿಷಗಳ ನಂತರ ವಿದ್ಯಾರ್ಥಿ ಆ ಐಸಕ್ರೀಮ್ ತಲುಪಿಸಬೇಕಾಗಿದ್ದ ಸ್ಥಳ ಒಂದು ಟ್ಯೂಷನ್ ಸೆಂಟರ್ ಆಗಿದ್ದರಿಂದ, ಗೂಗಲ್ ಮ್ಯಾಪ್‌ನಲ್ಲಿ ಅದರ ಫೋನ್ ನಂಬರ್ ಹುಡುಕಿ ಕರೆ ಮಾಡಿದನು. ಬಳಿಕ ಕಸ್ಟಮರ್‌ಗೆ ಆರ್ಡರ್ ಕ್ಯಾನ್ಸಲ್ ಮಾಡಲು ಹೇಳಿ ಆ ಸಮಸ್ಯೆಯಿಂದ ಪಾರಾದೆ’ ಎಂದು ವಿದ್ಯಾರ್ಥಿ ತಾನು ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾನೆ.

Gig Workers Welfare Bill 2025: ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲೂ ಅಂಗೀಕಾರ

ವಿದ್ಯಾರ್ಥಿಯ ಅನುಭವ ಗಿಗ್ ಕಾರ್ಮಿಕರ ದಿನನಿತ್ಯದ ನಿಜವಾದ ಸ್ಥಿತಿಯಾಗಿದೆ. ವಿದ್ಯಾರ್ಥಿ ಇದನ್ನು ಕೇವಲ ತನ್ನ ಖರ್ಚಿಗಾಗಿ ಮಾಡಿದ್ದರೆ, ಕೆಲವು ಕುಟುಂಬಗಳು ಸಂಪೂರ್ಣವಾಗಿ ಇದರ ಮೇಲೆ ಅವಲಂಬಿತರಾಗಿರುತ್ತಾರೆ ಇದು ಅವರಿಗೆ ಜೀವನೋಪಾಯವಾಗಿರುತ್ತದೆ. ದಿನಕ್ಕೆ 1200 ರೂ ಸಿಕ್ಕರೂ ಪೆಟ್ರೋಲ್ ಖರ್ಚು, ಬೈಕ್ ಸಮಸ್ಯೆಗಳು, ಹಾಗೂ ದಿನಪೂರ್ತಿ ಬಿಸಿಲಿನಲ್ಲಿ ಅನುಭವಿಸುವ ಆಯಾಸವೇ ಹೆಚ್ಚಿರುತ್ತದೆ. ಜೊತೆಗೆ ತಾಂತ್ರಿಕ ಸಮಸ್ಯೆ ಎದುರಾದರೆ ಆಪ್ ಕಂಪನಿಗಳಿಂದ ಸರಿಯಾದ ಸಪೋರ್ಟ್ ಸಿಗದೇ ರೈಡರ್‌ಗಳು ಕಷ್ಟ ಅನುಭವಿಸಬೇಕಾಗುತ್ತದೆ. ಕೇವಲ ದಿನದ ಗಳಿಕೆಯನ್ನಷ್ಟೇ ನೋಡುವ ನಮಗೆ, ಈ ಪೋಸ್ಟ್ ಗಿಗ್ ವರ್ಕರ್‌ಗಳು ಪ್ರತಿದಿನ ರಸ್ತೆಯಲ್ಲಿ ಪಡುವ ಕಷ್ಟ ಕಣ್ಣೆದುರು ತಂದಿಡುತ್ತದೆ.