ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತು ಡಿವೈಡರ್ ಮೇಲೆಯೇ ಬೈಕ್ ಹತ್ತಿಸಿದ ಯುವಕ: ವೈರಲ್ ವಿಡಿಯೋಗೆ ನೆಟ್ಟಿಗರು ಗರಂ!

Viral Video: ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಟ್ರಾಫಿಕ್ ಉಲ್ಲಂಘನೆಯ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟ್ರಾಫಿಕ್ ಮಧ್ಯೆ ಇದ್ದ ಸವಾರನೊಬ್ಬ ತನ್ನ ಬೈಕನ್ನು ರಸ್ತೆಯ ಮಧ್ಯದ ಕಾಂಕ್ರೀಟ್ ಡಿವೈಡರ್ ಮೇಲೆಯೇ ಎತ್ತಿಟ್ಟು ಪಕ್ಕದ ರಸ್ತೆಗೆ ಬೈಕನ್ನು ಕೊಂಡೊಯ್ದ ವಿಡಿಯೊವೊಂದು ವೈರಲ್ ‌ಆಗಿದೆ.

ಡಿವೈಡರ್ ಮೇಲೆಯೇ ಬೈಕ್ ಹತ್ತಿಸಿದ ಯುವಕ

ಭೋಪಾಲ್,ಜ.28: ಭಾರತದ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರಿ ಹೋಗಿದೆ. ಅದರಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ್ರೂ ಇದನ್ನು ಪಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.‌ ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಟ್ರಾಫಿಕ್ ಉಲ್ಲಂಘನೆಯ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟ್ರಾಫಿಕ್ ಮಧ್ಯೆ ಇದ್ದ ಸವಾರನೊಬ್ಬ ತನ್ನ ಬೈಕನ್ನು ರಸ್ತೆಯ ಮಧ್ಯದ ಕಾಂಕ್ರೀಟ್ ಡಿವೈಡರ್ ಮೇಲೆಯೇ ಎತ್ತಿಟ್ಟು ಪಕ್ಕದ ರಸ್ತೆಗೆ ಬೈಕನ್ನು ಕೊಂಡೊಯ್ದ ವಿಡಿಯೊವೊಂದು ವೈರಲ್ (Viral Video) ‌ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿರುವ ಈ ಕ್ಲಿಪ್ ರಾತ್ರಿಯ ಸಮಯದಲ್ಲಿ ಭಾರೀ ಟ್ರಾಫಿಕ್ ನಡುವೆ ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ. ಕಾರುಗಳು ಮತ್ತು ದ್ವಿಚಕ್ರ ವಾಹನಗಳು ರಸ್ತೆಯ ಎರಡೂ ಬದಿಗಳಲ್ಲಿ ನಿಂತಿರುವ ದೃಶ್ಯ ಕಾಣಬಹುದು. ಆದರೆ ಆ ಟ್ರಾಫಿಕ್ ನಡುವೆ ಯುವಕರು ಕಾಯುವ ಬದಲು, ಡಿವೈಡರ್ ಮೇಲೆ ಬೈಕ್ ಎತ್ತಿಟ್ಟು ‌ಎದುರು ಲೇನ್‌ಗೆ ಎತ್ತುವುದನ್ನು ಕಾಣಬಹುದು.

ವಿಡಿಯೋ ನೋಡಿ:



ದೃಶ್ಯಗಳಲ್ಲಿ, ಒಬ್ಬ ವ್ಯಕ್ತಿ ತನ್ನ ಬೈಕ್ ನ ಮುಂಭಾಗದ ಚಕ್ರವನ್ನು ಡಿವೈಡರ್ ಮೇಲೆ ಎತ್ತುತ್ತಾನೆ ಮತ್ತು ಇನ್ನೊಬ್ಬನು ಹಿಂಭಾಗವನ್ನು ಸ್ಥಿರಗೊಳಿಸುತ್ತಾನೆ. ಇನ್ನೊಬ್ಬ ವ್ಯಕ್ತಿ ಬೈಕ್ ನ‌ ಇನ್ನೊಂದು ಬದಿಯಿಂದ ಎತ್ತುತ್ತಾನೆ. ರಸ್ತೆಯಲ್ಲಿರುವ ಜನರು ಇದೇ ದೃಶ್ಯವನ್ನು‌ ಗಮನಿಸುತ್ತಾ ನೋಡುತ್ತಿದ್ದಾರೆ. ಇಂತಹ ಕೆಲಸ ಮಾಡಲು ಕೂಡ ಧೈರ್ಯ ಬೇಕು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಆದರೆ ಯುವಕರ ಈ ಸಾಹಸ ರಸ್ತೆಯಲ್ಲಿದ್ದ ಇತರ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!

ಇದು ಎಷ್ಟು ಅಪಾಯಕಾರಿ ಎಂಬುದು ಎದ್ದು ಕಾಣುತ್ತದೆ. ನೇರ ಸಂಚಾರದಲ್ಲಿ ಇಡೀ ಬೈಕ್ ಅನ್ನು ಡಿವೈಡರ್ ಮೇಲೆ ಎತ್ತುವುದು ಜೀವಕ್ಕೆ ಅಪಾಯ ಎಂದಿದ್ದಾರೆ. ಮತ್ತೊಬ್ಬರು ಕೇವಲ ಐದು ನಿಮಿಷ ಉಳಿಸಲು ಹೋಗಿ ಇಂತಹ ಪ್ರಾಣಾಪಾಯದ ಕೆಲಸ ಮಾಡಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. "ಭಾರತದಲ್ಲಿ ಟ್ರಾಫಿಕ್ ನಿಯಮಗಳು ಹೇಳಲು ಅಷ್ಟೇ.. ಎಂದು ಹಲವರು ವ್ಯಂಗ್ಯವಾಡಿದ್ದಾರೆ.