ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video : ಯುನಿವರ್ಸಿಟಿ ಹಾಸ್ಟೆಲ್‌ ಊಟದಲ್ಲಿ ಬ್ಲೇಡ್‌ ಪತ್ತೆ ; ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹಾಸ್ಟೆಲ್‌ಗಳ ಊಟದಲ್ಲಿ ಒಂದಿಲ್ಲೊಂದು ದೋಷವಿರುವುದು ಸರ್ವೇ ಸಾಮಾನ್ಯ, ಆದರೆ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಹಾಸ್ಟೆಲ್ ಮೆಸ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ಆಹಾರದಲ್ಲಿ ಬ್ಲೇಡ್‌ಗಳು ಕಂಡುಬಂದಿದ್ದು, ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ. ವಿಶ್ವವಿದ್ಯಾನಿಲಯದ ಗೋದಾವರಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಯುನಿವರ್ಸಿಟಿ ಹಾಸ್ಟೆಲ್‌ ಊಟದಲ್ಲಿ ಬ್ಲೇಡ್‌ ಪತ್ತೆ !

ಊಟದಲ್ಲಿ ಬ್ಲೇಡ್‌ ಪತ್ತೆಯಾಗಿರುವುದು

Profile Vishakha Bhat Mar 12, 2025 1:07 PM

ಹೈದರಾಬಾದ್: ಹಾಸ್ಟೆಲ್‌ಗಳ ಊಟದಲ್ಲಿ ಒಂದಿಲ್ಲೊಂದು ದೋಷವಿರುವುದು ಸರ್ವೇ ಸಾಮಾನ್ಯ, ಆದರೆ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಹಾಸ್ಟೆಲ್ ಮೆಸ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ಆಹಾರದಲ್ಲಿ ಬ್ಲೇಡ್‌ಗಳು ಕಂಡುಬಂದಿದ್ದು, ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ. ವಿಶ್ವವಿದ್ಯಾನಿಲಯದ ಗೋದಾವರಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಕೇವಲ ಬ್ಲೇಡ್‌ ಮಾತ್ರವಲ್ಲದೆ ಕೀಟಗಳು ಸಹ ಕಂಡು ಬಂದಿವೆ (Viral Video) ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಆಹಾರ ನೀಡಿರುವುದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕುಲಪತಿ ಮತ್ತು ಮುಖ್ಯ ವಾರ್ಡನ್ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಅಂಬರ್‌ಪೇಟೆಯಲ್ಲಿರುವ ಮಹಿಳಾ ಹಾಸ್ಟೆಲ್ ಸಂಕೀರ್ಣದಲ್ಲಿ ಹಾಸ್ಟೆಲ್‌ನಲ್ಲಿ ನೀಡಲಾಗುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವಿದ್ಯಾರ್ಥಿಗಳು ಇದೇ ರೀತಿಯ ಪ್ರತಿಭಟನೆ ನಡೆಸಿದ್ದರು. ಊಟದಲ್ಲಿ ಹುಳುಗಳು ಕಂಡುಬಂದಿವೆ ಎಂದು ತಿಳಿದು ಬಂದಿತ್ತು. ನಿಷ್ಠ 10 ಹಾಸ್ಟೆಲ್ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ನವೆಂಬರ್ 2023 ರಿಂದ ಹಾಸ್ಟೆಲ್‌ನ ಆಹಾರದ ಸಮಸ್ಯೆ ಮುಂದುವರೆದಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಊಟದಲ್ಲಿ ಬ್ಲೇಡ್‌ ಪತ್ತೆಯಾಗಿರುವ ವಿಡಿಯೋ



ಈ ಸುದ್ದಿಯನ್ನೂ ಓದಿ: ಕಳಪೆ ಆಹಾರ: ಕೇಟರಿಂಗ್ ವ್ಯವಸ್ಥಾಪಕರಿಗೆ ಶಾಸಕರ ಕಪಾಳಮೋಕ್ಷ

ಇತ್ತೀಚೆಗೆ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಊಟದಲ್ಲಿ ಕೀಟಗಳು ಹಾಗೂ ಜಿರಲೆ ಪತ್ತೆಯಾಗಿದ್ದವು ಎಂದು ವರದಿಯಾಗಿದ್ದವು. ವಿಶ್ವವಿದ್ಯಾನಿಲಯದ ಮೆಸ್ ಮತ್ತು ಕ್ಯಾಂಟೀನ್‌ಗಳಲ್ಲಿ ಕಳಪೆ ನೈರ್ಮಲ್ಯ ಮತ್ತು ಕೀಟಗಳಿಂದ ತುಂಬಿದ ಆಹಾರದ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿವೆ. ಕಳೆದ ವರ್ಷದಲ್ಲಿ, ವಿದ್ಯಾರ್ಥಿಗಳ ಊಟದಲ್ಲಿ ಜಿರಳೆಗಳು ಮತ್ತು ಕೂದಲು ಕೂಡ ಕಂಡುಬಂದಿದ್ದವು. ಈ ಘಟನೆ ಸಂಭವಿಸಿದ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದ್ಯಸರು ಪ್ರತಿಭಟನೆ ನಡೆಸಿದ್ದರು. ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಮಹಾರಾಷ್ಟ್ರ ಮಾತ್ರವಲ್ಲದೇ ಇತರ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.