ಹತ್ತು ನಿಮಿಷದ ಡೆಲಿವರಿಗಾಗಿ ಪ್ರಾಣದ ಹಂಗು ತೊರೆದು ಸ್ಕೇಟಿಂಗ್ ಮಾಡಿದ ಬ್ಲಿಂಕಿಟ್ ಡೆಲಿವರಿ ಬಾಯ್!
Viral Video: ಉತ್ತರ ಪ್ರದೇಶದ ಮುಜಾ ಫರ್ ನಗರದಲ್ಲಿ ಬ್ಲಿಂಕಿಟ್ ಕಂಪನಿಯ ಡೆಲಿವರಿ ಬಾಯ್ ಒಬ್ಬರು ಜೀವನ ನಿರ್ವಹಣೆಗಾಗಿ ಪಡುವ ಕಷ್ಟ ಎಲ್ಲರ ಕಣ್ಣು ತೆರೆಸಿದೆ. ವಾಹನಗಳ ದಟ್ಟಣೆ ನಡುವೆಯೇ ಡೆಲಿವರಿ ಬಾಯ್ ರೋಲರ್ ಸ್ಕೇಟ್ಸ್ ಧರಿಸಿ ವೇಗವಾಗಿ ಗ್ರಾಹಕರಿಗೆ ಆಹಾರ ತಲುಪಿಸು ತ್ತಿರುವ ದೃಶ್ಯ ಭಾರೀ ವೈರಲ್ ಆಗಿದೆ.
ಅಪಾಯಕಾರಿ ಸ್ಕೇಟಿಂಗ್ ಮಾಡಿದ ಬ್ಲಿಂಕಿಟ್ ಉದ್ಯೋಗಿ -
ಮುಜಾಫರ್‌ನಗರ,ಜ.16: ನಮಗೆ ಯಾವುದೇ ಅಗತ್ಯ ವಸ್ತುಗಳು ಬೇಕು ಎಂದಾಗ ನಾವು ಆನ್ ಲೈನ್ ಮೂಲಕವೇ ಖರೀದಿ ಮಾಡುವುದು ಹೆಚ್ಚು. ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ , ಡಿಜಿಟಲ್ ಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್ ಇದ್ದು ತಕ್ಷಣವೇ ಆರ್ಡರ್ ಮಾಡಿದ ವಸ್ತುಗಳು ನಮಗೆ ತಲುಪುತ್ತವೆ. ಅಂತೆಯೇ ಉತ್ತರ ಪ್ರದೇಶದ ಮುಜಾ ಫರ್ ನಗರದಲ್ಲಿ ಬ್ಲಿಂಕಿಟ್ ಕಂಪನಿಯ ಡೆಲಿವರಿ ಬಾಯ್ ಒಬ್ಬರು ಜೀವನ ನಿರ್ವಹಣೆಗಾಗಿ ಪಡುವ ಕಷ್ಟ ಎಲ್ಲರ ಕಣ್ಣು ತೆರೆಸಿದೆ. ವಾಹನಗಳ ದಟ್ಟಣೆ ನಡುವೆಯೇ ಡೆಲಿವರಿ ಬಾಯ್ ರೋಲರ್ ಸ್ಕೇಟ್ಸ್ ಧರಿಸಿ ವೇಗವಾಗಿ ಗ್ರಾಹಕರಿಗೆ ಆಹಾರ ತಲುಪಿಸುತ್ತಿರುವ ದೃಶ್ಯ ಭಾರೀ ವೈರಲ್ (Viral Video) ಆಗಿದೆ.
ಈ ಕ್ಲಿಪ್ ಬ್ಲಿಂಕಿಟ್ ವಿತರಣಾ ಏಜೆಂಟ್ ಸಂಚಾರವನ್ನು ನಿಯಂತ್ರಿಸಲು ರೋಲರ್ ಸ್ಕೇಟ್‌ಗಳನ್ನು ಬಳಸುತ್ತಿರುವುದನ್ನು ತೋರಿಸುತ್ತದೆ. ವೀಡಿಯೊದಲ್ಲಿ, ಕಂಪನಿಯ ಸಮವಸ್ತ್ರ ಧರಿಸಿ, ಬೆನ್ನಿನ ಮೇಲೆ ವಿತರಣಾ ಬೆನ್ನುಹೊರೆಯೊಂದಿಗೆ,ಬ್ಲಿಂಕಿಟ್ ಕೆಲಸಗಾರ ಜನನಿಬಿಡ ಬೀದಿಯಲ್ಲಿ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೊ ಸೆರೆಹಿಡಿಯಲಾಗಿದೆ. ರಸ್ತೆಯ ಮಧ್ಯದಲ್ಲಿ ಆತ ಹೋಗುತ್ತಿದ್ದಂತೆ ಚಲಿಸುವ ಕಾರುಗಳು, ಬೈಕ್‌ಗಳು ಮತ್ತು ಇತರ ವಾಹನಗಳು ಹತ್ತಿರದಲ್ಲೇ ಹಾದು ಹೋಗುತ್ತವೆ. ಹತ್ತು ನಿಮಿಷದೊಳಗೆ ಆರ್ಡರ್ ತಲುಪಿಸುವ ಒತ್ತಡದಿಂದಾಗಿ ಇಂತಹ ಅಪಾಯಕಾರಿ ಸಾಹಸವನ್ನು ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ವಿಡಿಯೋ ನೋಡಿ:
हम बेवजह मुजफ्फरपुर के ट्रैफिक को गाली देते थे, अब पता चला कि Blinkit वाले मुजफ्फरपुर में 10 मिनट में डिलीवरी क्यों नहीं कर पाते हैं pic.twitter.com/wZnfkWIF9I
— Muzaffarpur (मुज़फ्फ़रपुर/𑂞𑂲𑂩𑂯𑂳𑂞) Index (@Index_Muz) January 15, 2026
ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಇದು ಬಹಳಷ್ಟು ಅಪಾಯಕಾರಿಯಾಗಿದೆ ಎಂದು ನೆಟ್ಟಿಗರು ಕಂಪನಿಯ ವಿರುದ್ದ ಕಿಡಿಕಾರಿದ್ದಾರೆ. ಸದ್ಯ ಸಾರ್ವಜನಿಕರ ಆಕ್ರೋಶ ಮತ್ತು ಸರ್ಕಾರದ ಸೂಚನೆಯ ಮೇರೆಗೆ ಬ್ಲಿಂಕಿಟ್ ತನ್ನ ಆ್ಯಪ್‌ನಲ್ಲಿ "10 ನಿಮಿಷದಲ್ಲಿ 10,000+ ಉತ್ಪನ್ನ ಗಳು" ಎಂಬ ಘೋಷ ವಾಕ್ಯವನ್ನು ಕೂಡ ರಿಮೂವ್ ಮಾಡಿದೆ. ಈಗಾಗಲೇ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಕಾರ್ಮಿಕರ ಸುರಕ್ಷತೆ ಕಾಪಾಡುವ ಬಗ್ಗೆ ಸಲಹೆ ನೀಡಿದ್ದಾರೆ.
Viral News: ದಿನನಿತ್ಯ 3.5 ಕೆಜಿ ಚಿನ್ನ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ ಖಾತಿಕ್ ಗೆ ಜೀವ ಬೆದರಿಕೆ!
ಅನೇಕ ಬಳಕೆದಾರರು ಕೆಲಸಗಾರರು ಸುರಕ್ಷತೆ ಮತ್ತು ಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಒಬ್ಬ ಬಳಕೆದಾರರು ಬ್ಲಿಕಿಟ್ ಅನ್ನು ಟ್ಯಾಗ್ ಮಾಡಿ "ಇದು ನಿಮಗೆ ತಿಳಿದಿದೆಯೇ? ನೀವು ಅದನ್ನು ಅನುಮೋದಿಸುತ್ತೀರಾ ಅಥವಾ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತೀರಾ? ಎಂದು ಬರೆದು ಕೊಂಡಿದ್ದಾರೆ.ಮತ್ತೊಬ್ಬರು "ನಮಗೆ 10 ನಿಮಿಷದಲ್ಲಿ ಆರ್ಡರ್ ಮಾಡಿದ ವಸ್ತು ಸಿಗುವುದು ಮುಖ್ಯವಲ್ಲ, ಕೆಲಸ ಮಾಡುವವರ ಜೀವವು ಕೂಡ ಮುಖ್ಯ ಎಂದು ಬರೆದುಕೊಂಡಿದ್ದಾರೆ.