ದುಬೈಯಲ್ಲಿ ಸಿಲುಕಿದ 200ಕ್ಕೂ ಹೆಚ್ಚು ಭಾರತೀಯರಿಗೆ ಆಶ್ರಯ ನೀಡಿದ ಉದ್ಯಮಿ: ಆನಂದ್ ಮಹೀಂದ್ರಾ ಮೆಚ್ಚುಗೆ
Viral Video: ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ಸಹಾಯಹಸ್ತ ನೀಡುವ ಮೂಲಕ ಯುಎಇ ಮೂಲದ ಭಾರತೀಯ ಉದ್ಯಮಿ ಧೀರಜ್ ಜೈನ್ ಗಮನ ಸೆಳೆದಿದ್ದಾರೆ. ಧೀರಜ್ ಜೈನ್ 200ಕ್ಕೂ ಹೆಚ್ಚು ಭಾರತೀಯರಿಗೆ ಉಚಿತ ಆಶ್ರಯ ಮತ್ತು ಊಟವನ್ನು ಒದಗಿಸಿದ್ದಾರೆ. ಸದ್ಯ ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರವಾಸಿಗರಿಗೆ ಆಶ್ರಯ ಒದಗಿಸಿದ ಭಾರತೀಯ ಉದ್ಯಮಿ ಧೀರಜ್ ಜೈನ್ -
ದುಬೈ, ಮಾ. 10: ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧ ಮುಂದುವರಿದಿದೆ. ಏರ್‌ಸ್ಪೇಸ್ ನಿರ್ಬಂಧ ಮತ್ತು ಭದ್ರತಾ ಕಾರಣದಿಂದ ವಿಮಾನಗಳ ಹಾರಾಟವನ್ನು ಭಾಗಶಃ ರದ್ದು ಪಡಿಸಲಾಗಿದೆ. ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ಆಶ್ರಯ ನೀಡುವ ಮೂಲಕ ಭಾರತೀಯ ಮೂಲದ ಯುಎಇ ಉದ್ಯಮಿಯೊಬ್ಬರು ಸಹಾಯಹಸ್ತ ಚಾಚಿದ್ದಾರೆ. ರಾಜಸ್ಥಾನ ಮೂಲದ ಧೀರಜ್ ಜೈನ್ (Dhiraj Jain) 200ಕ್ಕೂ ಹೆಚ್ಚು ಭಾರತೀಯರಿಗೆ ಉಚಿತ ಆಶ್ರಯ ಮತ್ತು ಆಹಾರ ಒದಗಿಸಿದ್ದಾರೆ. ಸದ್ಯ ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಶ್ಲಾಘಿಸಿದ್ದಾರೆ.
ವಿಮಾನ ಸ್ಥಗಿತದಿಂದಾಗಿ ಹೆಚ್ಚಿನವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಧೀರಜ್ ಜೈನ್ ಅಜ್ಮಾನ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಭಾರತೀಯ ಪ್ರಯಾಣಿಕರಿಗೆ ತಾತ್ಕಾಲಿಕ ಆಶ್ರಯ ಒದಗಿಸಿದ್ದಾರೆ. ಹೋಟೆಲ್ ಮತ್ತು ದುಬೈಯ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆದೊಯ್ಯಲು 11 ಕಾರುಗಳ ಸಮೂಹವನ್ನು ವ್ಯವಸ್ಥೆ ಮಾಡಿದ್ದರು. 6 ರೋಲ್ಸ್ ರಾಯ್ಸ್ ಸೇರಿದಂತೆ ಒಟ್ಟು 11 ಐಷಾರಾಮಿ ಕಾರುಗಳಲ್ಲಿ ಭಾರತೀಯರನ್ನು ಕರೆದೊಯ್ಯಲಾಯಿತು.
ವಿಡಿಯೊ ನೋಡಿ:
When recent flight disruptions left several Indian families stranded in Dubai, Dhiraj Jain opened the doors of his farmhouse and welcomed them in.
— anand mahindra (@anandmahindra) March 9, 2026
A wonderful reminder that the Indian ethos of “Atithi Devo Bhava” should travel with us wherever we go.
Sometimes all it takes is… pic.twitter.com/QNUC4PUBg1
ಇದರ ಜತೆ ಅತಿಥಿಗಳ ಆಶ್ರಯಕ್ಕೆ ಎರಡು ದೊಡ್ಡ ಸಭಾಂಗಣಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಮೈದಾನದಾದ್ಯಂತ ಟೆಂಟ್ ಮತ್ತು ಹಾಸಿಗೆಗಳನ್ನು ಅಳವಡಿಸಲಾಗಿದೆ. ಫಾರ್ಮ್‌ಹೌಸ್‌ಗೆ ಆಗಮಿಸುವ ಅತಿಥಿಗಳಿಗೆ ಮನೆಯಲ್ಲಿ ತಯಾರಿಸಿದ ಆಹಾರ ಒದಗಿಸಲಾಗಿದೆ.
ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಕೇವಲ ಆಶ್ರಯ ನೀಡುವುದಷ್ಟೇ ಅಲ್ಲದೆ, ಪ್ರಯಾಣಿಕರ ಆತಂಕ ದೂರ ಮಾಡಲು ಅಲ್ಲಿ ಯೋಗ ತರಬೇತಿ ಮತ್ತು ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಧೀರಜ್ ಜೈನ್ ಅವರ ಉದಾರ ವರ್ತನೆಯನ್ನು ಉದ್ಯಮಿ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ. ʼಅತಿಥಿ ದೇವೋಭವʼ ಎನ್ನುವ ಭಾರತೀಯ ಸಾಂಸ್ಕೃತಿಕ ಮೌಲ್ಯ ಎಲ್ಲಿಗೆ ಹೋದರೂ ನಮ್ಮೊಂದಿಗೆ ಇರುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ.