Viral Video: ಯುವಕ-ಯುವತಿಯರ ಹೊಡೆದಾಟ; ಯುವಕರು ಮಾತ್ರ ಅರೆಸ್ಟ್: ಪೊಲೀಸರ ಕ್ರಮಕ್ಕೆ ನೆಟ್ಟಿಗರು ಫುಲ್ ಗರಂ
ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿ ಮೂವರು ಯುವಕರು ಮತ್ತು ಇಬ್ಬರು ಯುವತಿಯರ ನಡುವೆ ಜಗಳ ನಡೆದಿದೆ. ಆದರೆ ಕೊನೆಗೆ ಪೊಲೀಸರು ಯುವಕರನ್ನು ಮಾತ್ರ ಬಂಧಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ತಾರತಮ್ಯ ಕಂಡು ನೆಟ್ಟಿಗರು ಗರಂ ಆಗಿದ್ದಾರೆ.


ಡೆಹ್ರಾಡೂನ್: ತಪ್ಪು ಯಾರೇ ಮಾಡಿರಬಹುದು, ಅದಕ್ಕೆ ಸರಿಯಾದ ಶಿಕ್ಷೆ ವಿಧಿಸಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವಾಗ ಹೆಣ್ಣು ಗಂಡು ಎಂಬ ತಾರತಮ್ಯ ಮಾಡಬಾರದು ಎಂಬ ವಿಚಾರ ನಮ್ಮ ಕಾನೂನಿನಲ್ಲೇ ಇದೆ. ಹೀಗಿರುವಾಗ ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿ ಮೂವರು ಯುವಕರು ಮತ್ತು ಇಬ್ಬರು ಯುವತಿಯರ ನಡುವೆ ಜಗಳ ನಡೆದಿದ್ದು, ಪೊಲೀಸರು ಯುವಕರನ್ನು ಮಾತ್ರ ಬಂಧಿಸಿದ್ದಾರೆ. ಈ ಜಗಳದ ವೀಡಿಯೊ ಹಾಗೂ ಯುವಕರನ್ನು ಅರೆಸ್ಟ್ ಮಾಡಿದ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ (Viral Video) ಆಗಿದ್ದು, ಇದರಲ್ಲಿ ನೆಟ್ಟಿಗರು ಪೊಲೀಸರ ತಾರತಮ್ಯ ಕಂಡು ಕಿಡಿಕಾರಿದ್ದಾರೆ.
ಡೆಹ್ರಾಡೂನ್‍ನ ಸಹಸ್ರಧಾರಾ ಪ್ರವಾಸಿ ತಾಣದಲ್ಲಿ ಈ ಘಟನೆ ನಡೆದಿದೆ. ವೈರಲ್ ವಿಡಿಯೊಗಳನ್ನು ಗಮನಿಸಿದ ಪೊಲೀಸರು ಇತ್ತೀಚೆಗೆ ಡೆಹ್ರಾಡೂನ್ನ ರಾಜ್‌ಪುರ್ ಪ್ರದೇಶದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಯುವಕರನ್ನು ಪ್ರಮೋದ್ ಸಿಂಗ್, ಆಕಾಶ್ ಸಿಂಗ್ ಮತ್ತು ಗೌರವ್ ರಾವತ್ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ 20ರ ಹರೆಯದವರಾಗಿದ್ದು, ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ನಿವಾಸಿಗಳು.
ಯುವಕ-ಯುವತಿಯರ ಹೊಡೆದಾಟದ ವಿಡಿಯೊ ಇಲ್ಲಿದೆ ನೋಡಿ...
देहरादून में सहस्त्रधारा के इन वीडियो में सिर्फ युवती के साथ मारपीट हो रही है? बेल्ट कौन चला रहा है? गालियां कौन दे रहा है? https://t.co/ZG9VYOGfiq pic.twitter.com/lkzUfI9Kr8
— Vishal Maheshwari (@vishalPosts) April 14, 2025
ವೈರಲ್ ವಿಡಿಯೊಗಳಲ್ಲಿ ಮೂವರು ಯುವಕರು ಮತ್ತು ಇಬ್ಬರು ಯುವತಿಯರ ನಡುವೆ ಜಗಳ ನಡೆದಿರುವುದು ಸೆರೆಯಾಗಿದೆ. ಜಗಳಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮೂವರು ಯುವಕರು ಸಹಸ್ರಧಾರಾ ಬಳಿ ಯುವತಿಯರನ್ನು ಹೊಡೆದಿದ್ದಾರೆ. ಅದರ ಜತೆಗೆ ಯುವತಿಯರು ಕೂಡ ಬೆಲ್ಟ್ ಹಿಡಿದುಕೊಂಡು ಯುವಕರಿಗೆ ಬಾರಿಸಿದ್ದಾರೆ.
ಈ ಘಟನೆಯನ್ನು ನೋಡುಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದು ನೆಟ್ಟಿಗರ ಗಮನಸೆಳೆದು ಈಗ ವೈರಲ್ ಆಗಿದೆ. ಆದರೆ ವೈರಲ್ ವಿಡಿಯೊ ಗಮನಿಸಿದ ಪೊಲೀಸರು ಯುವಕರನ್ನು ಮಾತ್ರ ರಾಜ್‌ಪುರ್ ಪೊಲೀಸ್ ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಯುವಕರನ್ನು ಬಂಧಿಸಿದ ವಿಡಿಯೊ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಈ ವಿಡಿಯೊ ನೋಡಿದ ನೆಟ್ಟಿಗರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಕೇವಲ ಮೂವರು ಯುವಕರನ್ನು ಮಾತ್ರ ಬಂಧಿಸಿದ್ದು, ಜಗಳದಲ್ಲಿ ಭಾಗಿಯಾಗಿದ್ದ ಯುವತಿಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ್ದಾರೆ. "ಯುವತಿಯನ್ನು ಥಳಿಸಿದ ಎಲ್ಲ ಮೂವರು ಯುವಕರನ್ನು ನೀವು ಬಂಧಿಸಿದ್ದೀರಿ. ಆದರೆ ಯುವಕರನ್ನು ಹೊಡೆಯುತ್ತಿರುವ ಈ ಯುವತಿಯರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ತಾರತಮ್ಯ ಏಕೆ?" ಎಂದು ಒಬ್ಬರು ಬರೆದಿದ್ದಾರೆ. "ಡೆಹ್ರಾಡೂನ್‍ನ ಸಹಸ್ರಧಾರದ ಈ ವಿಡಿಯೊಗಳಲ್ಲಿ ಯುವತಿಯರನ್ನು ಮಾತ್ರ ಹೊಡೆಯಲಾಗುತ್ತಿದೆಯೇ? ಬೆಲ್ಟ್ ಅನ್ನು ಯಾರು ಬಳಸುತ್ತಿದ್ದಾರೆ? ಯಾರು ನಿಂದಿಸುತ್ತಿದ್ದಾರೆ? ಎಂಬುದನ್ನು ಸರಿಯಾಗಿ ಗಮನಿಸಿ" ಎಂದು ಮತ್ತೊಬ್ಬ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಗೋವಾದ ರಸ್ತೆಯಲ್ಲಿ ಯುವಕರ ಪುಂಡಾಟ; ಸ್ಥಳೀಯರಿಂದ ಫುಲ್ ಕ್ಲಾಸ್- ವಿಡಿಯೊ ನೋಡಿ!
ಪೊಲೀಸ್ ಕಾಯ್ದೆಯಡಿ ಯುವಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಮೋಟಾರು ವಾಹನ ಕಾಯ್ದೆಯಡಿ ಅವರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.