ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗೋವಾದ ರಸ್ತೆಯಲ್ಲಿ ಯುವಕರ ಪುಂಡಾಟ; ಸ್ಥಳೀಯರಿಂದ ಫುಲ್‌ ಕ್ಲಾಸ್‌- ವಿಡಿಯೊ ನೋಡಿ!

ಇತ್ತೀಚೆಗೆ ಗೋವಾದ ಬೀದಿಗಳಲ್ಲಿ ಓಡಾಡಿದ್ದ ಯುವಕರ ಗುಂಪೊಂದು ರಸ್ತೆ ಬದಿಯಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ರಸ್ತೆಯ ಬದಿ ಎಸೆದು ಒಡೆದಿದ್ದಾರೆ. ಇದನ್ನು ಗಮನಿಸಿದ ಗೋವಾ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡು ಬಾಟಲಿಯ ಪೀಸ್‍ ಅನ್ನು ಹೆಕ್ಕುವಂತೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಗೋವಾದ ಬೀದಿ ಬೀದಿಯಲ್ಲಿ ಯುವಕರ ಪುಂಡಾಟ! ವಿಡಿಯೊ ಇದೆ

Profile pavithra Apr 13, 2025 5:43 PM

ಪಣಜಿ: ಮೋಜು ಮಸ್ತಿಗಾಗಿ ಕುಡಿದು ಎಲ್ಲೆಂದರಲ್ಲಿ ಆಲ್ಕೋಹಾಲ್‌ ಬಾಟಲಿಗಳನ್ನು ಎಸೆಯುವ ಪ್ರವೃತ್ತಿ ಇಂದಿನ ಯುವಜನಾಂಗದವರಲ್ಲಿ ಹೆಚ್ಚಾಗಿದೆ. ಇತ್ತೀಚೆಗೆ ಗೋವಾದ ಬೀದಿಗಳಲ್ಲಿ ಓಡಾಡಿದ್ದ ಯುವಕರ ಗುಂಪೊಂದು ರಸ್ತೆ ಬದಿಯಲ್ಲಿ ಮದ್ಯದ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುವಾಗ ಮದ್ಯ ಕುಡಿದು ರಸ್ತೆಯಲ್ಲಿ ಬಾಟಲಿಗಳನ್ನು ಎಸೆದು ಪುಡಿಮಾಡಿದ್ದಾರೆ.ಆದರೆ ಯುವಕರ ಈ ಕೃತ್ಯ ಕೆಲವು ಸ್ಥಳೀಯರನ್ನು ಕೆರಳಿಸಿದ ಕಾರಣ ಅವರ ಕೃತ್ಯಗಳನ್ನು ಖಂಡಿಸಿ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಸ್ಥಳೀಯರು ರಸ್ತೆಯಲ್ಲಿ ಬಾಟಲಿ ಎಸೆದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಕಾರನ್ನು ಮುಂದೆ ಹೋಗಲು ಬಿಡದೆ ಕೆಳಗಿಳಿದು ಅವರು ಎಸೆದ ಬಾಟಲಿಗಳ ಪೀಸ್‍ ಅನ್ನು ಹೆಕ್ಕಿ ತೆಗೆಯುವಂತೆ ಹೇಳಿದ್ದಾರೆ. ಆದರೆ ಇಬ್ಬರು ಯುವಕರು ಸ್ಥಳೀಯರ ಜೊತೆ ವಾದಕ್ಕೀಳಿದಿದ್ದಾರೆ.ಕೊನೆಗೆ ಸ್ಥಳೀಯರ ಒತ್ತಾಯಕ್ಕೆ ಮಣಿದು ಎಸೆದ ಬಾಟಲಿಯ ಪೀಸ್ ಅನ್ನು ತೆಗೆದಿದ್ದಾರೆ.

ಯುವಕರ ಪುಂಡಾಟದ ವಿಡಿಯೊ ಇಲ್ಲಿದೆ ನೋಡಿ...



ವರದಿ ಪ್ರಕಾರ, ಯುವಕರು ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಅದನ್ನು ವಿಡಿಯೊ ರೆಕಾರ್ಡ್ ಮಾಡಿ ರೀಲ್ಸ್ ತಯಾರಿಸುತ್ತಿದ್ದರಂತೆ.ಆದರೆ ಇದನ್ನು ಗಮನಿಸಿದ ಸ್ಥಳೀಯರು ಯುವಕರಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಒಬ್ಬರು, “ ಕೇವಲ ಮೋಜಿಗಾಗಿ ಅವ್ಯವಸ್ಥೆಯನ್ನು ಸೃಷ್ಟಿಸುವ ಮತ್ತು ಪ್ರಶಾಂತ ತಾಣಗಳನ್ನು ಹಾಳುಮಾಡುವ ಪ್ರವಾಸಿಗರಿಗೆ ಇದೇ ರೀತಿಯ ಟ್ರಿಟ್‌ಮೆಂಟ್‌ ನೀಡಬೇಕು” ಎಂದು ಹೇಳಿದ್ದಾರೆ. ಹಾಗೇ ಕೆಲವರು ಗೋವಾದ ಸ್ಥಳೀಯರು ಇಲ್ಲಿ ಮಾಡಿದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬಿಕಿನಿ ತೊಟ್ಟ ಮಹಿಳೆಯರನ್ನು ಕಂಡೊಡನೆ ಈತ ಮಾಡಿದ್ದೇನು ಗೊತ್ತಾ? ನೆಟ್ಟಿಗರು ಫುಲ್‌ ಗರಂ

ಈ ಹಿಂದೆ ಗೋವಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಗೋವಾ ಸರ್ಕಾರವು ಪ್ರವಾಸಿ ಸ್ಥಳಗಳಿಗೆ ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಕಠಿಣ ನಿಯಮಗಳನ್ನು ತಂದಿದೆ. ಯಾರಾದರೂ ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿತ್ತು.

ಗೋವಾ ಸರ್ಕಾರವು ಅಕ್ಟೋಬರ್ 31 2022ರಲ್ಲಿ ನಿಯಮಗಳ ಬಗ್ಗೆ ಮಾಹಿತಿ ನೀಡಿ ನೋಟಿಸ್ ನೀಡಿದೆ. ಈ ನೋಟಿಸ್ ಪ್ರಕಾರ, ಗೋವಾದಲ್ಲಿ ತೆರೆದ ಸ್ಥಳಗಳಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಯಾವುದೇ ಪ್ರವಾಸಿ ಸ್ಥಳದಲ್ಲಿ ಕಸವನ್ನು ಹಾಕುವುದು ಸಹ ನಿಷೇಧಿಸಲಾಗಿದೆ. ಇದಲ್ಲದೆ, ಸೀ ಬೀಚ್‍ನಲ್ಲಿ ವಾಹನ ಚಲಾಯಿಸುವುದು ಮತ್ತು ಮದ್ಯಪಾನ ಮಾಡಿದ ನಂತರ ಬಾಟಲಿಗಳನ್ನು ಒಡೆಯುವವರಿಗೆ ಭಾರೀ ದಂಡ ವಿಧಿಸಲಾಗುತ್ತದೆ ಎಂಬುದಾಗಿ ತಿಳಿಸಿತ್ತು.