ಬೋಳು ತಲೆಯಲ್ಲೇ ಮಂಟಪಕ್ಕೆ ಬಂದ ವಧು: ವಿಗ್‌ಗೆ ನೋ ಎಂದ ಯುವತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ
Viral Video: ಇಲ್ಲೊಬ್ಬರು ಮಹಿಳೆ ತಮ್ಮ ಮದುವೆಗೆ ಬೋಳು ತಲೆಯಲ್ಲಿಯೇ ಬಂದಿದ್ದು, ಗಮನ ಸೆಳೆದಿದೆ. ತಲೆಯಲ್ಲಿ ಕೂದಲು ಇಲ್ಲ ಎಂಬ ಕಾರಣಕ್ಕೆ ವಿಗ್ ಧರಿಸದೆ ಅಥವಾ ಹೇರ್ ಎಕ್ಸ್‌ಟೆನ್ಶನ್ ಬಳಸದೆ ಬೋಳು ತಲೆಯಲ್ಲೇ ಹಾಗೇ ಮದುವೆ ಮಂಟಪಕ್ಕೆ ಲಗ್ಗೆ ಇಟ್ಟಿದ್ದಾರೆ. ಸದ್ಯ ಇವರ ಮದುವೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೋಳು ತಲೆಯಲ್ಲೇ ಮಂಟಪಕ್ಕೆ ಬಂದ ವಧು -
ನವದೆಹಲಿ, ಜ. 1: ಸಾಮಾನ್ಯವಾಗಿ ಮದುವೆ ದಿನ ವಧು ಆಕರ್ಷಕವಾಗಿ ಕಾಣಲು ಮೇಕಪ್ ಮೊರೆ ಹೋಗುತ್ತಾಳೆ. ಕಣ್ಣಿಗೆ ಲೆನ್ಸ್, ವಿಶೇಷ ಮೇಕಪ್, ಹೇರ್ ಎಕ್ಸ್ ಟೆನ್ಶನ್, ಹೇರ್ ಸ್ಮೂಥನಿಂಗ್ ಹೀಗೆ ಶ್ರದ್ಧೆಯಿಂದ ರೆಡಿಯಾಗುತ್ತಾರೆ. ಮದುವೆಯ ದಿನ ಮುಖದ ಸೌಂದರ್ಯ ಮತ್ತಷ್ಟು ಹೆಚ್ಚಲು ಹೇರ್ ಎಕ್ಸ್‌ಟೆನ್ಶನ್ ಪೂರಕವಾಗಿದ್ದು, ಕೂದಲು ಇಲ್ಲದವರಿಗೆ ಹಾಗೂ ಕಡಿಮೆ ಕೂದಲು ಇರುವವರಿಗೆ ಈ ವಿಧಾನ ಬಹಳ ಸಹಕಾರಿ. ಆದರೆ ಇಲ್ಲೊಬ್ಬ ವಧು ಮದುವೆಗೆ ಬೋಳು ತಲೆಯಲ್ಲಿಯೇ ಬಂದು ಗಮನ ಸೆಳೆದಿದ್ದಾರೆ. ತಲೆಯಲ್ಲಿ ಕೂದಲು ಇಲ್ಲ ಎಂಬ ಕಾರಣಕ್ಕೆ ವಿಗ್ ಧರಿಸದೆ ಅಥವಾ ಹೇರ್ ಎಕ್ಸ್‌ಟೆನ್ಶನ್ ಬಳಸದೆ ಬೋಳು ತಲೆಯಲ್ಲಿ ಹಾಗೇ ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ. ಸದ್ಯ ಇವರ ಮದುವೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, (Viral Video) ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆ ಪಡೆಯುತ್ತಿದೆ.
ಮಹಿಮಾ ಘಾಯ್ ಎಂಬ ಮಹಿಳೆಗೆ ಕೂದಲು ಉದುರುವಿಕೆ ಸಮಸ್ಯೆ ಇದ್ದ ಕಾರಣ ಅನೇಕ ಮದುವೆ ಪ್ರಪೋಸಲ್ಸ್ ಗಳು ರಿಜೆಕ್ಟ್ ಆಗಿದ್ದವು. ಹೀಗಾಗಿ ಅವರು ವೈದ್ಯರ ಮೊರೆ ಹೋದರು. ಈಕೆಯನ್ನು ಪರೀಕ್ಷೆ ಮಾಡಿದ್ದ ವೈದ್ಯರು ಈಕೆಗೆ ಅಲೋಪೆಸಿಯಾ ಸಮಸ್ಯೆ ಇರುವುದಾಗಿ ತಿಳಿಸಿದ್ದಾರೆ. ಅಲೋಪೇಸಿಯಾ ಎಂದರೆ ಹಾರ್ಮೋನ್ ಬದಲಾವಣೆಯಿಂದ ನೆತ್ತಿಯ ಮೇಲಿನ ಕೂದಲು ಉದುರುವ ಸಮಸ್ಯೆಯಾಗಿದ್ದು ಸಂಪೂರ್ಣ ಬೋಳು ತಲೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮದುವೆ ವಿಚಾರದಲ್ಲಿ ಮಹಿಮಾ ಕೂಡ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.
ವಿಡಿಯೊ ನೋಡಿ:
ಕೊನೆಗೂ ಆಕೆಗೆ ಮದುವೆ ನಿಶ್ಚಯವಾಗಿದ್ದು ಆಗ ತನ್ನ ಸಮಸ್ಯೆಯನ್ನು ವರನ ಕುಟುಂಬಕ್ಕೆ ಮೊದಲೇ ಮನದಟ್ಟು ಮಾಡಿದ್ದಾರೆ. ಇದಕ್ಕೆ ವರ ಕೂಡ ಒಪ್ಪಿಗೆ ನೀಡಿದ್ದು ಇತ್ತೀಚೆಗಷ್ಟೇ ಇವರ ವಿವಾಹ ಅದ್ದೂರಿಯಾಗಿ ನೆರವೇರಿದೆ. ಈ ವಿವಾಹ ಸಮಾರಂಭದಲ್ಲಿ ಮಹಿಮಾ ತನ್ನ ಸಹಜ ಲುಕ್‌ನಿಂದಲೇ ತಯಾರಾಗಲು ಬಯಸಿದ್ದು,ಅದರಂತೆ ನಡೆದುಕೊಂಡಿದ್ದಾರೆ. ಅವರ ಈ ಒಂದು ದಿಟ್ಟ ನಿರ್ಧಾರಕ್ಕೆ ವರ ಮತ್ತು ಆತನ ಕುಟುಂಬಸಸ್ಥರು ಕೂಡ ಸಾಥ್ ನೀಡಿದ್ದಾರೆ. ಈ ಮೂಲಕ ವಧು ಮಹಿಮಾ ಬೋಳು ತಲೆಯಲ್ಲಿಯೇ ಮದುವೆ ಮಂಟಪಕ್ಕೆ ಬಂದಿದ್ದು ಈ ವಿಡಿಯೊ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?
ವಧು ಮಹಿಮಾ ತಮ್ಮ ವಿವಾಹ ಕಾರ್ಯಕ್ರಮಕ್ಕೆ ಕೆಂಪು ಸಾಂಪ್ರದಾಯಿಕ ಲೆಹೆಂಗಾ ಬಟ್ಟೆಯಲ್ಲಿ ಮಿಂಚಿದ್ದಾರೆ. ಮುಖಕ್ಕೆ ಗ್ಲಾಮರಸ್ ಮೇಕಪ್ ಮತ್ತು ಬಟ್ಟೆಗೆ ಹೋಲುವ ಆಭರಣ ಧರಿಸಿದ್ದ ಇವರು ಬಹಳ ಪ್ರಿಟಿಯಾಗಿ ಕಂಡಿದ್ದಾರೆ. ಆಕೆಯ ಆತ್ಮವಿಶ್ವಾಸ ನಿಜಕ್ಕು ಮೆಚ್ಚುವಂತದ್ದು ಎಂದು ಹಲವರು ಕೊಂಡಾಡಿದ್ದಾರೆ.
ಮಹಿಮಾ ಘಾಯ್ ಅವರದ್ದು ಸಿರಿವಂತ ಕುಟುಂಬ. ಅವರಿಗೆ ಬೇಕನಿಸಿದರೆ ಹೇರ್ ಎಕ್ಸ್‌ಟೆನ್ಶನ್, ವಿಗ್ ಬಳಸಬಹುದಿತ್ತು. ಆದರೆ ಮಹಿಮಾ ಈ ವಿಧಾನಕ್ಕೆ ಒಪ್ಪಿಗೆ ನೀಡಲಿಲ್ಲ. ಈ ಮೂಲಕ ಮದುವೆಯಾಗಲು ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯ ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಗೆ ಸೌಂದರ್ಯ ಇಲ್ಲ ಎಂದು ಕುಗ್ಗುವವರಿಗೆ ಮಹಿಮಾ ಸ್ಫೂರ್ತಿ ಇದ್ದಂತೆ. ಅವರ ಆತ್ಮವಿಶ್ವಾಸ ಮತ್ತು ಧೈರ್ಯ ಬೇರೆಯವರಿಗೆ ಮಾರ್ಗದರ್ಶನವಾಗಿದ್ದು ಅವರ ನವ ಜೀವನಕ್ಕೆ ಶುಭವಾಗಲಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.