ಬೃಹತ್ ಸರ್ಪವಾಗಿ ಬದಲಾದ ಮುಂಬೈ ಮೆಟ್ರೋ: 'ನಾಗಿನ್ 7ʼನ ವಿಭಿನ್ನ ಪ್ರಚಾರಕ್ಕೆ ಪ್ರಯಾಣಿಕರೇ ಶಾಕ್
Viral Video: ಮುಂಬೈ ಮೆಟ್ರೋ ರೈಲನ್ನು ಸಂಪೂರ್ಣವಾಗಿ 'ನಾಗಿನ್' ದೃಶ್ಯದ ಅನಿಮೇಟೆಡ್ ಚಿತ್ರದ ಮೂಲಕ ಕ್ರಿಯೇಟ್ ಮಾಡಲಾಗಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೈರಲ್ ವಿಡಿಯೊದಲ್ಲಿ ಮುಂಬೈ ಮೆಟ್ರೋ 'ನಾಗಿನ್ 7'ನ ಜಾಹೀರಾತಾಗಿ ರೂಪಾಂತರಗೊಂಡಿದ್ದು ರೈಲಿನ ಹೊರಭಾಗಕ್ಕೆ ಹಾವಿನ ಚರ್ಮದಂತಹ ವಿನ್ಯಾಸ ಮತ್ತು 'ನಾಗಿನ್ 7' ಬಣ್ಣ ಬಣ್ಣದ ಗ್ರಾಫಿಕ್ಸ್ ಹಚ್ಚಲಾಗಿದೆ.
ಮುಂಬೈ ಮೆಟ್ರೋಗೆ ನಾಗಿನ್ ಲುಕ್ -
ಮುಂಬೈ, ಜ. 1: ಕಿರುತೆರೆ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರ ಜನಪ್ರಿಯ ಹಾರರ್ ಸರಣಿ 'ನಾಗಿನ್-7' ಈಗ ವಿಭಿನ್ನ ಪ್ರಚಾರದ ಮೂಲಕ ಭಾರಿ ಸದ್ದು ಮಾಡುತ್ತಿದೆ. ಇದು ಈಗಾಗಲೇ ಆರು ಸೀಸನ್‌ಗಳ ಮೂಲಕ ವೀಕ್ಷಕರನ್ನು ಸೆಳೆದಿದ್ದು ವ್ಯಾಪಕ ಅಭಿಮಾನಿ ಬಳಗವನ್ನು ಹೊಂದಿದೆ. ಸದ್ಯ ಸೀಸನ್ 7ಕ್ಕೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಪ್ರಚಾರ ಆರಂಭವಾಗಿದ್ದು, ಮುಂಬೈ ಮೆಟ್ರೋ ಲೈನ್ 1 ಅನ್ನು ವಿಶೇಷ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ. ಸದ್ಯ ಈ ಹೊಸ ಅನಿಮೇಟೆಡ್ ಲುಕ್ ನೋಡಿ ಪ್ರಯಾಣಿಕರು ಆಘಾತ ಒಳಗಾಗಿದ್ದಾರೆ. ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಮುಂಬೈ ಮೆಟ್ರೋ ರೈಲನ್ನು ಸಂಪೂರ್ಣವಾಗಿ 'ನಾಗಿನ್' ದೃಶ್ಯದ ಅನಿಮೇಟೆಡ್ ಮೂಲಕ ಕ್ರಿಯೇಟ್ ಮಾಡಲಾಗಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೈರಲ್ ವಿಡಿಯೊದಲ್ಲಿ ಮುಂಬೈ ಮೆಟ್ರೋ 'ನಾಗಿನ್ 7' ನ ಜಾಹೀರಾತಾಗಿ ರೂಪಾಂತರಗೊಂಡಿದ್ದು, ರೈಲಿನ ಹೊರಭಾಗಕ್ಕೆ ಹಾವಿನ ಚರ್ಮದಂತಹ ವಿನ್ಯಾಸ ಮತ್ತು 'ನಾಗಿನ್ 7' ಬಣ್ಣ ಬಣ್ಣದ ಗ್ರಾಫಿಕ್ಸ್ ಹಚ್ಚಲಾಗಿದೆ. ಹಳಿಗಳ ಮೇಲೆ ರೈಲು ಹೋಗುತ್ತಿದ್ದಂತೆ ಅದು ಬೃಹತ್ ಹಾವು ಹರಿದಾಡುತ್ತಿರುವಂತೆ ಭಾಸವಾಗುತ್ತಿದ್ದು, ಇದನ್ನು ಕಂಡ ಪ್ರಯಾಣಿಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ದೂರದಿಂದ ನೋಡಿದಾಗ ಯಾವುದೋ ದೊಡ್ಡ ಅನಕೊಂಡ ಬರುತ್ತಿದೆ ಎಂಬಂತೆ ಭಾಸವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಪ್ರಯಾಣಿಕರೊಬ್ಬರು ಈ ರೈಲಿಗೆ ತಮಾಷೆಯಾಗಿ ನಾಗಲೋಕ ಎಂದು ಬಣ್ಣಿಸಿದ್ದಾರೆ. ಡಿಸೆಂಬರ್ 27ರಿಂದ ಕಲರ್ಸ್ ಟಿವಿಯಲ್ಲಿ ಈ ವೆಬ್ ಸರಣಿ ಪ್ರಸಾರವಾಗುತ್ತಿದೆ.
4 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆತನ ಆದಾಯ ಎಷ್ಟು?
ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ಚಾಹರ್ ಚೌಧರಿ ಈ ಬಾರಿ 'ಅನಂತ' ಎಂಬ ನಾಗಿನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಮಿಕ್ ಪಾಲ್ ಮತ್ತು ಇಶಾ ಸಿಂಗ್ ಮುಖ್ಯ ಪಾತ್ರದಲ್ಲಿದ್ದಾರೆ. ವಿಶೇಷವಾಗಿ ಕಳೆದ ಸೀಸನ್‌ನ ನಟಿ ತೇಜಸ್ವಿ ಪ್ರಕಾಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಾಜಿ ಟೆಲಿಫಿಲ್ಮ್ಸ್ ಮೂಲಕ ಈ ವೆಬ್ ಸರಣಿ ನಿರ್ಮಿಸಲಾಗಿದೆ. ಕೇವಲ ಮುಂಬೈ ಮಾತ್ರವಲ್ಲದೆ, ದೆಹಲಿ ಮೆಟ್ರೊದಲ್ಲೂ ಹೀಗೆ ಪ್ರಚಾರ ಮಾಡಲಾಗಿದೆ. ಸ್ವತಃ ಏಕ್ತಾ ಕಪೂರ್ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಟಿಆರ್‌ಪಿಯಲ್ಲಿ ಸದಾ ಮುಂಚೂಣಿಯಲ್ಲಿರುವ ನಾಗಿನ್ ಸರಣಿ, ಈ ಬಾರಿ ಪ್ರಚಾರದಲ್ಲೂ ಖ್ಯಾತಿ ಪಡೆಯುತ್ತಿದೆ.