ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊನೆ ಕ್ಷಣದಲ್ಲಿ ಎಐ ಬಳಸಿ ಮೆಹೆಂದಿ ವಿನ್ಯಾಸ ಆರಿಸಿದ ಮುಂಬೈ ವಧು: 'ಪರ್ಫೆಕ್ಟ್ ಡಿಸೈನ್'ಎಂದ ನೆಟ್ಟಿಗರು

Viral News: ಏನೇ ಪ್ರಶ್ನೆ, ಗೊಂದಲಗಳಿದ್ದರೂ ಕ್ಷಣಾರ್ಧದಲ್ಲಿ ಉತ್ತರಿಸುವ ಎಐ ಆಧಾರಿತ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಹೆಂದಿ ಶಾಸ್ತ್ರದ ಕೊನೆ ಕ್ಷಣದ ವೇಳೆಗೆ ಮಹಾರಾಷ್ಟ್ರದ ಮುಂಬೈ ವಧುವೊಬ್ಬರು ಚಾಟ್ ಜಿಟಿಪಿ ಬಳಸಿ ಮೆಹೆಂದಿ ಡಿಸೈನ್ ಆಯ್ಕೆ ಮಾಡಿದ್ದಾರೆ. ತಮ್ಮ ಪ್ರೇಮಕಥೆಯನ್ನು ಬಿಂಬಿಸುವ ಈ ಡಿಸೈನ್ ತನಗೆ ಸೂಕ್ತವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಎಐ ಬಳಸಿ ಮೆಹೆಂದಿ ಡಿಸೈನ್ ಆರಿಸಿದ ವಧು

ಮುಂಬೈ, ಆ. 6: ತಂತ್ರಜ್ಞಾನ ಲೋಕದಲ್ಲೇ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ವಿಚಾರ ಏನಪ್ಪ ಅಂದ್ರೆ ಅದು ಚಾಟ್ ಜಿಪಿಟಿ. ಏನೇ ಪ್ರಶ್ನೆ, ಗೊಂದಲಗಳಿದ್ದರೂ ಕ್ಷಣಾರ್ಧದಲ್ಲಿ ಉತ್ತರಿಸುವ ಎಐ ಆಧಾರಿತ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಹೆಂದಿ ಶಾಸ್ತ್ರದ ಕೊನೆ ಕ್ಷಣದ ವೇಳೆಗೆ ಮುಂಬೈ ವಧುವೊಬ್ಬರು ಚಾಟ್‌ಜಿಟಿಪಿ ಬಳಸಿ ಮೆಹೆಂದಿ ಡಿಸೈನ್ ಆಯ್ಕೆ ಮಾಡಿದ್ದಾರೆ. ತಮ್ಮ ಪ್ರೇಮ ಕಥೆಯನ್ನು ಬಿಂಬಿಸುವ ಈ ಡಿಸೈನ್ ತನಗೆ ಸೂಕ್ತವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ (Viral News) ಹೇಳಿಕೊಂಡಿದ್ದಾರೆ.

ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ ಸಾಮಾನ್ಯವಾಗಿ ಕೊನೆಯ ಕ್ಷಣದ ನಿರ್ಧಾರ, ಆಯ್ಕೆಗಳೇ ತಮಗೆ ಖುಷಿ ನೀಡುತ್ತವೆ‌. ಇದೀಗ ವಧುವೊಬ್ಬರು ಶಾಸ್ತ್ರದ ಕೊನೆ ಕ್ಷಣದಲ್ಲಿ ಮೆಹೆಂದಿ ಡಿಸೈನ್ ಯಾವುದು ಆಯ್ಕೆ ಮಾಡಬೆಕೇಂದು ಚಾಟ್‌ಜಿಪಿಟಿ ಬಳಸಿ ಡಿಸೈನ್ ರೂಪಿಸಿಕೊಂಡು ಭಾರಿ ಸುದ್ದಿಯಾಗಿದ್ದಾರೆ. ಕೆಲವೇ ನಿಮಿಷದಲ್ಲಿ ಚಾಟ್‌ಜಿಪಿಟಿ ಆಕೆಯ ಪ್ರೇಮಕಥೆ, ಕುಟುಂಬ ಮತ್ತು ಮದುವೆಯ ಥೀಮ್ ಪ್ರತಿಬಿಂಬಿಸುವ ಡಿಸೈನ್ ನೀಡಿದೆ.

ಮೆಹೆಂದಿ ಡಿಸೈನ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ಮಹಾರಾಷ್ಟ್ರದ ಮುಂಬೈಯಲ್ಲಿರುವ ಅನುಷಾ ಜೈನ್ ಇತ್ತೀಚೆಗೆ ಜೈಪುರದಲ್ಲಿ ನಡೆದ ತಮ್ಮ ವಿವಾಹ ಸಂದರ್ಭದ ಫೋಟೊ ಶೇರ್ ಮಾಡಿದ್ದಾರೆ. ಈ ವಿವರವಾದ ಡಿಸೈನ್ ಅನೇಕ ಜನರನ್ನು ಆಕರ್ಷಿಸಿದೆ. ಯುವತಿ ಮೆಹೆಂದಿ ಶಾಸ್ತ್ರದ ಸಮಯದಲ್ಲಿ ಯಾವುದೇ ಡಿಸೈನ್ ಅನ್ನು ಆಯ್ಕೆ ಮಾಡಿ ಕೊಂಡಿರಲಿಲ್ಲ. ಆದರೆ ಮೆಹೆಂದಿ ಡಿಸೈನರ್ ಬಂದು ಕೇಳಿದಾಗ ಏನು ಐಡಿಯಾ ಸಿಗದೇ ಸುಮ್ಮನಾಗಿದ್ದರು.

ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ

ಆದರೆ ಅನುಷಾ ಅವರ ಅಣ್ಣ ಕೊನೆ ಕ್ಷಣದಲ್ಲಿ ಚಾಟ್‌ಜಿಪಿಟಿ ಬಳಸಲು ಸಲಹೆ ನೀಡಿದ್ದಾರೆ. ಕೊನೆಗೆ ಅವರು ಜೋಡಿಯ ವಿವರಗಳನ್ನು ಎಐಯಲ್ಲಿ ನಮೂದಿಸಿದರು. ಅನುಷಾ ಮುಂಬೈಯವರು, ಅವರ ಪತಿ ಜೈಪುರದವರು. ಇಬ್ಬರೂ ಇಷ್ಟ ಪಡುವ ಆಹಾರ, ಮದುವೆಯ ಥೀಮ್, ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ.

​ಚಾಟ್‌ಜಿಪಿಟಿ ಕೆಲವೇ ಸೆಕೆಂಡುಗಳಲ್ಲಿ ವಿಶಿಷ್ಟಡಿಸೈನ್‌ ನೀಡಿದೆ. ಮುಂಬೈಯನ್ನು ಪ್ರತಿನಿಧಿಸಲು ಒಂದು ಆಟೋ-ರಿಕ್ಷಾ ಹಾಗೂ ಜೈಪುರ ಪ್ರತಿನಿಧಿಸಲು ಆನೆ. ಪ್ರಯಾಣವನ್ನು ಸೂಚಿಸಲು ಮುಂಬೈ ವಿಮಾನ ನಿಲ್ದಾಣ ​ಹಾಗೂ ಎರಡೂ ಕುಟುಂಬದವರ ಹೆಸರುಗಳಿದ್ದ ಪದಗಳನ್ನು ನೀಡಿದೆ. ಎಐ ನೀಡಿದ ಡಿಸೈನ್ ಮೂಲಕ ಮೆಹಂದಿ ಕಲಾವಿದೆ ಅತ್ಯಂತ ನೈಜವಾಗಿ ಕೈಗಳ ಮೇಲೆ ಬಿಡಿಸಿದ್ದು ಭಾರಿ ಅಂದವಾಗಿ ಮೂಡಿ ಬಂದಿದೆ. ನೆಟ್ಟಿಗರು ಈ ಕ್ರಿಯಾಶೀಲತೆಗೆ ಮೆಚ್ಚುಗೆ ನೀಡಿದ್ದು ಬಳಕೆದಾರರೊಬ್ಬರು ಎಐ ಐಡಿಯಾ ನೀಡಿದರೂ ಈ ಕ್ರೆಡಿಟ್ ಮೆಹೆಂದಿ ಡಿಸೈನರ್‌ಗೆ ಸಲ್ಲಬೇಕು ಎಂದಿದ್ದಾರೆ.