ಬಕ್ರೀದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡ್ತಿವೆ 'ಡೊನಾಲ್ಡ್ ಟ್ರಂಪ್', 'ನೆತನ್ಯಾಹು' ಎಮ್ಮೆಗಳು!
Viral News: ವಿಶ್ವದ ಎರಡು ಪ್ರಮುಖ ನಾಯಕರಾದ ಡೊನಾಲ್ಡ್ ಟ್ರಂಪ್ ಹಾಗೂ ಬೆಂಜಮಿನ್ ನೆತನ್ಯಾಹು ಹೋಲುವ ಎರಡು ದೈತ್ಯ ಎಮ್ಮೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ಈ ವಿಶೇಷ ವಿನ್ಯಾಸದ ಎಮ್ಮೆಗಳನ್ನು ವೀಕ್ಷಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ.
ರಾಷ್ಟ್ರ ನಾಯಕರನ್ನು ಹೋಲುವ ಎಮ್ಮೆಗಳು -
ಢಾಕಾ, ಮೇ 17: ಬಾಂಗ್ಲಾದೇಶ ಬಕ್ರೀದ್ ಹಬ್ಬಕ್ಕೆ ಸಜ್ಜಾಗುತ್ತಿದೆ. ಈ ನಡುವೆ ಜಾನುವಾರು ಕ್ಷೇತ್ರದಲ್ಲಿ ಹೊಸ ಪ್ರಯೋಗ ಮುನ್ನಲೆಗೆ ಬಂದಿದೆ. ವಿಶ್ವದ ಎರಡು ಪ್ರಮುಖ ನಾಯಕರಾದ ಡೊನಾಲ್ಡ್ ಟ್ರಂಪ್ ಹಾಗೂ ಬೆಂಜಮಿನ್ ನೆತನ್ಯಾಹು ಹೋಲುವ ಎರಡು ದೈತ್ಯ ಎಮ್ಮೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿವೆ. ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ಈ ವಿಶೇಷ ವಿನ್ಯಾಸದ ಎಮ್ಮೆಗಳನ್ನು ವೀಕ್ಷಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ.
ಢಾಕಾದಲ್ಲಿ ಸಂದರ್ಶಕರು, ಛಾಯಾಗ್ರಾಹಕರು ಮತ್ತು ವೀಕ್ಷಕರನ್ನು ಈ ಎಮ್ಮೆಗಳು ಬಹಳಷ್ಟು ಆಕರ್ಷಿಸುತ್ತಿವೆ. ಇಲ್ಲಿನ ಎಮ್ಮೆಗಳು ವಿಶ್ವ ನಾಯಕರಾದ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರನ್ನೇ ಹೋಲುತ್ತವೆ. ಸುಮಾರು 700 ಕಿಲೋ ಗ್ರಾಂಗಳಷ್ಟು ತೂಕದ ಆಲ್ಬಿನೋ ಎಮ್ಮೆಗೆ ಸಂದರ್ಶಕರು ಡೊನಾಲ್ಡ್ ಟ್ರಂಪ್ ಎಂದು ಅಡ್ಡಹೆಸರು ಇಟ್ಟಿದ್ದಾರೆ.
ವಿಡಿಯೊ ನೋಡಿ:
A buffalo in Bangladesh has gone viral ahead of Eid al-Adha after being nicknamed “Donald Trump” due to its unusual resemblance to the US President.
— • (@Alhamdhulillaah) May 11, 2026
Weighing around 700kg, the buffalo was raised on a local farm in Narayanganj. It was fed a nutritious diet consisting of corn,… pic.twitter.com/VpdCrUFa2J
ಮಸುಕಾದ ಚರ್ಮ ಮತ್ತು ತಿಳಿ ಬಣ್ಣದ ಕೂದಲು, ಅಮೆರಿಕದ ಅಧ್ಯಕ್ಷ ಎಂದು ಗುರುತಿಸಬಹುದಾದ ಕೇಶ ವಿನ್ಯಾಸದೊಂದಿಗೆ ಇದನ್ನು ಅಲಂಕರಿಸಲಾಗಿದೆ. ಕೇಶ ವಿನ್ಯಾಸವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಹೇರ್‌ಸ್ಟೈಲ್ ಅನ್ನು ಹೋಲುತ್ತದೆ. ಇದು ನೋಡಲು ಗಾಂಭೀರ್ಯವಾಗಿದ್ದರೂ ಈ ಎಮ್ಮೆ ಬಹಳ ಶಾಂತ ಸ್ವಭಾವದಿಂದ ಇದೆ.
ನಾರಾಯಣಗಂಜ್‌ನಲ್ಲಿ ಮತ್ತೊಂದು ಎಮ್ಮೆ ಗಮನ ಸೆಳೆದಿದೆ. 750 ಕಿಲೋ ಗ್ರಾಂಗಳಿಗಿಂತ ಹೆಚ್ಚು ತೂಕವಿರುವ ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹೋಲುತ್ತದೆ. ಈ ಎಮ್ಮೆಯ ಬಲಿಷ್ಠ ದೇಹ ವಿನ್ಯಾಸ ಮತ್ತು ಕಣ್ಣುಗಳಿಂದ ನೆತನ್ಯಾಹು ಅವರನ್ನು ಹೋಲುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಅನೇಕ ಸಂದರ್ಶಕರು ಪ್ರಾಣಿಯನ್ನು ವೈಯಕ್ತಿಕವಾಗಿ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಎರಡು ಎಮ್ಮೆಗಳ ಸ್ವಭಾವಗಳು ವಿಭಿನ್ನವಾಗಿದ್ದು ಒಂದು ಶಾಂತ ಸ್ವಭಾವದದ್ದಾದರೆ ಇನ್ನೊಂದು ಹೆಚ್ಚು ವಿಕೋಪ ವರ್ತನೆ ತೋರುತ್ತದೆ. ಇದಕ್ಕೆ ಆಹಾರ ನೀಡಲು ಹೋದಾಗಲೂ ಜೋರಾಗಿ ಉಸಿರು ಬಿಡುತ್ತಾ, ಕೋಪದಿಂದ ವರ್ತಿಸುತ್ತದೆ. ಬಕ್ರೀದ್ ಹಬ್ಬದ ಪ್ರಯುಕ್ತ ಬಾಂಗ್ಲಾದೇಶದಲ್ಲಿ ಜಾನುವಾರುಗಳ ವ್ಯಾಪಾರ ಸಾಮಾನ್ಯ. ಆದರೆ ಈ ಬಾರಿ ಇವುಗಳ ಹವಾ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ತ್ಯಾಗದ ಹಬ್ಬ ಎಂದೂ ಕರೆಯಲ್ಪಡುವ ಬಕ್ರೀದ್ ಅತ್ಯಂತ ಮಹತ್ವದ ಇಸ್ಲಾಮಿಕ್ ಆಚರಣೆಗಳಲ್ಲಿ ಒಂದು. ಈ ವೇಳೆ ಜನ ಸಾಮಾನ್ಯರು ಸಾಂಪ್ರದಾಯಿಕವಾಗಿ ಹಸು, ಕುರಿಗಳು ಮತ್ತು ಎಮ್ಮೆಗಳಂತಹ ಪ್ರಾಣಿಗಳನ್ನು ಧಾರ್ಮಿಕ ಬಲಿಗಾಗಿ ಖರೀದಿಸುತ್ತಾರೆ.