ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾಫಿಯನ್ನೂ ಹೀಗೂ ತಯಾರಿಸ್ಬೋದಾ? ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಶಾಕ್‌!

ಕಂಟೆಂಟ್ ಕ್ರಿಯೇಟರ್ ಕ್ಯಾಲ್ವಿನ್ ಲೀ ಕಾಫಿಗೆ ಬೇಯಿಸಿದ ಬೀನ್ಸ್ ಅನ್ನು ಸೇರಿಸಿ ಕುಡಿದಿದ್ದಾನೆ. ಈ ವಿಚಿತ್ರ ಪಾಕವಿಧಾನದ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದು, ಇದನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ವಿಚಿತ್ರವಾದ ಕಾಫಿ ಮೇಕಿಂಗ್‌ ವಿಡಿಯೊ ಫುಲ್‌ ವೈರಲ್

Profile pavithra Feb 15, 2025 11:39 AM

ಕಾಫಿ ಎಂದರೆ ಹಲವರಿಗೆ ತುಂಬಾ ಇಷ್ಟ. ಹಾಗಾಗಿ ಹೆಚ್ಚಿನ ಜನರು ತಮ್ಮ ದಿನವನ್ನು ಕಾಫಿ ಕುಡಿಯುವ ಮೂಲಕ ಶುರುಮಾಡುತ್ತಾರೆ. ಹಾಗೇ ಕೆಲವು ಕಾಫಿ ಪ್ರಿಯರು ತಮ್ಮ ಕಾಫಿಯನ್ನು ವಿಭಿನ್ನವಾದ ರುಚಿಯೊಂದಿಗೆ ತಯಾರಿಸಲು ಬಯಸುತ್ತಾರೆ. ಅದೇರೀತಿ ಇದೀಗ ಸಿಂಗಾಪುರದ ವ್ಯಕ್ತಿಯೊಬ್ಬ ಕಾಫಿಗೆ ವಿಚಿತ್ರವಾದ ಪದಾರ್ಥವನ್ನು ಸೇರಿಸಿ ಅದರ ರುಚಿಯನ್ನು ಸವಿದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆ ಸಿಂಗಾಪುರದ ವ್ಯಕ್ತಿ ತನ್ನ ಕಾಫಿಗೆ ಬೇಯಿಸಿದ ಬೀನ್ಸ್ ಅನ್ನು ಸೇರಿಸಿದ್ದಾನೆ. ಇದನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಈ ವಿಡಿಯೊದಲ್ಲಿ ಕಂಟೆಂಟ್ ಕ್ರಿಯೇಟರ್ ಕ್ಯಾಲ್ವಿನ್ ಲೀ 'ಹೆಚ್ಚುವರಿ ಪ್ರೋಟೀನ್' ಡೋಸ್‍ನೊಂದಿಗೆ ಒಂದು ಕಪ್ ಕಾಫಿಯನ್ನು ಎಂಜಾಯ್‌ ಮಾಡಿದ್ದಾನೆ. ಅವನು ಕಾಫಿಯನ್ನು ಕುಡಿಯುವ ಮೊದಲು ಅದಕ್ಕೆ ಬೇಯಿಸಿದ ಬೀನ್ಸ್ ಕಾಳುಗಳನ್ನು ಹಾಕಿ ಅದನ್ನು ಚೆನ್ನಾಗಿ ಕಲಕಿ ಕುಡಿದಿದ್ದಾನೆ. ಈ ಪಾಕವಿಧಾನವು ಸುಲಭವಾಗಿದ್ದರೂ, ಅದು ಅಷ್ಟೇ ವಿಚಿತ್ರವಾಗಿತ್ತು. 'ಬೇಕ್ಡ್ ಬೀನ್ಸ್ ಕಾಫಿ' ತಯಾರಿಸಿ ಅದರ ರುಚಿ ನೋಡಿ "ತುಂಬಾ ಚೆನ್ನಾಗಿದೆ” ಎಂದು ಹೇಳಿದ್ದಾನೆ.

ಲೀ ತಯಾರಿಸಿದ ಈ ಕಾಫಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. "ಆರೋಗ್ಯಕರ ಉಪಾಹಾರ" ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಈ ಪೋಸ್ಟ್‌ ಅನ್ನು ಫೆಬ್ರವರಿ 5 ರಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗಾಗಲೇ ವೈರಲ್ ಆಗಿದ್ದು, 50,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಕ್ಯಾಲ್ವಿನ್ ಲೀ ಈ ಹಿಂದೆ ಆತ ಕೋಕ್‍ಗೆ ಚೀಸ್ ಸೇರಿಸುವುದು ಮತ್ತು ಓರಿಯೋ ಬಿಸ್ಕತ್ ಅನ್ನು ಒಂದು ಲೋಟ ವೈನ್‍ಗೆ ಹಾಕುವುದನ್ನು ನೀವು ನೋಡಿರಬಹುದು. ಅದೇರೀತಿ ಈ ಹಿಂದೆ ಕಾಫಿಗೆ ಸ್ವಲ್ಪ ಜೋಳವನ್ನು ಸೇರಿಸಿ ಅದನ್ನು ಚೆನ್ನಾಗಿ ಕಲಕಿ ಕುಡಿದಿದ್ದರು. ಈ ವಿಡಿಯೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಈ ಸುದ್ದಿಯನ್ನೂ ಓದಿ: Viral Video: ಸಿಕ್ಕಾಪಟ್ಟೆ ವೈರಲ್‌ ಆಯ್ತು ಚಾಕೋಲೆಟ್‌-ಆಲೂಗೆಡ್ಡೆ ರೆಸಿಪಿ; ನೆಟ್ಟಿಗರು ಹೇಳಿದ್ದೇನು?

ಇತ್ತೀಚೆಗೆ ಕ್ಯಾಲ್ವೀನ್‌ ಲೀ ಅವರು ತಯಾರಿಸಿದ ಈ ವಿಶೇಷ ಬಗೆಯ ಖಾದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಯಾಕೆಂದರೆ ಇದಕ್ಕೆ ಅವರು ಬಳಸಿರುವುದು ಕೇವಲ ಎರಡೇ ಎರಡೇ ವಸ್ತುಗಳಂತೆ. ಅರೇ... ಎರಡೇ ಎರಡು ವಸ್ತುಗಳಿಂದ ಇವರೇನು ತಿಂಡಿ ತಯಾರಿಸಿದ್ದಾರೆ ಎಂಬ ಅನುಮಾನ ನಿಮಗೂ ಕಾಡ್ತಿದೆಯಾ....? ಇಲ್ಲಿದೆ ನೋಡಿ ಅವರ ವೈರಲ್‌ ರೆಸಿಪಿಯ ಮಾಹಿತಿ.

ಈ ವಿಡಿಯೊದಲ್ಲಿ ಅವರು ಒಂದು ಬಟ್ಟಲು ಬೇಯಿಸಿ ಹಿಸುಕಿ ಇಟ್ಟುಕೊಂಡ ಆಲೂಗಡ್ಡೆಗೆ ಒಂದಿಡೀ ಚಾಕೋಲೆಟ್‌ ಬಾರ್‌ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿದ್ದಾರೆ. ನಂತರ ಅದಕ್ಕೆ ಬಣ್ಣ ಬಣ್ಣದ ಚಾಕೋಲೆಟ್‌ ಬಟನ್‌ಗಳನ್ನು ಸೇರಿಸಿದ್ದಾರೆ. ಕೊನೆಗೆ ಅದರ ರುಚಿ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. "ಬೇಯಿಸಿದ ಆಲೂಗಡ್ಡೆಗೆ ಚಾಕೋಲೆಟ್‌ ಮಿಕ್ಸ್‌ ಮಾಡಿರುವುದು ಸಖತ್‌ ರುಚಿಯಾಗಿತ್ತು. ಇನ್ನು ಚಾಕೋಲೆಟ್‌ ಬಟನ್‌ಗಳನ್ನು ಅದಕ್ಕೆ ಸೇರಿಸಿದ್ದರಿಂದ ಸಖತ್‌ ಕ್ರಂಚಿಯಾಗಿತ್ತು. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ. ಇದು ತುಂಬಾನೇ ರುಚಿಯಾಗಿದೆ" ಎಂದಿದ್ದಾರೆ.