ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಫ್ಲೈ ಓವರ್‌ನಿಂದ ಹಾರಿದ ಕಾರು- ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಚಾಲಕನೋರ್ವ ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ಕಾರು ಚಲಾಯಿಸಲು ಹೋಗಿ ಪೇಚಿಗೆ ಸಿಲುಕಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ಚಾಲಕ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ನಿರ್ಮಾಣ ಹಂತದ ಸೇತುವೆಯಲ್ಲಿ ಹಾರಿದ ಕಾರು

ನವದೆಹಲಿ: ಚಾಲಕನೋರ್ವ ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ಕಾರು ಚಲಾಯಿಸಲು ಹೋಗಿ ಪೇಚಿಗೆ ಸಿಲುಕಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ಚಾಲಕ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌ ಚಾಲಕ, ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಫ್ಲೈ ಓವರ್‌ನ ಮೇಲೆ ಕಾರು ಚಲಾಯಿಸಿದ್ದಾನೆ. ಆದರೆ, ಸೇತುವೆಯ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಬ್ರಿಡ್ಜ್ ನ ಎರಡು ಭಾಗಗಳ ನಡುವೆ ಕಾರು ಸಿಲುಕಿ ಕೊಂಡಿದ್ದು ಕಾರು ಅಪಾಯಕಾರಿಯಾಗಿ ತೂಗಾಡುವ ಸ್ಥಿತಿಗೆ ತಲುಪಿತು. ಸದ್ಯ ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ನವೆಂಬರ್ 16 ರ ಸಂಜೆ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಚಾಲಕನೊಬ್ಬ ತಲಸ್ಸೆರಿಯಿಂದ ಕಣ್ಣೂರಿನ ಕಡೆಗೆ ಬರುತ್ತಿದ್ದನು. ಈ ಸಂದರ್ಭದಲ್ಲಿ ಆತ ನಿರ್ಮಾಣ ವಾಗುತ್ತಿರುವ ಫ್ಲೈಓವರ್‌ನ ಮೇಲೆ ಏರಿದ್ದಾನೆ. ಆದರೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಇದನ್ನು ನೋಡದೆ ಆತ ನಿರ್ಲಕ್ಷಿಸಿ ಮುಂದೆ ಹೋಗಿದ್ದಾನೆ. ಫ್ಲೈಓವರ್‌ನ ಕೊನೆಯ ಭಾಗದಲ್ಲಿ ರಸ್ತೆ ಮುಗಿದಿದ್ದು, ಕಾರು ಅಪಾಯಕಾರಿಯಾಗಿ ನೇತಾಡುವ ಸ್ಥಿತಿಗೆ ತಲುಪಿತು. ಸೇತುವೆಯ ಒಂದು ಭಾಗ ಮುಗಿದ ನಂತರ, ಮುಂದಿನ ಭಾಗಕ್ಕೆ ಸಂಪರ್ಕ ಇರಲಿಲ್ಲ. ನೇರವಾಗಿ ಬಂದ ಕಾರು, ಮುಂದೆ ಹೋಗಲು ಜಾಗವಿಲ್ಲದೆ, ಎರಡು ಭಾಗಗಳ ನಡುವೆ ಕೆಳಗೆ ಬೀಳುವಂತೆ ಸಿಕ್ಕಿಹಾಕಿಕೊಂಡಿದೆ..

ನಿರ್ಮಾಣ ಹಂತದ ಸೇತುವೆಯಲ್ಲಿ ಹಾರಿದ ಕಾರು



ಕಾರು‌ ಮುಂಭಾಗಕ್ಕೆ ಹೋಗುತ್ತಿದ್ದರೂ, ಅದೃಷ್ಟವಶಾತ್ ಚಾಲಕನಿಗೆ ಯಾವುದೇ ದೊಡ್ಡ ಗಾಯಗಳಾಗಲಿಲ್ಲ. ಕಾರು ಸಂಪೂರ್ಣವಾಗಿ ಕೆಳಗೆ ಬೀಳದೆ ಫ್ಲೈಓವರ್‌ನಲ್ಲಿ ನೇತಾಡುತ್ತಿದ್ದ ದೃಶ್ಯ ಕಾಣಬಹುದು. ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆದರು. ಈ ಘಟನೆಯ ವಿಡಿಯೊ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಇದನ್ನು ಓದಿ:Viral Photo: ಸೂರ್ಯನನ್ನೇ ಹಾದು ಹೋದ ಸ್ಕೈಡೈವರ್‌- ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ!

ಈ ಘಟನೆಯೂ ರಸ್ತೆ ನಿರ್ಮಾಣದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಗಂಭೀರ ಚರ್ಚೆಗೆ ಒತ್ತಾಯಿಸಿದೆ..ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ರಸ್ತೆ ನಿರ್ಮಾಣ ಪ್ರದೇಶಗಳಲ್ಲಿ ಇಡುವ ಸುರಕ್ಷತಾ ಬ್ಯಾರಿಕೇಡ್‌ಗಳು ಇನ್ನೂ ಸರಿಯಾಗಿ ಕಾಣುವಂತೆ ಇರಬೇಕು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಚಾಲಕ ಬದುಕಿ ಉಳಿದಿದ್ದೆ ಪವಾಡ ಎಂಬಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ.