ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭೀಕರ ಮಳೆಗೆ ಮನೆಯೇ ಧ್ವಂಸ! ಆದ್ರೆ ಸೀಲಿಂಗ್ ಫ್ಯಾನ್ ಮಾತ್ರ ಹಾಗೆಯೇ ಉಳಿದಿದೆ- ವಿಡಿಯೊ ನೋಡಿ

Brutal Rain Destroys House: ಪಂಜಾಬ್ ಸುಮಾರು ನಲವತ್ತು ವರ್ಷಗಳಲ್ಲಿಯೇ ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭೀಕರ ಮಳೆಯಿಂದ ಮನೆಯೊಂದು ಕುಸಿದುಬಿದ್ದಿದೆ. ಆದರೆ, ಛಾವಣಿಯಲ್ಲಿ ಮಾತ್ರ ಫ್ಯಾನ್ ನೇತಾಡುತ್ತಿದೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮನೆ ನಾಶವಾದರೂ ಸೀಲಿಂಗ್ ಫ್ಯಾನ್ ಮಾತ್ರ ಹಾಗೆಯೇ ಉಳಿದಿದೆ

-

Priyanka P Priyanka P Sep 1, 2025 6:56 PM

ಅಮೃತಸರ: ಪಂಜಾಬ್‍ನಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ರಾಜ್ಯದ ಬಹುತೇಕ ಭಾಗಗಳು ಪ್ರವಾಹಕ್ಕೆ ತುತ್ತಾಗಿವೆ. ಪಂಜಾಬ್ (Punjab) ಸುಮಾರು ನಲವತ್ತು ವರ್ಷಗಳಲ್ಲಿಯೇ ಅತ್ಯಂತ ಭೀಕರ ಪ್ರವಾಹವನ್ನು (flood) ಎದುರಿಸುತ್ತಿದೆ. ಹಲವು ಮನೆಗಳು ಕುಸಿದು ಬಿದ್ದಿದ್ದು, ಕೃಷಿಭೂಮಿಗಳಿಗೆ ಹಾನಿಯಾಗಿದೆ. ಪ್ರವಾಹ ಪರಿಸ್ಥಿತಿ ಹದಗೆಡುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ.

ಈ ವಿನಾಶದ ನಡುವೆ, ಪಂಜಾಬ್‌ನಲ್ಲಿ ನಡೆದ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಭೀಕರ ಮಳೆಯಿಂದ ಮನೆಯೊಂದು ಕುಸಿದುಬಿದ್ದಿದೆ. ಆದರೆ, ಛಾವಣಿಯಲ್ಲಿ ಮಾತ್ರ ಫ್ಯಾನ್ ನೇತಾಡುತ್ತಿದೆ. ಹೌದು, ಮನೆ ಕುಸಿದು ಬಿದ್ದರೂ, ಫ್ಯಾನ್ ಮಾತ್ರ ಹಾಗೆಯೇ ಉಳಿದಿದೆ. ಫಿರೋಜ್‌ಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದಾದ ಗಟ್ಟಿ ರಾಜೋಕೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ವಿಡಿಯೊ (Viral Video) ದಲ್ಲಿ ಮನೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ನೆಲದ ಸುತ್ತಲೂ ಇಟ್ಟಿಗೆಗಳು ಬಿದ್ದಿವೆ. ಆದರೆ, ಸೀಲಿಂಗ್ ಫ್ಯಾನ್‍ಗೆ ಮಾತ್ರ ಏನೂ ಆಗಿಲ್ಲ ಎಂಬಂತೆ ಹಾಗೆಯೇ ಉಳಿದಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಈ ವಿಡಿಯೊವನ್ನು ನೋಡಿ ಆಶ್ಚರ್ಯಚಕಿತರಾದರು. ಒಬ್ಬ ಬಳಕೆದಾರರು ಮೂರನೇ ಚಲನೆಯ ನಿಯಮ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಆ ಎಲೆಕ್ಟ್ರಿಷಿಯನ್‌ಗೆ ಪದಕ ನೀಡಿ ಎಂದು ಹಾಸ್ಯಚಟಾಕಿ ಹಾರಿಸಿದರು.

ವಿಡಿಯೊ ವೀಕ್ಷಿಸಿ:

ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ

ಭಾನುವಾರವೂ ಭಾರಿ ಮಳೆ ಮುಂದುವರೆದಿದ್ದು, ಇದು ಈಗಾಗಲೇ ಗಂಭೀರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಸಟ್ಲೆಜ್, ಬಿಯಾಸ್ ಮತ್ತು ರಾವಿಯಂತಹ ನದಿಗಳು ಉಕ್ಕಿ ಹರಿದಿದೆ. ಪರಿಣಾಮ ಭಾರಿ ಪ್ರವಾಹಕ್ಕೆ ಕಾರಣವಾಯಿತು. ಫಿರೋಜ್‌ಪುರ ಮತ್ತು ಫಜಿಲ್ಕಾದಲ್ಲಿನ 120 ಕ್ಕೂ ಹೆಚ್ಚು ಗ್ರಾಮಗಳು ಮತ್ತಷ್ಟು ಮುಳುಗಿದವು.

ಪಠಾಣ್‌ಕೋಟ್, ಗುರುದಾಸ್ಪುರ್, ಫಜಿಲ್ಕಾ, ಕಪುರ್ತಲಾ, ತರಣ್ ತರಣ್, ಫಿರೋಜ್‌ಪುರ್, ಹೋಶಿಯಾರ್‌ಪುರ್ ಮತ್ತು ಅಮೃತಸರಗಳು ಹೆಚ್ಚು ಪರಿಣಾಮ ಬೀರಿದ ಜಿಲ್ಲೆಗಳಾಗಿವೆ. ಎನ್‌ಡಿಆರ್‌ಎಫ್, ಸೇನೆ, ಬಿಎಸ್‌ಎಫ್, ಪಂಜಾಬ್ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಕೇವಲ ಒಂದು ವಾರದಲ್ಲಿ, ಪ್ರವಾಹವು 1,018ಕ್ಕೂ ಹೆಚ್ಚು ಹಳ್ಳಿಗಳನ್ನು ನಾಶಪಡಿಸಿದೆ ಮತ್ತು ಮೂರು ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ನಾಶಪಡಿಸಿದೆ. ಇಲ್ಲಿಯವರೆಗೆ, ಪ್ರವಾಹದಿಂದಾಗಿ 24 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರ ಸರ್ಕಾರದಿಂದ ಬಾಕಿ ಇರುವ 60,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಅವರು ಮಾಡಿದ್ದಾರೆ. ಬೆಳೆ ನಷ್ಟ ಪರಿಹಾರವನ್ನು ಎಕರೆಗೆ 15,000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಅವರು ಮಂಡಿಸಿದರು.

ಇದನ್ನೂ ಓದಿ: Viral News: ಒಮ್ಮೊಮ್ಮೆ ಹೀಗೂ ಆಗುವುದು! ಪ್ರೇಮಿಯನ್ನು ವರಿಸಲು ಮನೆ ಬಿಟ್ಟು ಓಡಿ ಹೋದ ಯುವತಿ ಮದುವೆಯಾಗಿದ್ದು ಬೇರೊಬ್ಬನನ್ನು!