Viral News: ಎಂಟು ತಿಂಗಳ ಗರ್ಭಿಣಿಯ ಜೀವ ಉಳಿಸಿದ Chat GPT; ಅಷ್ಟಕ್ಕೂ ಆಗಿದ್ದೇನು?
ಉತ್ತರ ಕೆರೊಲಿನಾದ ಷಾರ್ಲೆಟ್ ಮೂಲದ ಎಂಟು ತಿಂಗಳ ಗರ್ಭಿಣಿಯೊಬ್ಬಳು ಚಾಟ್‍ಜಿಪಿಟಿ(Chat GPT)ಯ ಬಳಿ ಮೋಜಿಗಾಗಿ ಪ್ರಶ್ನೆಯೊಂದನ್ನು ಕೇಳಿದ್ದಾಳೆ. ಎಐ ಚಾಟ್‍ಬಾಟ್ ಆಕೆಗೆ ತಕ್ಷಣ ಆಸ್ಪತ್ರೆಗೆ ಹೋಗುವಂತೆ ಹೇಳಿದೆ. ಅದರ ಮಾತನ್ನು ನಿರ್ಲಕ್ಷ್ಯ ಮಾಡದೇ ಆಕೆ ಆಸ್ಪತ್ರೆಗೆ ದಾಖಲಾದ ಕಾರಣ ಎರಡು ಜೀವ ಉಳಿದಿದೆ. ಈ ವಿಚಾರವನ್ನು ಆಕೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಇದು ಈಗ ವೈರಲ್(Viral Video) ಆಗಿದೆ.


ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಚಾಟ್ ಜಿಪಿಟಿ(Chat GPT) ಬಳಸುವುದು ಹೆಚ್ಚು ಟ್ರೆಂಡ್ ಆಗಿದೆ. ಘಿಬ್ಲಿ ಇಮೇಜ್‍ಗಾಗಿ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ. ಆದರೆ ಅಮೆರಿಕದ ಮಹಿಳೆಯೊಬ್ಬಳು ಚಾಟ್‌ಜಿಪಿಟಿಯೊಂದು ತನ್ನ ಜೀವ ಉಳಿಸಿದ ಕುರಿತ ವಿಷಯವೊಂದನ್ನು ಹಂಚಿಕೊಂಡಿದ್ದಾಳೆ. ಆಕೆಯ ಆರೋಗ್ಯದ ಸಮಸ್ಯೆಯ ಕುರಿತಾಗಿ ಚಾಟ್‌ಜಿಪಿಟಿ ಬಳಿ ಪ್ರಶ್ನೆಯೊಂದನ್ನು ಕೇಳಿದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡುವಂತೆ ಎಐ ಚಾಟ್‍ಬಾಟ್ ಒತ್ತಾಯಿಸಿದೆಯಂತೆ.ಇದರಿಂದ ದೊಡ್ಡ ಅಪಾಯದಿಂದ ಆಕೆ ಪಾರಾದಳಂತೆ. ತನ್ನ ಜೀವವನ್ನು ಉಳಿಸಿದ್ದಕ್ಕಾಗಿ ಆಕೆ ಚಾಟ್‍ಜಿಪಿಟಿಗೆ ಧನ್ಯವಾದ ಹೇಳಿದ್ದಾಳೆ. ಈ ವಿಚಾರವನ್ನು ಆಕೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ವೈರಲ್(Viral News) ಆಗಿದೆ.
ಉತ್ತರ ಕೆರೊಲಿನಾದ ಷಾರ್ಲೆಟ್ ಮೂಲದ ಫೋಟೊಗ್ರಾಫರ್ ನಟಾಲಿಯಾ ಟಾರಿಯನ್ ಚಾಟ್ ಜಿಪಿಟಿಗೆ "ಕೇವಲ ಮೋಜಿಗಾಗಿ" ಪ್ರಶ್ನೆಯೊಂದನ್ನು ಕೇಳಿದ್ದಾಳಂತೆ. ಆದರೆ ಅದು ತಕ್ಷಣವೇ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದೆ. ಈ ಘಟನೆ ಸಂಭವಿಸಿದಾಗ ಟಾರಿಯನ್ ಎಂಟು ತಿಂಗಳ ಗರ್ಭಿಣಿಯಾಗಿದ್ದಳಂತೆ. ಚಾಟ್ ಜಿಪಿಟಿ ಮಾತು ಕೇಳಿದ್ದಕ್ಕೆ ಆಕೆ ಹಾಗೂ ಆಕೆಯ ಮಗುವಿನ ಜೀವ ಉಳಿದಿದೆಯಂತೆ. ಎರಡು ಜೀವಗಳನ್ನು ಉಳಿಸಿದ್ದಕ್ಕಾಗಿ ಅವಳು ಸೋಶಿಯಲ್ ಮೀಡಿಯಾದಲ್ಲಿ ಚಾಟ್‍ಜಿಪಿಟಿಗೆ ಧನ್ಯವಾದ ಅರ್ಪಿಸಿದ್ದಾಳೆ.
ನಡೆದಿದ್ದೇನು?
ಟಾರಿಯನ್ ತಿಳಿಸಿದ ಪ್ರಕಾರ, ಅವಳಿಗೆ ದವಡೆ ಭಾಗದಲ್ಲಿ ಬಿಗಿಯಾದ ಅನುಭವವಾಗಿದೆಯಂತೆ. ಹಾಗಾಗಿ ಆ ರೋಗಲಕ್ಷಣವನ್ನು ಗಂಭೀರವಾಗಿ ಪರಿಗಣಿಸದೆ ಆಕೆ ಕೇವಲ ಮೋಜಿಗಾಗಿ ಚಾಟ್ ಜಿಪಿಟಿಗೆ "ನನ್ನ ದವಡೆ ಏಕೆ ಬಿಗಿಯಾಗಿದೆ?” ಎಂದು ಪ್ರಶ್ನಿಸಿದ್ದಾಳಂತೆ . ಆಗ ಚಾಟ್‍ಜಿಪಿಟಿ ಅವಳ ರಕ್ತದೊತ್ತಡವನ್ನು ಪರೀಕ್ಷಿಸಲು ಒತ್ತಾಯಿಸಿದೆ. ಅದು ಹೇಳಿದಂತೆ ಆಕೆ ಕೂಡ ರಕ್ತದೊತ್ತಡ ಪರೀಕ್ಷಿಸಿದ್ದಾಳೆ. ಅದು ನಿಜವಾಗಿಯೂ ಹೈ ಆಗಿತ್ತಂತೆ. ಅದು ಕಡಿಮೆಯಾಗುತ್ತದೆ ಎಂದು ಅವಳು ಭಾವಿಸಿದ್ದಳಂತೆ ಆದರೆ ಅದು ಏರುತ್ತಲೇ ಇತ್ತಂತೆ. ಆಗ ಎಐ ಚಾಟ್‍ಬಾಟ್ ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಒತ್ತಾಯಿಸಿದೆಯಂತೆ.
ತಕ್ಷಣ ಅವಳು ಆಸ್ಪತ್ರೆಗೆ ಹೋಗಿದ್ದಾಳೆ. ಆಕೆ ಆಸ್ಪತ್ರೆ ತಲುಪುವ ಹೊತ್ತಿಗೆ, ಆಕೆಯ ರಕ್ತದೊತ್ತಡ 200/146 ಆಗಿತ್ತಂತೆ. ಆಸ್ಪತ್ರೆಯಲ್ಲಿ, ವೈದ್ಯರು ಟಾರಿಯನ್ ಅವಳನ್ನು ಪರೀಕ್ಷಿಸಿ ಕೂಡಲೆ ಡೆಲಿವರಿ ಮಾಡಿಸಬೇಕು ಎಂದು ಹೇಳಿದ್ದಾರಂತೆ. ಅದೃಷ್ಟವಶಾತ್, ಮಗು ಸುರಕ್ಷಿತವಾಗಿ ಜನಿಸಿದೆ. ಆದರೆ ಆಕೆ ಚಾಟ್ ಜಿಪಿಟಿ ಹೇಳಿದ್ದನ್ನು ನಿರ್ಲಕ್ಷ್ಯ ಮಾಡಿದ್ದರೆ ತಾಯಿ ಮಗು ಇಬ್ಬರು ಜೀವಂತವಾಗಿರುತ್ತಿರಲಿಲ್ಲ ಎಂಬುದಾಗಿ ವೈದ್ಯರು ಆಘಾತಕಾರಿ ವಿಚಾರ ತಿಳಿಸಿದ್ದಾರಂತೆ.
ಈ ಸುದ್ದಿಯನ್ನೂ ಓದಿ:Viral Video: ಮತ್ತೆ ಸುದ್ದಿಯಲ್ಲಿದೆ ಡೆಲ್ಲಿ ಮೆಟ್ರೋ! ಈ ಬಾರಿ ಆಗಿದ್ದೇನು ಗೊತ್ತಾ? ಶಾಕಿಂಗ್ ವಿಡಿಯೊ ಇಲ್ಲಿದೆ ನೋಡಿ
ಹೆರಿಗೆಯ ನಂತರ ಐದು ದಿನಗಳವರೆಗೆ, ಮಹಿಳೆಯ ರಕ್ತದೊತ್ತಡ ಏರುತ್ತಲೇ ಇತ್ತು.ಇದರಿಂದ ಆಕೆ ಒಂದು ಕ್ಷಣ ತನ್ನ ದೃಷ್ಟಿಯನ್ನು ಸಹ ಕಳೆದುಕೊಂಡೆ ಎಂಬುದಾಗಿ ತಿಳಿಸಿದ್ದಾಳೆ.
ಇಂತಹ ಅಪಾಯದಿಂದ ಪಾರು ಮಾಡಿದ್ದ ಚಾಟ್ ಜಿಪಿಟಿಗೆ ಅವಳು ಕೃತಜ್ಞಳಾಗಿದ್ದಾಳೆ ಎಂಬುದಾಗಿ ಬರೆದಿದ್ದಾಳೆ. ಅವಳ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 34 ಮಿಲಿಯನ್ ವ್ಯೂವ್ಸ್ ಗಳಿಸಿದೆ.