ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮತ್ತೆ ಸುದ್ದಿಯಲ್ಲಿದೆ ಡೆಲ್ಲಿ ಮೆಟ್ರೋ! ಈ ಬಾರಿ ಆಗಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೊ ಇಲ್ಲಿದೆ ನೋಡಿ

ದೆಹಲಿ ಮೆಟ್ರೋದಲ್ಲಿ ಇಬ್ಬರು ಪುರುಷರ ನಡುವೆ ಹೊಡೆದಾಟ ನಡೆದಿದ್ದು,ಇಬ್ಬರೂ ತಮ್ಮತಮ್ಮ ಬಟ್ಟೆಗಳನ್ನು ಹರಿದುಹಾಕಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮೆಟ್ರೊದೊಳಗಿದ್ದ ಜನರು ಇವರಿಬ್ಬರ ಜಗಳ ನೋಡಿ ಫುಲ್‌ ಎಂಜಾಯ್‌ ಮಾಡಿದ್ದಾರೆ.

ದೆಹಲಿ ಮೆಟ್ರೋದೊಳಗೆ ಪುರುಷರ ಮಾರಾಮಾರಿ; ವಿಡಿಯೊ ಫುಲ್‌ ವೈರಲ್

Profile pavithra Apr 17, 2025 5:00 PM

ನವದೆಹಲಿ: ದೆಹಲಿ ಮೆಟ್ರೋ ಆಗಾಗ್ಗೆ ಪ್ರಯಾಣಿಕರ ಜಗಳಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ, ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಮೆಟ್ರೋದಲ್ಲಿ ಇಬ್ಬರು ಪುರುಷರು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಪುರುಷರಿಬ್ಬರು ಕಿತ್ತಾಡಿಕೊಂಡು ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಇವರ ಕಿತ್ತಾಟ ನೋಡಿ, ಮೆಟ್ರೋ ಬೋಗಿಯಲ್ಲಿದ್ದ ಮಹಿಳೆಯೊಬ್ಬಳು ಇವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇತರ ಪ್ರಯಾಣಿಕರು
ಇವರ ಜಗಳವನ್ನು ಮನರಂಜನೆಯಾಗಿ ತೆಗೆದುಕೊಂಡು ವಿಡಿಯೊ ರೆಕಾರ್ಡ್ ಮಾಡಿದ್ದಾರೆ.

ಮೆಟ್ರೋದಲ್ಲಿ ಕಿತ್ತಾಡಿಕೊಂಡ ಪುರುಷರ ಜಗಳದ ವಿಡಿಯೊ ಇಲ್ಲಿದೆ ನೋಡಿ...



ಕೊನೆಗೆ ಇವರಿಬ್ಬರ ಜಗಳ ಹೇಗೆ ನಿಂತಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಡಿಯೊದ ಕೊನೆಯಲ್ಲಿ, ಇಬ್ಬರು ಪುರುಷರು ಒಬ್ಬರಿಂದ ಇನ್ನೊಬ್ಬರು ದೂರವಿದ್ದು ಸುಮ್ಮನಿದ್ದಾರಂತೆ. ಘಟನೆಯ ಬಗ್ಗೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ವಾಗ್ವಾದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.

ಆದರೆ ದೆಹಲಿ ಮೆಟ್ರೋ ಒಳಗೆ ಗಲಾಟೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊರ್ವ ಸೀಟಿಗಾಗಿ ಮಹಿಳೆಯರ ಬಳಿ ಜಗಳಕ್ಕಿಳಿದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅವನು ತಾನು ಇಳಿಯುವ ಸ್ಥಳ ಬರುವವರೆಗೂ ತನ್ನ ಸೀಟನ್ನು ಮಹಿಳಾ ಪ್ರಯಾಣಿಕರಿಗೆ ನೀಡಲು ನಿರಾಕರಿಸಿದ್ದಾನಂತೆ. ಹೀಗಾಗಿ ಈ ಜಗಳ ಶುರುವಾಗಿದೆ. ವೈರಲ್ ವಿಡಿಯೊದಲ್ಲಿ ಮೆಟ್ರೋದಲ್ಲಿ ಸಾಕಷ್ಟು ಮಂದಿ ಮಹಿಳೆಯರು ನಿಂತಿದ್ದರು ಕೂಡ ಅವರಿಗೆ ತನ್ನ ಸೀಟನ್ನು ಬಿಟ್ಟುಕೊಡದೇ ಗಟ್ಟಿಯಾಗಿ ಕುಳಿತುಕೊಂಡಿದ್ದಾನೆ. ಆದರೆ ಸ್ವಲ್ಪ ಸಮಯ ಬಿಟ್ಟು ತಾನು ಇಳಿಯುವ ಸ್ಥಳ ಬಂದಾಗ ಆತ ಸೀಟಿನಿಂದ ಎದ್ದು ಬಾಗಿಲ ಬಳಿ ಹೋದಾಗ ಅಲ್ಲಿದ್ದ ಮಹಿಳೆಯರು ತಕ್ಷಣ ಅವನನ್ನು ನಿಲ್ಲಿಸಿ, ಅಲ್ಲೇ ಕುಳಿತುಕೊಳ್ಳುವಂತೆ ಮತ್ತು ಬೇರೆ ಯಾರಿಗೂ ಸೀಟನ್ನು ಬಿಟ್ಟು ಕೊಡಬೇಡ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ ಕ್ರೇಜ್‌; 2 ರೈಲ್ವೆ ಹಳಿಗಳ ನಡುವೆ ಓಡಿದ ಯುವತಿ: ಕಿಡಿಕಾರಿದ ನೆಟ್ಟಿಗರು

ಹಾಗೇ ಮತ್ತೊಂದು ಘಟನೆಯಲ್ಲಿ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳಿಗೆ ಮಧ್ಯವಯಸ್ಸಿನ ಮಹಿಳಾ ಪ್ರಯಾಣಿಕಳೊಬ್ಬಳು ಬಾಡಿ ಶೇಮಿಂಗ್‌ ಮಾಡಿದ ಘಟನೆಯೊಂದು ನಡೆದಿತ್ತು. ನೋಡುವುದಕ್ಕೆ ಸ್ವಲ್ಪ ದಪ್ಪಗಿದ್ದ ಯುವತಿಗೆ ಮಹಿಳೆಯೊಬ್ಬಳು ನೀವು 50 ವರ್ಷದ ಮುದುಕಿಯಂತೆ ಕಾಣುತ್ತಿದ್ದಿಯಾ ಎಂದು ಅವಮಾನಿಸಿದ್ದಾಳೆ. 20 ವರ್ಷದ ಯುವತಿ ಮೆಟ್ರೋದಲ್ಲಿ ಚಿಪ್ಸ್‌ ತಿಂದ ಹುಡುಗಿಯೊಬ್ಬ ಪರವಾಗಿ ಮಾತನಾಡಿದ್ದಕ್ಕೆ ಮಹಿಳೆ ಸಿಟ್ಟಾಗಿ ಈಕೆಯ ಮೇಲೆ ಹರಿಹಾಯ್ದಿದ್ದಾಳೆ. ಕೊನೆಗೆ ಸಹಪ್ರಯಾಣಿಕರೊಬ್ಬರು ಮದ್ಯಪ್ರವೇಶಿಸಿ ಈ ರೀತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.