ಚೆನ್ನೈ, ಮಾ.8: ಇತ್ತೀಚೆಗೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ನಿಯಮ ಉಲ್ಲಂಘನೆ ಮಾಡುವಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದೀಗ ಬೈಕ್ ವೊಂದರಲ್ಲಿ ಮಕ್ಕಳಿಬ್ಬರು ಹಿಮ್ಮುಖವಾಗಿ ಕುಳಿತು ತಂದೆಯೊಂದಿಗೆ ಪ್ರಯಾಣ ಮಾಡಿದ್ದಾರೆ. ಶಾಲಾ ಸಮವಸ್ತ್ರ ಧರಿಸಿದ ಅಕ್ಕ- ತಮ್ಮ ಇಬ್ಬರು ಬೈಕ್ ನಲ್ಲಿ ಕುಳಿತು ತಮ್ಮದೇ ಆಟದಲ್ಲಿ ಮಗ್ನರಾಗಿದ್ದಾರೆ. ಈ ಮಕ್ಕಳ ಮುಗ್ದತೆ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದರೂ ರಸ್ತೆ ಸುರಕ್ಷಿತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ವೈರಲ್ (Viral Video) ಆಗಿದೆ
ಅತೀಯಾದ ಟ್ರಾಫಿಕ್ ನಡುವೆ ವ್ಯಕ್ತಿಯೊಬ್ಬರು ಬೈಕ್ ಓಡಿಸುತ್ತಿದ್ದಾರೆ. ಇದರ ಹಿಂದೆ ಶಾಲಾ ಸಮವಸ್ತ್ರದಲ್ಲಿ ಚಿಕ್ಕ ಹುಡುಗಿ ಮತ್ತು ಅವಳ ಸಹೋದರ ಕುಳಿತು ಕೊಂಡಿದ್ದಾರೆ. ಅವರು ತಮ್ಮದೇ ಆದ ಮೋಜಿನ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರದ ದಟ್ಟಣೆಯ ನಡುವೆ ಈ ಮಕ್ಕಳ ಮುದ್ದಾದ ಮುಗ್ದತೆ ಬಾಲ್ಯದ ನೆನಪುಗಳನ್ನು ನೆನಪಿಸುವಂತೆ ಮಾಡಿದೆ. ಈ ದೃಶ್ಯ ನೋಡಿ ಹಲವಾರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ:
ನಗರವು ಟ್ರಾಫಿಕ್ ನಲ್ಲಿ ಮುಳುಗಿ ಹೋಗಿದ್ದರೆ ಈ ಮಕ್ಕಳು ತಮ್ಮದೇ ಆದ ಜಗತ್ತಿನಲ್ಲಿ ಕಳೆದು ಹೋಗಿದ್ದಾರೆ. ವೀಡಿಯೊದಲ್ಲಿ, ಚಿಕ್ಕ ಹುಡುಗಿ ತನ್ನ ತಂದೆಯ ವಿರುದ್ಧ ವಿರುದ್ಧ ದಿಕ್ಕಿಗೆ ಮುಖ ಮಾಡಿ ಹಿಂದಕ್ಕೆ ಒರಗುತ್ತಾಳೆ, ಆದರೆ ಅವಳ ಸಹೋದರ ಮುಂದಕ್ಕೆ ಮುಖ ಮಾಡಿ ಕುಳಿತಿದ್ದಾಳೆ. ಇಬ್ಬರೂ ತಮ್ಮ ಸುತ್ತಲಿನ ಸಂಚಾರ ವಾಹನ ದಟ್ಟಣೆ ಬಗ್ಗೆ ಗಮನ ಹರಿಸದೆ ಆಟವಾಡುತ್ತಲೇ ಇದ್ದಾರೆ.
Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ಆದರೆ, ಈ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿಲ್ಲ ಕೆಲವರು ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ. ಮಕ್ಕಳಿಗೆ ರಕ್ಷಣಾತ್ಮಕ ಹೆಲ್ಮೆಟ್ ಇಲ್ಲ ಮತ್ತು ವಾಹನದ ಮುಂಭಾಗಕ್ಕೆ ಎದುರಾಗಿ ಕುಳಿತುಕೊಂಡಿದ್ದು ಸುರಕ್ಷಿತ ಅಲ್ಲ ಎಂದಿದ್ದಾರೆ.. ಇಂತಹ ಬೇಜವಾಬ್ದಾರಿತನದ ವರ್ತನೆ ಹಾಗೂ ರಸ್ತೆ ಸುರಕ್ಷತೆ ಎಂಬುದು ತಮಾಷೆಯೇ?" ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಒಬ್ಬ ಬಳಕೆದಾರರು, ಇದು ತುಂಬಾ ಮುದ್ದಾಗಿದೆ... ಮತ್ತೆ ಬಾಲ್ಯ ನೋಡಿದಂತಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.ಇನ್ನೊಬ್ಬರು ಇದನ್ನು "ಅಪಾಯಕಾರಿ" ಎಂದು ಮಕ್ಕಳ ಸುರಕ್ಷತೆ ಬಗ್ಗೆ ಬರೆದುಕೊಂಡಿದ್ದಾರೆ.