ಮುಂಬೈನ ಆಟೋ ಚಾಲಕರ ಹರ್ಷೋದ್ಗಾರ: ಮರಾಠಿ ಕಲಿಯಲು ಒಂದು ವರ್ಷ ಕಾಲಾವಕಾಶ ನೀಡಿದ ಸಿಎಂ ಫಡ್ನವೀಸ್!
ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯನ್ನು ಕಡ್ಡಾಯ ಗೊಳಿಸಲಾಗಿದೆ. ಈಗಾಗಲೇ ಮರಾಠಿ ಮಾತನಾಡಲು ಬರದ ಚಾಲಕರಿಗೆ ನೋಟಿಸ್ ಕೂಡ ನೀಡ ಲಾಗಿದ್ದು ಮರಾಠಿ ಕಲಿಯಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದರಿಂದ ಬಹಳಷ್ಟು ಚಾಲಕರು ಭಾಷೇ ಕಲಿಯಲಾಗದೆ ತಮ್ಮ ಊರಿಗೆ ಮರಳ ಬೇಕಾಯಿತು. ಈ ನಡುವೆ ಮಹಾರಾಷ್ಟ್ರ ಸರ್ಕಾರ ಚಾಲಕರಿಗೆ ದೊಡ್ಡ ರಿಲೀಫ್ ನೀಡಿದೆ.
ಮುಂಬೈನ ಆಟೋ ಚಾಲಕರ ಹರ್ಷೋದ್ಗಾರ -
ಮುಂಬೈ,ಆ. 29: ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಮರಾಠಿ ಮಾತನಾಡಲು ಬರದ ಚಾಲಕರಿಗೆ ನೋಟಿಸ್ ಕೂಡ ನೀಡಲಾಗಿದ್ದು ಮರಾಠಿ ಕಲಿಯಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದರಿಂದ ಬಹಳಷ್ಟು ಚಾಲಕರು ಭಾಷೇ ಕಲಿಯಲಾಗದೆ ತಮ್ಮ ಊರಿಗೆ ಮರಳ ಬೇಕಾಯಿತು. ಈ ನಡುವೆ ಮಹಾರಾಷ್ಟ್ರ ಸರ್ಕಾರ ಚಾಲಕರಿಗೆ ದೊಡ್ಡ ರಿಲೀಫ್ ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಮರಾಠಿ ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡಿದ್ದಾರೆ. ಈ ನಿರ್ಧಾರವನ್ನು ಚಾಲಕರು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ದೃಶ್ಯ (Viral News) ಕಂಡು ಬಂದಿದೆ.
ಮಹಾರಾಷ್ಟ್ರ ಸರ್ಕಾರ ಮರಾಠಿ ಕಲಿಯಲು ಹೆಚ್ಚುವರಿ ವರ್ಷವನ್ನು ನೀಡಿದ ನಂತರ ಮುಂಬೈನಲ್ಲಿ ಮರಾಠಿಯೇತರ ಆಟೋ ಚಾಲಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಚಾಲಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ನೃತ್ಯ ಮಾಡುತ್ತಿರುವ ದೃಶ್ಯ ಕಂಡುಬಂದಿದೆ, ಈ ನಿರ್ಧಾರವು ತಮಗೆ ಬಹಳಷ್ಟು ಸಹಕಾರಿಯಾಗಿದೆ ಎಂದು ಆಟೋ ಚಾಲಕರು ಖುಷಿ ವ್ಯಕ್ತ ಪಡಿಸಿದ್ದಾರೆ.
ವಿಡಿಯೋ ನೋಡಿ:
#WATCH | Mumbai, Maharashtra: Non-Marathi auto-rickshaw drivers celebrate and express gratitude to Maharashtra CM Devendra Fadnavis for the decision to grant them a one-year extension to learn Marathi. The decision comes as a major relief for non-Marathi auto-rickshaw drivers. pic.twitter.com/Gu6yp4Uu2u
— ANI (@ANI) August 28, 2026
ಆಟೋ ಮತ್ತು ಟ್ಯಾಕ್ಸಿಚಾಲಕರ ಸಂಘಟನೆಗಳ ಪ್ರತಿನಿಧಿಗಳು ಫಡ್ನವೀಸ್ ಅವರನ್ನು ಭೇಟಿ ಮಾಡಿ ಮರಾಠಿ ಕಲಿಕೆಗೆ ಸಮಯಾವಕಾಶ, ಹಾಗೆಯೇ ಶಿಕ್ಷಕರ ಲಭ್ಯತೆ ಬಗ್ಗೆ ತೊಂದರೆಗಳನ್ನು ವಿವರಿಸಿದ್ದರು. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಈ ವಿಸ್ತರಣೆ ಬಂದಿದೆ. ಈ ಬಗ್ಗೆ ಆಟೋ ಚಾಲಕರು ಖುಷಿಯಾಗಿದ್ದು ಆಟೋ-ರಿಕ್ಷಾ ಚಾಲಕರ ಗುಂಪು ನೃತ್ಯ ಮತ್ತು ಹರ್ಷೋದ್ಗಾರ ಮಾಡುವುದು ಕಂಡು ಬಂದಿದೆ.
ಮುಂಬೈನಲ್ಲಿ ಕೆಲಸ ಮಾಡುವ ಜನರು ಮರಾಠಿಯ ಜ್ಞಾನವನ್ನು ಹೊಂದಿರಬೇಕು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದಾಗ್ಯೂ, ಮರಾಠಿ ಮಾತನಾಡದ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ ಆದರೆ ಶಿಕ್ಷಕರ ಪ್ರವೇಶ, ಪ್ರಮಾಣೀಕರಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹೆಚ್ಚುವರಿ ಸಮಯ ಸುಲಭವಾಗಿ ಭಾಷೆ ಕಲಿಯಲು ನೆರವಾಗಲಿದೆ ಎಂದು ಚಾಲಕರು ಸಂಭ್ರಮಿಸಿದ್ದಾರೆ.