ಮಧ್ಯಪ್ರದೇಶ: ಜನನಿಬಿಡ ರಸ್ತೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ( All India Majlis-e-Ittehadul Muslimeen) ಪಕ್ಷದ ಮುಖ್ಯಸ್ಥ ಅಸದುದ್ದೀನ್ ಓವೈಸಿ (AIMIM chief Asaduddin Owaisi) ಅವರ ಬೆಂಗಾವಲು ಪಡೆಯ ವಾಹನಗಳ ನಡುವೆ ಡಿಕ್ಕಿ (Bikes Collision) ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ. ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ ನ (Bhopal) ವಿಐಪಿ ರಸ್ತೆಯ ತಿರುವಿನಲ್ಲಿ ಓವೈಸಿ ಅವರ ಬೆಂಗಾವಲು ಪಡೆಯ ಬೈಕ್ ಗಳಲ್ಲಿ ಕೆಲವು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು, ಇದರ ಪರಿಣಾಮ ಅಪಘಾತ ಸಂಭವಿಸಿದೆ. ಇದರಿಂದ ಹಲವಾರು ಮಂದಿಗೆ ಗಾಯಗಳಾಗಿವೆ.
ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ವಸಂತ್ ಕೌಲ್, ಭೋಪಾಲ್ ಭೇಟಿಗೆ ಬಂದಿದ್ದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆಯಲ್ಲಿದ್ದ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಕೆಲವು ಬೈಕ್ ಸವಾರರು ಗಾಯಗೊಂಡಿದ್ದಾರೆ ಎಂದರು.
UPI ಪಾವತಿಯಲ್ಲಿ ಹೊಸ ನಿಯಮ; 2,000 ರೂಪಾಯಿ ಮೇಲ್ಪಟ್ಟ ವಹಿವಾಟಿಗೆ ಶೇಕಡಾ 0.4 MDR
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ಜನನಿಬಿಡ ವಿಐಪಿ ರಸ್ತೆಯಲ್ಲಿ ಅಸಾದುದ್ದೀನ್ ಅವರು ತಮ್ಮ ಬೆಂಗಾವಲು ಪಡೆ ವಾಹನಗಳೊಂದಿಗೆ ಸಾಗುತ್ತಿದ್ದಾಗ ತಿರುವೊಂದರಲ್ಲಿ ಕೆಲವು ವಾಹನಗಳು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದವು. ಕಾರುಗಳ ಹಿಂದೆ ಬರುತ್ತಿದ್ದ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ನಾಲ್ಕರಿಂದ ಐದು ಮಂದಿ ಬೈಕ್ ಸವಾರರಿಗೆ ಗಾಯವಾಗಿದೆ ಎಂದರು.
ರಸ್ತೆಯ ತಿರುವಿನಲ್ಲಿ ವಾಹನಗಳು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಹಲವು ವಾಹನಗಳು ಡಿಕ್ಕಿ ಹೊಡೆದಿವೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ಸಂಚಾರಕ್ಕೆ ಉಂಟಾಗಿದ್ದ ಅಡ್ಡಿಯನ್ನು ತೆರವುಗೊಳಿಸಿದರು. ಕೆಲವು ಬೈಕ್ ಸವಾರರಿಗೆ ಗಾಯಗಳಾಗಿದ್ದು ಅವರನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಿದರು.
ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಓವೈಸಿ ಅವರು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಂಗಳವಾರ ಮಧ್ಯಾಹ್ನ ಭೋಪಾಲ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಭಾರತದ ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಧಾರ್ಮಿಕ ಸ್ವಾತಂತ್ರ್ಯವನ್ನು ಕೊನೆಗೊಳಿಸಿ ಇಂತಹ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ. ಎಐಎಂಐಎಂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದರೂ ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿದೆ. ವಿವಿಧ ಧರ್ಮಗಳ ನಡುವೆ ಏಕರೂಪದ ನಾಗರಿಕ ಕಾನೂನುಗಳ ಕುರಿತ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.