Asaduddin Owaisi: "ನಕಲು ಮಾಡಲೂ ಬುದ್ಧಿ ಇಲ್ಲ"; ಚೀನಾದ ಫೋಟೋ ಬಳಕೆಗೆ ಪಾಕಿಸ್ತಾನವನ್ನು ಟೀಕಿಸಿದ ಓವೈಸಿ
ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಅದೇ ನಿಯೋಗದ ಸದಸ್ಯರಾಗಿದ್ದಾರೆ. ಅವರು ಇದೀಗ ಕುವೈತ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಪಾಕಿಸ್ತಾನ ತನ್ನ ಕುರಿತು ತಾನೇ ಬಡಾಯಿ ಕೊಚ್ಚಿಕೊಳ್ಳುವ ಬಗೆಯನ್ನು ಅವರು ಟೀಕಿಸಿದ್ದಾರೆ.


ಕುವೈತ್: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂದೂರದ (Op Sindoor) ಕುರಿತು ಜಗತ್ತಿನ ವಿವಿಧ ದೇಶಗಳಿಗೆ ಮಾಹಿತಿ ನೀಡಲು ಸರ್ಕಾರ ಸರ್ವ ಪಕ್ಷ ನಿಯೋಗವನ್ನು ನಿಯೋಜನೆ ಮಾಡಿದೆ. ಈಗಾಗಲೇ ತಂಡಗಳು ವಿವಿಧ ದೇಶಗಳಿಗೆ ಭೇಟಿ ನೀಡಿದ್ದಾರೆ. ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ (Asaduddin Owaisi) ಅದೇ ನಿಯೋಗದ ಸದಸ್ಯರಾಗಿದ್ದಾರೆ. ಅವರು ಇದೀಗ ಕುವೈತ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಪಾಕಿಸ್ತಾನ ತನ್ನ ಕುರಿತು ತಾನೇ ಬಡಾಯಿ ಕೊಚ್ಚಿಕೊಳ್ಳುವ ಬಗೆಯನ್ನು ಅವರು ಟೀಕಿಸಿದ್ದಾರೆ.
ಕುವೈತ್‌ನಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಪಾಕ್ ವಿರುದ್ಧ ಕಿಡಿ ಕಾರಿದರು. ಪಾಕಿಸ್ತಾನಕ್ಕೆ ಸರಿಯಾಗಿ ನಕಲು ಕೂಡ ಮಾಡಲು ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಚೀನಾದ ಮಿಲಿಟರಿ ಕವಾಯತು ಫೋಟೋವನ್ನು ಭಾರತದ ವಿರುದ್ಧದ ವಿಜಯದ ಪುರಾವೆಯಾಗಿ ಬಿಂಬಿಸಲು ಹೊರಟಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಒಂದು ಫೋಟೋ ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಅದು ಚೀನಾದ ಮಿಲಿಟರಿ ಕವಾಯಿತು ನಡೆಸುವಾಗ ತೆಗೆದ ಫೋಟೋ. ಮೂರ್ಖ ಜೋಕರ್‌ಗಳು ಭಾರತದೊಂದಿಗೆ ಸ್ಪರ್ಧಿಸಲು ಬಯಸುತ್ತಾರೆ" ಎಂದು ಓವೈಸಿ ವ್ಯಂಗ್ಯವಾಡಿದರು. "ಅವರು 2019 ರ ಚೀನಾ ಸೇನೆಯ ಕವಾಯತಿನ ಛಾಯಾಚಿತ್ರವನ್ನು ನೀಡಿದ್ದು, ಇದು ಭಾರತದ ವಿರುದ್ಧದ ವಿಜಯ ಎಂದು ಹೇಳಿಕೊಂಡಿದ್ದಾರೆ. ಎಷ್ಟೇ ಆಗಲಿ ಪಾಕ್ ತನ್ನ ಬುದ್ಧಿಯ್ನು ಎಲ್ಲಿ ಬಿಡುತ್ತದೆ ಎಂದು ಅವರು ಹೇಳಿದ್ದಾರೆ.
ನಕಲು ಮಾಡಲು ಮಾಡಲು ಸ್ವಲ್ಪ ಆದರೂ ಬುದ್ಧಿ ಬೇಕಾಗುತ್ತದೆ. ಆದರೆ ಮೂರ್ಖ ಪಾಕ್ ಬಳಿ ಅದೂ ಕೂಡ ಇಲ್ಲ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಪ್ರಚಾರದಿಂದ ದಾರಿ ತಪ್ಪಬೇಡಿ ಎಂದು ಓವೈಸಿ ಎಚ್ಚರಿಸಿದ್ದಾರೆ. ವಾಸ್ತವದಲ್ಲಿ, ಈ ಚಿತ್ರವು ಹಳೆಯದಾಗಿದ್ದು, ಕಳೆದ ಐದು ವರ್ಷಗಳಲ್ಲಿ ಹಲವಾರು ಬಾರಿ ಬಳಸಲಾಗಿದೆ. ಇದು PHL-03 ರದ್ದಾಗಿದ್ದು, ಇದು ಚೀನೀ ಮೂಲದ ಬಹು ರಾಕೆಟ್ ಲಾಂಚರ್ ಆಗಿದೆ. ಛಾಯಾಗ್ರಾಹಕ ಹುವಾಂಗ್ ಹೈ ಇದನ್ನು ಸೆರೆಹಿಡಿದಿದ್ದಾರೆ, ಇದನ್ನು ಮೊದಲು 2019 ರಲ್ಲಿ ಹಂಚಿಕೊಳ್ಳಲಾಯಿತು.
ಈ ಸುದ್ದಿಯನ್ನೂ ಓದಿ: Operation Sindoor: ಜಗತ್ತಿನೆದುರು ಪಾಕಿಗಳ ಬಣ್ಣ ಬಯಲು ಮಾಡಲು ಸರ್ವ ಪಕ್ಷ ನಿಯೋಗ ಸಜ್ಜು ; ವಿದೇಶಕ್ಕೆ ಹೊರಟ ಸದಸ್ಯರು
ಶಶಿ ತರೂರ್ ನೇತೃತ್ವದ ನಿಯೋಗವು ದಕ್ಷಿಣ ಅಮೆರಿಕಾದ ದೇಶಗಳಾದ ಗಯಾನಾ, ಪನಾಮ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೂ ಭೇಟಿ ನೀಡಲಿದೆ. ಭಯೋತ್ಪಾದನೆಯ ಪಿಡುಗಿನ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲುವುದು ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ವಿವರಿಸಲು ಬಯಸಿದ್ದೇವೆ. 9/11 ರ ನಂತರ ಅಮೆರಿಕ ತನ್ನ ದೃಢಸಂಕಲ್ಪ ತೋರಿಸಿದಂತೆಯೇ, ನಮ್ಮ ದೇಶವೂ ಏಪ್ರಿಲ್ 22 ರಂದು ನಮ್ಮ ಮೇಲೆ ದಾಳಿ ಮಾಡಿದ ದುಷ್ಟ ಶಕ್ತಿಗಳ ವಿರುದ್ಧ ನಿಂತಿದೆ ಎಂದು ತರೂರ್ ಹೇಳಿದ್ದಾರೆ.