ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಡ್ರೈವ್‌ ಮಾಡ್ತಿದ್ದಾಗಲೇ ಬಸ್‌ ಚಾಲಕನಿಗೆ ಹೃದಯಾಘಾತ- ಆಮೇಲೆ ನಡೆದಿದ್ದೇ ಒಂದು ಪವಾಡ!!

Tamil Nadu Viral Video: ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಶುಕ್ರವಾರ ಖಾಸಗಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಈ ವೇಳೆ ಕಂಡಕ್ಟರ್ ಮತ್ತು ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಭಾರಿ ಅಪಘಾತವೊಂದು ತಪ್ಪಿದೆ. ಬಸ್‌ನೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವೀಡಿಯೊದಲ್ಲಿ, ಹೃದಯಾಘಾತದಿಂದ ಚಾಲಕ ಪ್ರಭು ಮೂರ್ಛೆ ಹೋಗಿ ವಾಹನದ ನಿಯಂತ್ರಣ ಕಳೆದುಕೊಂಡ ಕ್ಷಣದಲ್ಲಿ, ಕಂಡಕ್ಟರ್ ಮತ್ತು ಪ್ರಯಾಣಿಕರು ಧಾವಿಸಿ ಸಹಾಯ ಮಾಡುವ ದೃಶ್ಯ ಕಂಡುಬಂದಿದೆ.

ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ..!

ಹೃದಯಾಘಾತವಾದ ಬಸ್ ಚಾಲಕ

Profile Sushmitha Jain May 24, 2025 4:01 PM

ದಿಂಡಿಗಲ್: ತಮಿಳುನಾಡಿನ (Tamil Nadu) ದಿಂಡಿಗಲ್ (Dindigul) ಜಿಲ್ಲೆಯಲ್ಲಿ ಶುಕ್ರವಾರ ಖಾಸಗಿ ಬಸ್ ಚಾಲಕ(Bus driver)ನಿಗೆ ಹೃದಯಾಘಾತವಾಗಿ (Heart Attack) ಸಾವನ್ನಪ್ಪಿದ್ದು, ಈ ವೇಳೆ ಕಂಡಕ್ಟರ್ (Conductor) ಮತ್ತು ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಭಾರಿ ಅಪಘಾತವೊಂದು ತಪ್ಪಿದೆ. ಬಸ್‌ನೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವೀಡಿಯೊದಲ್ಲಿ, ಹೃದಯಾಘಾತದಿಂದ ಚಾಲಕ ಪ್ರಭು ಮೂರ್ಛೆ ಹೋಗಿ ವಾಹನದ ನಿಯಂತ್ರಣ ಕಳೆದುಕೊಂಡ ಕ್ಷಣದಲ್ಲಿ, ಕಂಡಕ್ಟರ್ ಮತ್ತು ಪ್ರಯಾಣಿಕರು ಧಾವಿಸಿ ಸಹಾಯ ಮಾಡುವ ದೃಶ್ಯ ಕಂಡುಬಂದಿದೆ. ಕಂಡಕ್ಟರ್ ತಕ್ಷಣ ತುರ್ತು ಬ್ರೇಕ್ ಎಳೆದು ಬಸ್‌ನ್ನು ನಿಲ್ಲಿಸಿದ್ದಾರೆ, ಆಗ ಪ್ರಯಾಣಿಕರು ಚಾಲಕನಿಗೆ ಸಹಾಯ ಮಾಡಿದ್ದಾರೆ.

ಪುದುಕೊಟ್ಟೈಗೆ ಸಾಗುತ್ತಿದ್ದ ಈ ಖಾಸಗಿ ಬಸ್ ಕನಕಂಪಟ್ಟಿಯನ್ನು ದಾಟುತ್ತಿರುವಾಗ, ಪ್ರಭು ಕಂಡಕ್ಟರ್‌ಗೆ ಕರೆ ಮಾಡಿ ತೀವ್ರ ಎದೆನೋವಿನ ಬಗ್ಗೆ ತಿಳಿಸಲು ಯತ್ನಿಸಿದ್ದರು. ಆದರೆ ಪ್ರತಿಕ್ರಿಯಿಸುವ ಮೊದಲೇ ಅವರು ಮೂರ್ಛೆ ಹೋದರು. ಚಾಲಕ ಪ್ರಜ್ಞೆ ತಪ್ಪಿದ್ದನ್ನು ಗಮನಿಸಿದ ಕಂಡಕ್ಟರ್ ಬಸ್‌ನ್ನು ತಕ್ಷಣದಲ್ಲೇ ನಿಲ್ಲಿಸಿ ಅಪಘಾತವನ್ನು ತಡೆದರು. ಪೊಲೀಸರು ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಬಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕಂಡಕ್ಟರ್ ಹಾಗೂ ಪ್ರಯಾಣಿಕರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.



ಕಳೆದ ವರ್ಷ ನವೆಂಬರ್‌ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚಾಲಕ ಕಿರಣ್ (39) ಎಂಬಾತ, ಯಶವಂತಪುರದ ಬಳಿ ಬಸ್ ಚಾಲನೆ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರು ನೆಲಮಂಗಲದಿಂದ ಯಶವಂತಪುರಕ್ಕೆ ಬಸ್ ಚಾಲನೆ ಮಾಡುತ್ತಿರುವಾಗ ತೀವ್ರ ಎದೆನೋವಿನಿಂದ ಮೂರ್ಛೆಗೆ ಹೋಗಿದ್ದರು.

ಈ ಸುದ್ದಿಯನ್ನು ಓದಿ: Viral News: ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ಸೈನಿಕನ ಮದುವೆ ಆಮಂತ್ರಣ ಪತ್ರಿಕೆ; ಏನಿದೆ ಇದರಲ್ಲಿ?

ಇತ್ತೀಚೆಗೆ, ಹಲವಾರು ಹೃದಯಾಘಾತ ಘಟನೆಗಳು ವರದಿಯಾಗಿವೆ. ಈ ತಿಂಗಳ ಆರಂಭದಲ್ಲಿ, ಉತ್ತರ ಪ್ರದೇಶದ ಬದಾಯುನ್‌ನಲ್ಲಿ 22 ವರ್ಷದ ವಧುವೊಬ್ಬಳು ತನ್ನ ಮದುವೆಗೆ ಒಂದು ದಿನ ಮೊದಲು ಹಳದಿ ಸಮಾರಂಭದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಳು. ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಛತ್ತೀಸ್‌ಗಢದ ಅಂಬಿಕಾಪುರದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್ ಸ್ಟಾರ್ಟ್ ಮಾಡುವಾಗ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿದ್ದರು.

ಇದಕ್ಕೂ ಕೆಲವು ದಿನ ಮೊದಲು, ಉತ್ತರ ಪ್ರದೇಶದ ಬರೇಲಿಯಲ್ಲಿ 50 ವರ್ಷದ ವಾಸಿಮ್ ಸರ್ವತ್ ಎಂಬಾತ ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದರು.