ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ವ್ಯಕ್ತಿ!

Viral News: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಇಡೀ ಜಗತ್ತೆ ತಲೆಕೆಡಿಸಿಕೊಳ್ಳುವಂತಹ ಘಟನೆ ಯೊಂದು ನಡೆದಿದೆ. ಕೇವಲ ಸೆಂಟ್ರಲ್ ಜೈಲು ಹೇಗಿರುತ್ತೆ ಎನ್ನುವ ಕುತೂಹಲದಿಂದ ವ್ಯಕ್ತಿಯೊಬ್ಬ ಹೆಂಡತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಜೈಲಿನೊಳಗೆ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದಲೇ ಈ ಅಪರಾಧ ಮಾಡಿದ್ದೇನೆ ಎಂದು ಈ ಕಿಲಾಡಿ ಹೇಳಿಕೊಂಡಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಗೆ ಪಿಸ್ತೂಲ್ ತೋರಿಸಿದ ಕಿಲಾಡಿ

ಇಟಾವಾ,ಜೂ.4: ಇಂದು ಜಗತ್ತಿನಲ್ಲಿ ವಿಚಿತ್ರವಾದ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಇಡೀ ಜಗತ್ತೆ ತಲೆಕೆಡಿಸಿಕೊಳ್ಳುವಂತಹ ಘಟನೆಯೊಂದು ನಡೆದಿದೆ. ಕೇವಲ ಸೆಂಟ್ರಲ್ ಜೈಲು ಹೇಗಿರುತ್ತೆ ಎನ್ನುವ ಕುತೂಹಲದಿಂದ ವ್ಯಕ್ತಿಯೊಬ್ಬ ಹೆಂಡತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಜೈಲಿನೊಳಗೆ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದಲೇ ಈ ಅಪರಾಧ ಮಾಡಿದ್ದೇನೆ ಎಂದು ಈ ಕಿಲಾಡಿ ಹೇಳಿಕೊಂಡಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ಆ ವ್ಯಕ್ತಿ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಮಾತನ್ನು ಕೇಳಿಯೇ ವೀಕ್ಷಕರು ಆಘಾತಕ್ಕೊಳಗಾಗಿದ್ದಾರೆ.. ಸೆಂಟ್ರಲ್ ಜೈಲು ಒಳಗಡೆಯಿಂದ ಹೇಗಿರುತ್ತೆ ಎಂದು ನೋಡುವ ಹುಚ್ಚು ಆಸೆಗೆಯೇ ಹೆಂಡತಿಯ ಎದೆಗೆ ಪಿಸ್ತೂಲ್ ಇಡಲು ಮುಂದಾಗಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

ವಿಡಿಯೋ ನೋಡಿ:



ವೈರಲ್ ಕ್ಲಿಪ್‌ನಲ್ಲಿ, ಆ ವ್ಯಕ್ತಿ ತನ್ನನ್ನು ಕೋಮಲ್ ಸಿಂಗ್ ಎಂದು ಗುರುತಿಸಿಕೊಂಡಿದ್ದು ಅಹೇರಿ ಪುರ ಪ್ರದೇಶದಲ್ಲಿ ಮರಳು ಮತ್ತು ಜಲ್ಲಿಕಲ್ಲು ಸಾಗಿಸುವ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಈ ಹಿಂದೆ ಸಣ್ಣ ಪುಟ್ಟ ಪ್ರಕರಣದಲ್ಲಿ ಭಾಗಿಯಾಗಿ ಸ್ಥಳೀಯ ಜೈಲಿಗೆ‌ ಹೋಗಿ ಬಂದಿದ್ದಾನೆ. ಈ ಭಾರೀ ಸೆಂಟ್ರಲ್ ಜೈಲು ನೋಡಬೇಕು ಎನ್ನುವ ಆಸೆಯಾಗಿ ಹೆಂಡತಿಯನ್ನು ಹೊಡೆಯಲು ಮುಂದಾದೆ ಎಂದು ಪೊಲೀಸರ ಎದುರೇ ಹೇಳಿಕೊಂಡಿದ್ದಾನೆ.

Viral Video: ಕ್ಯೂಟ್ ಮಕ್ಕಳ ಗಂಭೀರ ಚರ್ಚೆ; ಇದು ಶಾಲೆಯ ಕ್ಯಾಬಿನೆಟ್‌ ಮೀಟಿಂಗ್ ಎಂದ ನೆಟ್ಟಿಗರು!

ಘಟನೆಯ ನಂತರ ಸ್ವಯಂಪ್ರೇರಣೆಯಿಂದ ಪೊಲೀಸರ ಬಳಿಗೆ ಹೋಗಿ ಆತ ತಪ್ಪೊಪ್ಪಿ ಕೊಂಡಿದ್ದಾನೆ‌.​ ಆತ ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶಸ್ತ್ರಾಸ್ತ್ರ ಹಾಗೂ ಗುಂಡುಗಳನ್ನು ಒಪ್ಪಿಸಿದ್ದಾನೆ. ​ಮನೆಯಲ್ಲಿ ಯಾವುದೇ ದೊಡ್ಡ ಜಗಳವಿಲ್ಲ, ಆದರೆ, ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳು ಇಲ್ಲದ ಕಾರಣ ದಂಪತಿ ನಡುವೆ ಆಗಾಗ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು, ಆದರೆ ಹೆಂಡತಿಯ ಜೊತೆ ದ್ವೇಷ ಇಲ್ಲ ಎಂದಿದ್ದಾನೆ..ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಹೆಂಡತಿಗೆ ಬಂದೂಕಿನಿಂದ ಬೆದರಿಕೆ ಹಾಕುವುದು ಗಂಭೀರ ಅಪರಾಧ..ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಲವಾರು ಜನರು ಕಾಮೆಂಟ್ ನಲ್ಲಿ ಬರೆದಿದ್ದಾರೆ.