Viral Video: ಕ್ಯೂಟ್ ಮಕ್ಕಳ ಗಂಭೀರ ಚರ್ಚೆ; ಇದು ಶಾಲೆಯ ಕ್ಯಾಬಿನೆಟ್ ಮೀಟಿಂಗ್ ಎಂದ ನೆಟ್ಟಿಗರು!
ಮಕ್ಕಳ ಕ್ಯೂಟ್ ಆದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕಿಂಡರ್ ಗಾರ್ಡನ್‌ನಲ್ಲಿ ಕಲಿಯುವ ಪುಟ್ಟ ಮೂವರು ಮಕ್ಕಳು ತಮ್ಮ ಊಟದ ವಿರಾಮದ ಅವಧಿ ಯಲ್ಲಿ ಗಂಭೀರವಾದ ಚರ್ಚೆಯಲ್ಲಿ ಮುಳುಗಿದ್ದು ಇದನ್ನು ಶಿಕ್ಷಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ಪುಟ್ಟ ಮಕ್ಕಳ ಕ್ಯೂಟ್ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಶಾಲೆಯಲ್ಲಿ ಕ್ಯೂಟ್ ಮಕ್ಕಳ ಗಂಭೀರ ಚರ್ಚೆ -
ನವದೆಹಲಿ: ಮಕ್ಕಳ ತುಂಟಾಟಗಳನ್ನು ಕಾಣುವುದು ಬಹಳ ಖುಷಿ ನೀಡುತ್ತದೆ. ಚಿಕ್ಕ ಮಕ್ಕಳು ತೊದಲು ಮಾತನಾಡುವುದು, ದೊಡ್ಡವರಂತೆ ವಾಗ್ವಾದ ಮಾಡುವುದು ನೋಡಲು ಕೆಲ ವೊಮ್ಮೆ ಬಹಳ ತಮಾಷೆಯಾಗಿ ಇರಲಿದೆ. ಅಂತೆಯೇ ಮಕ್ಕಳ ಕ್ಯೂಟ್ ಆದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ. ಕಿಂಡರ್ ಗಾರ್ಟನ್ (kindergarten) ನಲ್ಲಿ ಕಲಿಯುವ ಪುಟ್ಟ ಮೂವರು ಮಕ್ಕಳು ತಮ್ಮ ಊಟದ ವಿರಾಮದ ಅವಧಿ ಯಲ್ಲಿ ಗಂಭೀರವಾದ ಚರ್ಚೆಯಲ್ಲಿ ಮುಳುಗಿದ್ದು ಇದನ್ನು ಶಿಕ್ಷಕರು ತಮ್ಮ ಮೊಬೈಲ್ ಕ್ಯಾಮರಾ ದಲ್ಲಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ಪುಟ್ಟ ಮಕ್ಕಳ ಕ್ಯೂಟ್ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
@tv1indialive ಎಂಬ ಇನ್ ಸ್ಟಾ ಗ್ರಾಂ ಪೇಜ್ ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಮೂವರು ಮಕ್ಕಳು ತಮ್ಮ ಊಟದ ವಿರಾಮದ ಸಮಯದಲ್ಲಿ ಗಂಭೀರ ಚರ್ಚೆ ಯಲ್ಲಿ ಮುಳುಗಿರುವುದನ್ನು ಕಾಣಬಹುದು. ಅವರು ದೊಡ್ಡವರಂತೆ ವರ್ತಿಸುವುದು, ಸನ್ನೆಗಳನ್ನು ಮಾಡುವ ಕ್ಯೂಟ್ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ ಈ ಕ್ಲಿಪ್ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಈ ಮೂಲಕ ನೆಟ್ಟಿಗರು ಈ ವಿಡಿಯೋ ಕಂಡು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ:
ಈ ವಿಡಿಯೋದಲ್ಲಿ ಇರುವ ಮಕ್ಕಳ ಶಾಲೆ, ಹೆಸರು ಇನ್ನು ಕೂಡ ತಿಳಿದು ಬಂದಿಲ್ಲ. ಮೂವರು ಮಕ್ಕಳು ಕೂಡ ಕೆಂಪು ಬಣ್ಣದ ಸಮವಸ್ತ್ರವನ್ನು ಧರಿಸಿ, ತರಗತಿಯ ಮೇಜಿನ ಬಳಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಅದರಲ್ಲಿ ಓರ್ವ ಹುಡುಗಿ ತನ್ನ ಕೈಗಳಿಂದ ಸನ್ನೆ ಮಾಡುತ್ತಾಳೆ, ಉಳಿದವರು ಪೂರ್ಣ ಏಕಾಗ್ರತೆ ಯಿಂದ ಆಕೆಯ ಮಾತನ್ನು ಭಾರೀ ಗಂಭೀರವಾಗಿ ಕೇಳಿದ್ದಾರೆ. ಇದಕ್ಕೆ ಧಾರವಾಹಿಯಲ್ಲಿ ಬರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಎಡಿಟ್ ಮಾಡಿ ಹಾಕಲಾಗಿದೆ.
Viral Video: ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ: ಎದೆ ಝಲ್ ಎನಿಸುತ್ತೆ ಈ ದೃಶ್ಯ!
ಮಕ್ಕಳು ತಮ್ಮ ವಿರಾಮದ ವೇಳೆಯಲ್ಲಿ ಗಂಭೀರವಾಗಿ ಚರ್ಚೆ ಮಾಡಿದ್ದು ಆ ಶಾಲೆಯ ಶಿಕ್ಷಕ ರೊಬ್ಬರು ವಿಡಿಯೋ ಮಾಡಿದ್ದಾಗಿದೆ ಎಂದು ಕ್ಯಾಪ್ಚನ್ ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಕಂಡ ಬಳಕೆದಾರರೊಬ್ಬರು ಈ ಮಕ್ಕಳು ತರಗತಿ ಯಲ್ಲಿ ರಾಜಕೀಯ ವಿಚಾರದ ಬಗ್ಗೆ ಚರ್ಚಿಸುತ್ತಿ ದ್ದಿರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಶಾಲೆಯಲ್ಲಿ ಇದ್ದಾರೋ ಅಥವಾ ಬೋರ್ಡ್ ಮೀಟಿಂಗ್ ನಲ್ಲಿದ್ದಾರೆ ಎಂಬ ಅನುಮಾನ ಮೂಡುವಂತಿದೆ ಎಂದು ಮತ್ತೊಬ್ಬ ನೆಟ್ಟಿಗರೊಬ್ಬರು ತಮಾಷೆಯಾಗಿ ಕಾಮೆಂಟ್ ಹಾಕಿದ್ದಾರೆ. ಮಕ್ಕಳ ಮುಗ್ದ ಸ್ವಭಾವ ತುಂಬಾ ಮುದ್ದಾಗಿ ಮೂಡಿ ಬಂದಿದೆ.. ಮಕ್ಕಳ ನಿಷ್ಕಲ್ಮಶ ಭಾವನೆ, ಪ್ರೀತಿ , ದೊಡ್ಡವರನ್ನು ಅನುಕರಣೆ ಮಾಡುವ ವಿಧಾನ ಎಲ್ಲವೂ ಈ ವಿಡಿಯೋದಲ್ಲಿ ಕಾಣಬಹುದು