ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟಾರ್‌ಬಕ್ಸ್ ಪಾನೀಯದಲ್ಲಿ ಸತ್ತ ನೊಣ ಪತ್ತೆ: ವಿಡಿಯೊ ವೈರಲ್‌

Viral News: ಗ್ರಾಹಕರ ಆರೋಗ್ಯ ಚಿಂತಿಸದೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡದೇ ಇರುವ ಬಗ್ಗೆ ಅನೇಕ‌ ದೂರುಗಳು ಕೇಳಿಬಂದಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ 500 ರೂಪಾಯಿ ಮೌಲ್ಯದ ಸ್ಟಾರ್‌ಬಕ್ಸ್ ಪಾನೀಯದಲ್ಲಿ ಸತ್ತ ನೊಣವೊಂದು ಕಂಡು ಬಂದಿದೆ.

ಸ್ಟಾರ್‌ಬಕ್ಸ್ ಪಾನೀಯದಲ್ಲಿ ಸತ್ತ ನೊಣ ಪತ್ತೆ

​ನವದೆಹಲಿ, ಸೆ. 24: ಇತ್ತೀಚಿನ ದಿನದಲ್ಲಿ ಆಹಾರ ಸುರಕ್ಷತೆ ಬಗ್ಗೆ ಪ್ರಶ್ನಿಸುವಂತಹ ಅನೇಕ ಘಟನೆಗಳು ನಡೆಯುತ್ತವೆ. ಗ್ರಾಹಕರ ಆರೋಗ್ಯ ಚಿಂತಿಸದೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡದೇ ಇರುವ ಬಗ್ಗೆ ಅನೇಕ‌ ದೂರುಗಳು ಕೇಳಿಬಂದಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ 500 ರೂಪಾಯಿ ಮೌಲ್ಯದ ಸ್ಟಾರ್‌ಬಕ್ಸ್ ಪಾನೀಯದಲ್ಲಿ ಸತ್ತ ನೊಣವೊಂದು ಕಂಡು ಬಂದಿದೆ. ಇದು ನೈರ್ಮಲ್ಯ ಮತ್ತು ಹಣ್ಣಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು (Viral News) ಹುಟ್ಟುಹಾಕಿದೆ.

ಶಿಖಾ ಎಂಬ ಕಂಟೆಂಟ್ ಕ್ರಿಯೇಟರ್ ಒಬ್ಬರು ತಾವು ಖರೀದಿಸಿದ 500 ರೂಪಾಯಿ ಮೌಲ್ಯದ ಸ್ಟಾರ್‌ಬಕ್ಸ್‌ನ ಸ್ಟ್ರಾಬೆರಿ ಹಣ್ಣಿನ ಪಾನೀಯದಲ್ಲಿ ಸತ್ತ ನೊಣವೊಂದು ಅಂಟಿಕೊಂಡಿರುವುದನ್ನು ವಿಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಾಜಾ ಹಣ್ಣುಗಳನ್ನು ಹೊಂದಿರುವ ಜ್ಯೂಸ್ ಎಂದು ಖರೀದಿಸಿದರೂ ಇದರ ಒಳಗೆ ಕೀಟವು ಹೇಗೆ ಸೇರಿಕೊಂಡಿರಬಹುದು ಎಂದು ಶಿಖಾ ಪ್ರಶ್ನಿಸಿದ್ದಾರೆ. ಅಲ್ಲದೆ, ಪಾನೀಯಕ್ಕಾಗಿ ತಾವು ಪಾವತಿಸಿದ ಬೆಲೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ:



ಈ ವಿಡಿಯೊ ಶೇರ್ ಮಾಡಿ, ʼʼನಾವು ಒಂದು ಜ್ಯೂಸ್‌ಗೆ 500 ರೂಪಾಯಿ ನೀಡಿದರೂ ಸಿಗುವುದು ಇದೇನಾ? ನಮ್ಮ ಆರೋಗ್ಯಕ್ಕೆ ಬೆಲೆ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ. ಅವರು ಕಪ್ ತೋರಿಸಿ, ಪಾನೀಯದೊಳಗಿನ ಹಣ್ಣಿನತ್ತ ಕ್ಯಾಮೆರಾವನ್ನು ತಿರುಗಿಸಿದ್ದಾರೆ. ಜೂಮ್ ಮಾಡಿದಾಗ, ಕೀಟವೊಂದು ಅಂಟಿಕೊಂಡಿರುವುದು ಕಂಡು ಬಂದಿದೆ. ಆದರೆ ಈ ​ಈ ಘಟನೆ ಎಲ್ಲಿ ನಡೆದಿದೆ ಎಂಬುದನ್ನು ವಿಡಿಯೊದಲ್ಲಿ ತಿಳಿಸಿಲ್ಲ.

ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ

ನೆಟ್ಟಿಗರು ಈ ವಿಡಿಯೊ ನೋಡಿ ಕಳವಳ ವ್ಯಕ್ತಪಡಿಸಿದಾಗ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟಾರ್‌ಬಕ್ಸ್ ಇಂಡಿಯಾ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ. ಈ ಘಟನೆಯು ಯಾವ ಔಟ್‌ಲೆಟ್‌ನಲ್ಲಿ ನಡೆದಿದೆ ಎನ್ನುವುದು ತಕ್ಷಣವೇ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದೆ. ಪರಿಶೀಲನೆ ನಡೆಸಿದ ಯಾವ ಮಳಿಗೆಯಲ್ಲೂ ಯಾವುದೇ ನೈರ್ಮಲ್ಯ ಲೋಪಗಳು ಕಂಡುಬಂದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಸದ್ಯ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಣ್ಣುಗಳು ಹಾಗೂ ಇತರ ಪದಾರ್ಥಗಳನ್ನು ಹೇೆಗೆ ನಿರ್ವಹಿಸಲಾಗುತ್ತದೆ ಎಂಬುದರ ಕುರಿತು ಈ ಪೋಸ್ಟ್ ಚರ್ಚೆಗೆ ಕಾರಣವಾಯಿತು. ಇತ್ತೀಚೆಗೆ ಗುಜರಾತ್‌ನ ರಾಜ್‌ಕೋಟ್ ರೆಸ್ಟೋರೆಂಟ್‌ ಒಂದರಲ್ಲಿ ಗ್ರಾಹಕರೊಬ್ಬರು ರೆಕಾರ್ಡ್ ಮಾಡಿದ ದೃಶ್ಯ ಭಾರಿ ವೈರಲ್ ಆಗಿತ್ತು. ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್ ಮೇಜಿನ ಮೇಲೆ ಇಲಿಗಳು ಓಡಾಡುತ್ತಿರುವುದು ಕಂಡುಬಂದಿದ್ದವು. ಈ ಘಟನೆ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ದಂಡ ವಿಧಿಸಿದ್ದರು.