ಸರ್ಕಾರದ ನಿರ್ಲಕ್ಷ್ಯ; ನಿರ್ಮಾಣ ಹಂತದ ಗುಂಡಿಗೆ ಬಿದ್ದು ಬೈಕ್ ಸವಾರ 12 ಕ್ಕೂ ಅಧಿಕ ಗಂಟೆ ನರಳಿ ನರಳಿ ಸಾವು
Viral Video: ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಜನಕಪುರಿಯಲ್ಲಿ ನಿರ್ಮಾಣ ಹಂತದ ಗುಂಡಿಯ ಒಳಗೆ ಬಿದ್ದು ದೆಹಲಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೈಲಾಶ್‌ಪುರಿ ನಿವಾಸಿ ಕಮಲ್ ಎಂದು ಗುರುತಿಸಲಾಗಿದೆ. ಈ ಘಟನೆಯು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.
ನಿರ್ಮಾಣ ಹಂತದ ಗುಂಡಿಗೆ ಬಿದ್ದು ದೆಹಲಿ ವ್ಯಕ್ತಿಯ ಸಾವು -
ನವದೆಹಲಿ,ಫೆ.6: ಇಂದು ರಸ್ತೆ ಅವ್ಯವಸ್ಥೆಯಿಂದ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ. ವಿವಿಧ ನಗರದಲ್ಲಿ ರಸ್ತೆಗುಂಡಿಯಿಂದ ನಾನಾ ಸಮಸ್ಯೆಗಳು ನಡೆಯುತ್ತಲೇ ಇದೆ. ಅಂತೆಯೇ ರಾಷ್ಟ್ರ ರಾಜಧಾನಿಯಲ್ಲಿ (Delhi News) ಭೀಕರ ಅಪಘಾತವೊಂದು ಸಂಭವಿಸಿದೆ. ಜನಕಪುರಿಯಲ್ಲಿ ನಿರ್ಮಾಣ ಹಂತದ ಗುಂಡಿಯ ಒಳಗೆ ಬಿದ್ದು ದೆಹಲಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೈಲಾಶ್‌ಪುರಿ ನಿವಾಸಿ ಕಮಲ್ ಎಂದು ಗುರುತಿಸಲಾಗಿದೆ. ಈ ಘಟನೆಯು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.
ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸ್ಥಳದಲ್ಲಿ ಬೃಹತ್ ಹೊಂಡದೊಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರು ಕೈಲಾಶ್‌ಪುರಿ ನಿವಾಸಿಯಾಗಿದ್ದು ರೋಹಿಣಿಯ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಡರಾತ್ರಿ ತಮ್ಮ ಕಚೇರಿಯಿಂದ ಮನೆಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ.ಆದರೆ ತುಂಬಾ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಹುಡುಕಲು ಪ್ರಾರಂಭಿಸಿದ್ದು ಹಲವು ಪೊಲೀಸ್ ಠಾಣೆಗಳ ಹತ್ತಿರ ಹುಡುಕಾಟ ನಡೆಸಿದ್ದಾರೆ.
ವಿಡಿಯೋ ನೋಡಿ:
#WATCH | Janakpuri, Delhi | A biker dies allegedly due to falling into a pit. Further details awaited. pic.twitter.com/7kja0wll1M
— ANI (@ANI) February 6, 2026
ದೆಹಲಿ ಪೊಲೀಸರು ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಜನಕಪುರಿಯ ಜಿಲ್ಲಾ ಕೇಂದ್ರದ ಸಮೀಪವಿರುವ ರಸ್ತೆ ಕಾಮಗಾರಿ ಗುಂಡಿಯಲ್ಲಿ ಬೈಕ್ ಮತ್ತು ಮೃತದೇಹ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
Viral News: ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್
ಪ್ರಾಥಮಿಕ ತನಿಖೆಯಲ್ಲಿ ಈ ಗುಂಡಿ ದೆಹಲಿ ಜಲ ಮಂಡಳಿಯ ಕೆಲಸದ ಸ್ಥಳದ ಭಾಗವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸುಮಾರು 8:30ರ ಹೊತ್ತಿಗೆ ಮೃತದೇಹವನ್ನು ಗುಂಡಿ ಯಿಂದ ಹೊರತೆಗೆಯಲಾಯಿತು. ಜಲ ಮಂಡಳಿಯು ಗುಂಡಿಯ ಹತ್ತಿರ ಸರಿಯಾದ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಹಾಕಿರಲಿಲ್ಲ ಎಂದು ಸಂಬಂಧಿಕರು ಕೂಡ ಆರೋಪಿಸಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ನೋಯ್ಡಾದಲ್ಲಿ ಇದೇ ರೀತಿಯ ಘಟನೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಮೃತಪಟ್ಟಿದ್ದ ಘಟನೆ ಕೂಡ ವರದಿಯಾಗಿತ್ತು.