Viral Video: ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಸಿಕ್ಕಿಬಿದ್ದ ಡೆಲಿವರಿ ಬಾಯ್! ಹೀನ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Delivery agent urinating in lift: ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ನ ವಿತರಣಾ ಕಾರ್ಯನಿರ್ವಾಹಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮುಂಬೈನ ಪಾಲ್ಘರ್ ಜಿಲ್ಲೆಯ ಸಿಡಿ ಗುರುದೇವ್ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.


ಮುಂಬೈ: ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಡೆಲಿವರಿ ಬಾಯ್‌ವೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಮುಂಬೈನ ವಿರಾರ್ ಪಶ್ಚಿಮದಲ್ಲಿರುವ ವಸತಿ ಕಟ್ಟಡದ ಲಿಫ್ಟ್‌ನಲ್ಲಿ ವಿತರಣಾ ಕಾರ್ಯನಿರ್ವಾಹಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪಾಲ್ಘರ್ ಜಿಲ್ಲೆಯ ಸಿಡಿ ಗುರುದೇವ್ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ದೃಶ್ಯಾವಳಿಯಲ್ಲಿ, ಡೆಲಿವರಿ ಏಜೆಂಟ್ ಎಡಗೈಯಲ್ಲಿ ಪಾರ್ಸೆಲ್ ಹಿಡಿದು ಲಿಫ್ಟ್ ಒಳಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಹಿಂಭಾಗ ಕ್ಯಾಮರಾ ಇರುವುದರಿಂದ ತಾನು ಮಾಡುತ್ತಿರುವ ಕ್ರಿಯೆಯನ್ನು ಮರೆಮಾಡಲು ಪ್ರಯತ್ನಿಸುತ್ತಾ, ಅವನು ತನ್ನ ಪ್ಯಾಂಟ್‌ನ ಜಿಪ್ ತೆಗೆದು ಲಿಫ್ಟ್‌ನ ಮುಂಭಾಗದ ಗೇಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ.
ವೈರಲ್ ಆಗುತ್ತಿರುವ ವಿಡಿಯೊ ಇಲ್ಲಿದೆ
Warning: Viewer discretion advised
— Mid Day (@mid_day) July 21, 2025
A disturbing incident has been reported from the CD Gurudev Building in Virar West, where a Blinkit delivery agent allegedly urinated inside the building’s lift on Friday afternoon.
The act came to light when residents noticed the situation… pic.twitter.com/HJNYCVvpIx
ನಿವಾಸಿಗಳು ಲಿಫ್ಟ್ ಒಳಗೆ ಪ್ರವೇಶಿಸಿದಾಗ ಯಾರೋ ಮೂತ್ರ ವಿಸರ್ಜನೆ ಮಾಡಿದಂತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿತು. ಬ್ಲಿಂಕಿಟ್ ಜಾಕೆಟ್ ಧರಿಸಿದ ಡೆಲಿವರಿ ಏಜೆಂಟ್ ಈ ಕೃತ್ಯ ಎಸಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Viral News: ಕಾರ್ ಒಳಗೆ ಕೈ ಕಾಲು ಕಟ್ಟಿ, ಊಟ-ನೀರು ಕೊಡದೆ ಚಿತ್ರಹಿಂಸೆ; ಮನಕಲಕುವ ವಿಡಿಯೋ ವೈರಲ್
ವಿತರಣಾ ಕಾರ್ಯನಿರ್ವಾಹಕನ ವರ್ತನೆಗೆ ನಿವಾಸಿಗಳು ಕಿಡಿಕಾರಿದ್ದಾರೆ. ಆಕ್ರೋಶಭರಿತರಾದ ಅವರು ಬ್ಲಿಂಕಿಟ್ ಕಚೇರಿಗೆ ಹೋಗಿ ಜಗಳ ಮಾಡಿದ್ದಾರೆ. ಈ ವೇಳೆ ಘರ್ಷಣೆ ನಡೆದಿದೆ. ಆತನ ಮೇಲೆ ಹಲ್ಲೆ ನಡೆಸಿ, ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ವಿರಾರ್ ಪಶ್ಚಿಮದಲ್ಲಿರುವ ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಘಟನೆಯನ್ನು ದೃಢಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.