ಬೀಜಿಂಗ್: ಫುಡ್ ಡೆಲಿವರಿ ಬಾಯ್ (Food delivery boy) ಒಬ್ಬರು ಪ್ರವಾಸಿಗರಿಗೆ ಕುದುರೆಯಲ್ಲಿ ಬಂದು ಆಹಾರವನ್ನು ಡೆಲಿವರಿ ಮಾಡಿದ್ದಾರೆ. ಈ ಘಟನೆ ಚೀನಾದಲ್ಲಿ (China) ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ವಿಶಾಲವಾದ ಹುಲ್ಲುಗಾವಲಿನಲ್ಲಿ ಪ್ರವಾಸ ಆನಂದಿಸುತ್ತಿದ್ದ ಪ್ರವಾಸಿಗರಿಗೆ ಅವರು ಮಾಡಿರುವ ಆರ್ಡರ್ ತಲುಪಿಸಿವುದು ತನ್ನ ಕರ್ತವ್ಯವೆಂದು ಭಾವಿಸಿ, ವಾಹನದ ಬದಲು ಕುದುರೆಯನ್ನು ಉಪಯೋಗಿಸಿದ್ದಾರೆ. ಈ ಅಪರೂಪದ ದೃಶ್ಯ ಇದೀಗ ಹಲವರ ಗಮನ ಸೆಳೆದಿದೆ. ಈ ಘಟನೆ ಅಕ್ಟೋಬರ್ 1ರಂದು ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಕ್ಸಿಲಿಂಗೋಲ್‌ನಲ್ಲಿ ನಡೆದಿದೆ. ಈ ವಿಡಿಯೊ ಕೂಡಲೇ ನೆಟ್ಟಿಗರ ಗಮನ ಸೆಳೆದಿದೆ.
ವರದಿಗಳ ಪ್ರಕಾರ, ಪ್ರವಾಸಿಗರು ತೆರೆದ ಹುಲ್ಲುಗಾವಲಿಗೆ ತೆರಳಿದ್ದರು. ಅಲ್ಲಿಗೆ ಸಾಮಾನ್ಯ ವಾಹನಗಳು ಅಥವಾ ವಿತರಣಾ ಬೈಕ್‌ಗಳು ಸುಲಭವಾಗಿ ತಲುಪಲು ಸಾಧ್ಯವಾಗುವುದಿಲ್ಲ. ಆರ್ಡರ್ ರದ್ದುಗೊಳಿಸುವ ಅಥವಾ ಗ್ರಾಹಕರನ್ನು ಕಷ್ಟಕ್ಕೆ ಸಿಲುಕಿಸುವ ಬದಲು, ದೃಢನಿಶ್ಚಯ ಮಾಡಿದ ಡೆಲಿವರಿ ಬಾಯ್, ಕುದುರೆಯ ಮೇಲೆ ಸವಾರಿ ಮಾಡಿ ಅವರ ಊಟವನ್ನು ಹಸ್ತಾಂತರಿಸಿದ್ದಾನೆ. ಈ ವೇಳೆ ವಿಶಾಲವಾದ ಬಯಲು ಪ್ರದೇಶವನ್ನು ದಾಟಿದ್ದಾನೆ.
ಇದನ್ನೂ ಓದಿ: Viral Video: ಬಾಳಾ ಠಾಕ್ರೆ ತಂದೆಯ ಪುಸ್ತಕವನ್ನು ಎಸೆದ ದಾದಿಯರು ಎಸೆದ ನರ್ಸ್‌ಗಳು; ವಿಡಿಯೊ ವೈರಲ್, ಹೊಸ ವಿವಾದ
ಈ ವಿಡಿಯೊವನ್ನು @CGTN ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ವಿಡಿಯೊದಲ್ಲಿ, ಡೆಲವರಿ ಬಾಯ್ ಸಮವಸ್ತ್ರವನ್ನು ಧರಿಸಿದ್ದು, ಕುದುರೆ ಮೂಲಕ ಸವಾರಿ ಮಾಡಿರುವುದನ್ನು ನೋಡಬಹುದು. ಪ್ರವಾಸಿಗರು ತಮ್ಮ ಕಾರಿನಲ್ಲಿ ಮುಂದೆ ಚಲಿಸುತ್ತಿರುವಂತೆ ವೇಗವಾಗಿ ಕುದುರೆಯಲ್ಲಿ ಬಂದ ಡೆಲಿವರಿ ಬಾಯ್‍ನನ್ನು ನೋಡಿ ಅಚ್ಚರಿಕೊಂಡಿದ್ದಾರೆ. ಬಳಿಕ ನಗುತ್ತಲೇ ತಮ್ಮ ಆಹಾರವನ್ನು ಸ್ವೀಕರಿಸುತ್ತಾ, ಆತನ ಕೆಲಸಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ.
ವಿಡಿಯೊ ವೀಕ್ಷಿಸಿ:
ಆಧುನಿಕ ಪದ್ಧತಿಯ ಆಹಾರ ವಿತರಣೆಯು ಸಾಂಪ್ರದಾಯಿಕ ಮಂಗೋಲಿಯನ್ ಕುದುರೆ ಸವಾರಿ ಸಂಸ್ಕೃತಿಯೊಂದಿಗೆ ಬೆರೆತ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯಿತು. ಇದು ವ್ಯಾಪಕ ಮೆಚ್ಚುಗೆ ಮತ್ತು ನಗುವನ್ನು ಹುಟ್ಟುಹಾಕಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಆ ವ್ಯಕ್ತಿಯ ಸಮರ್ಪಣೆಯನ್ನು ಶ್ಲಾಘಿಸಿದರು. ಕೆಲವರು ಹಳೆಯ ಸಂಪ್ರದಾಯಗಳನ್ನು ಆಧುನಿಕ ಸೇವೆಗಳೊಂದಿಗೆ ಸಂಯೋಜಿಸುವ ಸೃಜನಶೀಲತೆಯನ್ನು ಶ್ಲಾಘಿಸಿದರು. ಫುಡ್ ಡೆಲಿವರಿಯು ಸಂಸ್ಕೃತಿ ಮತ್ತು ತಂತ್ರಜ್ಞಾನದ ಪರಿಪೂರ್ಣ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ನೂರಾರು ಮೈಲುಗಳಷ್ಟು ಉದ್ದದ ಹುಲ್ಲುಗಾವಲುಗಳು ಮತ್ತು ಗ್ರಾಮೀಣ ಸಂಪ್ರದಾಯಗಳು ಪ್ರಬಲವಾಗಿರುವ ಇನ್ನರ್ ಮಂಗೋಲಿಯಾದ ಜನರಿಗೆ ಕುದುರೆ ಸವಾರಿ ಬಹಳ ಹಿಂದಿನಿಂದಲೂ ಜನಪ್ರಿಯ ವಿಧಾನವಾಗಿದೆ. ಫುಡ್ ಡೆಲಿವರಿ ಬಾಯ್‍ನ ತ್ವರಿತ ಚಿಂತನೆಯು ಈ ಪರಂಪರೆಯನ್ನು ಪ್ರದರ್ಶಿಸುವುದಲ್ಲದೆ, ಚೀನಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಆಹಾರ ವಿತರಣಾ ಉದ್ಯಮವು ವಿಕಸನಗೊಳ್ಳುತ್ತಿರುವ ಲಕ್ಷಣವನ್ನು ಎತ್ತಿ ತೋರಿಸಿದೆ. ಸದ್ಯ, ಈ ವಿಡಿಯೊ ವೈರಲ್ ಆಗಿದ್ದು, ಅನೇಕರ ಗಮನಸೆಳೆದಿರುವುದಂತೂ ಸುಳ್ಳಲ್ಲ.