ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಾಳಾ ಠಾಕ್ರೆ ತಂದೆಯ ಪುಸ್ತಕವನ್ನು ಎಸೆದ ದಾದಿಯರು ಎಸೆದ ನರ್ಸ್‌ಗಳು; ವಿಡಿಯೊ ವೈರಲ್, ಹೊಸ ವಿವಾದ

Nurses Throwing Books: ಪ್ರಬೋಧಂಕರ್ ಠಾಕ್ರೆ ಅವರು ಬರೆದ ಪುಸ್ತಕಗಳನ್ನು ಹಾಗೂ ದಿನಕರರಾವ್ ಜಾವಲ್ಕರ್ ಪುಸ್ತಕಗಳನ್ನು ನರ್ಸ್‌ಗಳು ಅಧಿಕಾರಿಯೊಬ್ಬರ ಮೇಲೆ ಎಸೆದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಘಟನೆಯ ಈಗ ವಿವಾದಕ್ಕೆ ಕಾರಣವಾಗಿದೆ.

ಬಾಳಾ ಠಾಕ್ರೆ ತಂದೆಯ ಪುಸ್ತಕವನ್ನು ಎಸೆದ ದಾದಿಯರು ಎಸೆದ ನರ್ಸ್‌ಗಳು

-

Priyanka P Priyanka P Oct 8, 2025 4:11 PM

ಮುಂಬೈ: ದಿವಗಂತ ಬಾಳಾ ಠಾಕ್ರೆ (Bal Thackeray) ಅವರ ತಂದೆ ಪ್ರಬೋಧಂಕರ್ ಠಾಕ್ರೆ ಅವರು ಬರೆದ ಪುಸ್ತಕಗಳನ್ನು ಹಾಗೂ ದಿನಕರರಾವ್ ಜಾವಲ್ಕರ್ ಪುಸ್ತಕಗಳನ್ನು ನರ್ಸ್‌ಗಳು ಅಧಿಕಾರಿಯೊಬ್ಬರ ಮೇಲೆ ಎಸೆದಿದ್ದಾರೆ. ಆ ಪುಸ್ತಕಗಳು ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತವೆ ಎಂದು ಆರೋಪಿಸಿದ್ದಾರೆ. ಈ ಘಟನೆಯೀಗ ವಿವಾದಕ್ಕೆ ಕಾರಣವಾಗಿದೆ. ಅಧಿಕಾರಿಯ ನಿವೃತ್ತಿಗೆ ಸುಮಾರು ಒಂದು ತಿಂಗಳ ಮೊದಲು, ಜುಲೈ 29 ರಂದು ಈ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ (Viral Video).

ಮುಂಬೈನ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ನಿವೃತ್ತಿಯಾಗುತ್ತಿರುವ ಅಧಿಕಾರಿಯು ಪ್ರಬೋಧಂಕರ್ ಠಾಕ್ರೆ ಅವರ ಪುಸ್ತಕಗಳನ್ನು ವಿತರಿಸಿದಾಗ ಈ ಘಟನೆ ನಡೆದಿದೆ. ನರ್ಸ್‌ಗಳು ಯಾರ ಮೇಲೂ ಯಾವುದೇ ಪುಸ್ತಕವನ್ನು ಎಸೆಯಲಾಗಿಲ್ಲ ಎಂದು ಶಿವಸೇನೆ (ಯುಬಿಟಿ) ನಾಯಕರೊಬ್ಬರು ಹೇಳಿಕೊಂಡರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್), ಪ್ರಬೋಧಂಕರ್ ಠಾಕ್ರೆ ಅವರಂತಹ ಸಮಾಜ ಸುಧಾರಕರಿಗೆ ಮಾಡಿದ ಅವಮಾನ ಇಡೀ ರಾಜ್ಯಕ್ಕೆ ಮಾಡಿದ ಅವಮಾನ ಎಂದು ಹೇಳಿದೆ. ಪ್ರಬೋಧಂಕರ್ ಠಾಕ್ರೆ (1885-1973) ಅವರು ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆಯವರ ತಂದೆ.

ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಡೆಸುತ್ತಿರುವ ಕಸ್ತೂರ್ಬಾ ಆಸ್ಪತ್ರೆಯ ನಿವೃತ್ತಿ ಹೊಂದುತ್ತಿರುವ ವಿಭಾಗ ಅಧಿಕಾರಿ, ಸೆಪ್ಟೆಂಬರ್ 19 ರಂದು ಪೊಲೀಸರನ್ನು ಸಂಪರ್ಕಿಸಿ ತನ್ನ ಮಾನಹಾನಿ ಮಾಡಲು ವಿಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ದೂರಿದರು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇಲ್ಲಿದೆ ವಿಡಿಯೊ:



ಅಧಿಕಾರಿ ಪ್ರಬೋಧನಕರ್ ಠಾಕ್ರೆ ಬರೆದಿರುವ ದೇವ್ಲಾಂಚ ಧರ್ಮ್ ಆನಿ ಧರ್ಮಚಿ ದೇವಾಲೆ (ದೇವಾಲಯಗಳು ಮತ್ತು ಧರ್ಮದ ದೇವಾಲಯಗಳು), ಮತ್ತು ದಿನಕರರಾವ್ ಜಾವಲ್ಕರ್ ಬರೆದ ದೇಶಾಚೆ ದುಷ್ಮನ್ (ದೇಶದ ಶತ್ರುಗಳು) ಪುಸ್ತಕಗಳನ್ನು ವಿತರಿಸಿದರು. ನಿವೃತ್ತಿಗೆ ಸುಮಾರು ಒಂದು ತಿಂಗಳ ಮೊದಲು, ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅವರು ಸದ್ಭಾವನೆಯ ಸಂಕೇತವಾಗಿ ಅವುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಪ್ರಬೋಧಂಕರ್ ಠಾಕ್ರೆ ಅವರ ಪುಸ್ತಕವು ಕುರುಡು ನಂಬಿಕೆ, ಧಾರ್ಮಿಕ ಬೂಟಾಟಿಕೆ ಮತ್ತು ಧರ್ಮದ ವಾಣಿಜ್ಯೀಕರಣವನ್ನು ಟೀಕಿಸುತ್ತದೆ. ದೇವರ ಹೆಸರಿನಲ್ಲಿ ನಡೆಸುವ ಧಾರ್ಮಿಕ ಶೋಷಣೆಯಿಂದ ನಿಜವಾದ ಆಧ್ಯಾತ್ಮಿಕತೆಯನ್ನು ಬೇರ್ಪಡಿಸಲು ಇದು ಜನರನ್ನು ಒತ್ತಾಯಿಸುತ್ತದೆ. ಜವಲ್ಕರ್ ಅವರ ಪುಸ್ತಕವು ಭಾರತದ ನಿಜವಾದ ಶತ್ರುಗಳು ವಿದೇಶಿ ಶಕ್ತಿಗಳಲ್ಲ, ಆದರೆ ಆಂತರಿಕ ಶೋಷಕರು. ಸಮಾಜವನ್ನು ವಿಭಜಿಸಲು ಮತ್ತು ನಿಯಂತ್ರಿಸಲು ಧರ್ಮ, ಜಾತಿ ಮತ್ತು ಮೂಢನಂಬಿಕೆಯನ್ನು ಬಳಸುವವರು ಎಂದು ಗಮನಸೆಳೆದಿದೆ.

ಇದನ್ನೂ ಓದಿ: Viral News: ಮ್ಯಾಗಿ ಖರೀದಿಸಲು ಸಹೋದರಿಯ ನಿಶ್ಚಿತಾರ್ಥದ ಉಂಗುರವನ್ನೇ ಮಾರಲು ಹೊರಟ 13ರ ಪೋರ; ತಾಯಿ ಕಣ್ಣೀರು

ವೈರಲ್ ಆಗಿರುವ ವಿಡಿಯೊದಲ್ಲಿ, ಒಬ್ಬ ನರ್ಸ್ ಅಧಿಕಾರಿಯನ್ನು ಹಿಂದೂ ಧರ್ಮವನ್ನು ಅವಮಾನಿಸುವ ಪುಸ್ತಕಗಳನ್ನು ಏಕೆ ನೀಡಿದರು ಎಂದು ಪ್ರಶ್ನಿಸಿದ್ದಾರೆ. ಸಂಭಾಷಣೆಯ ಕೊನೆಯಲ್ಲಿ ಒಬ್ಬ ನರ್ಸ್, ಕೊಠಡಿಯಿಂದ ಹೊರಹೋಗುವ ಮೊದಲು ಎರಡು ಪುಸ್ತಕಗಳನ್ನು ಹೊಂದಿದ್ದ ಬಿಳಿ ಲಕೋಟೆಯನ್ನು ಅವರ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಅವರು ಕೋಪದಿಂದ ಪುಸ್ತಕಗಳನ್ನು ಅವರ ಮೇಲೆ ಎಸೆಯುವ ಮೊದಲು, ಅಧಿಕಾರಿಯು ಅವರಿಗೆ ಮನನೊಂದಿದ್ದರೆ, ಕೈಮುಗಿದು ಕ್ಷಮೆಯಾಚಿಸುವುದನ್ನು ಸಹ ಕಾಣಬಹುದು. ಈ ವಿಡಿಯೊವನ್ನು ಕಸ್ತೂರ್ಬಾ ಆಸ್ಪತ್ರೆಯ ದಾದಿಯರ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಯಿತು. ನಂತರ ವಿವಿದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ವಿಡಿಯೊ ವೈರಲ್ ಆಗಿದೆ.

ಈ ಘಟನೆ ಜುಲೈ 29 ರಂದು, ಅಧಿಕಾರಿಯ ನಿವೃತ್ತಿಗೆ ಸುಮಾರು ಒಂದು ತಿಂಗಳ ಮೊದಲು ನಡೆದಿದೆ ಎಂದು ಅಗ್ರಿಪಾದ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಜಯ್ ನಲೆ ತಿಳಿಸಿದ್ದಾರೆ. ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ತನ್ನ ಮೇಲೆ ಅಪಮಾನ ಉಂಟಾಗುತ್ತಿದೆ ಎಂದು ಅವರು ಸೆಪ್ಟೆಂಬರ್ 19 ರಂದು ಪೊಲೀಸರಿಗೆ ದೂರು ನೀಡಿದ್ದರು.