ಗುಣಾ,ಫೆ. 10: ರೋಗಿಗೆ ಚಿಕಿತ್ಸೆ ನೀಡುವ ಬದಲು ವೈದ್ಯನೊಬ್ಬ ಮೊಬೈಲ್‌ನಲ್ಲಿ ಬ್ಯುಸಿಯಾಗಿರುವ ದೃಶ್ಯವೊಂದು ಇತ್ತೀಚೆಗೆ ವೈರಲ್ (Viral Video) ಆಗಿತ್ತು. ಈ ನಡುವೆ ಮಧ್ಯ ಪ್ರದೇಶದ ಗುಣಾ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯ ಲೋಕವೇ ತಲೆತಗ್ಗಿಸುವಂತಹ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಗುನಾ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವೈದ್ಯನೊಬ್ಬ ಪ್ರಿಸ್ಕ್ರಿಪ್ಷನ್ ಬರೆದು ಆತನೇ ಹರಿದು ಹಾಕಿರುವ ಘಟನೆಯೊಂದು ನಡೆದಿದೆ. ಮಾಹಿತಿಯ ಪ್ರಕಾರ, ತುರ್ತು ಕರ್ತವ್ಯದಲ್ಲಿರುವಾಗಲೇ ಕುಡಿದು ತೂರಾಡುತ್ತಿದ್ದಲ್ಲದೆ ರೋಗಿಯೊಂದಿಗೆ ಬೇಜವಾಬ್ದಾರಿ ಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ವಿಡಿಯೊ ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ಸೇವೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಡಿಯೋ ನೋಡಿ:
ತುರ್ತು ಚಿಕಿತ್ಸಾ ಘಟಕದಲ್ಲಿದ್ದ ವೈದ್ಯನೊಬ್ಬ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗಿದ್ದು ರೋಗಿಯೊಬ್ಬರ ಚಿಕಿತ್ಸಾ ಚೀಟಿಯನ್ನು ಹರಿದು ಹಾಕಿ ರಂಪಾಟ ಮಾಡಿದ್ದಾನೆ. ಆತ ರೋಗಿಗೆ ಚಿಕಿತ್ಸೆ ನೀಡುವ ಬದಲು, ಆತನ ಜೊತೆಗಿದ್ದ ಸಂಬಂಧಿಕನನ್ನು ರೋಗಿ ಯೆಂದು ತಪ್ಪಾಗಿ ಭಾವಿಸಿ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾನೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಲಲ್ಲೂ ಸಿಂಗ್ ಎಂಬ ವ್ಯಕ್ತಿ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ಅಜಯ್ ಸಿಂಗ್ ರಾಥೋಡ್ ಎಂಬ ವೈದ್ಯ ತೀವ್ರವಾಗಿ ಕುಡಿದಿದ್ದು ರೋಗಿಗೆ ಚಿಕಿತ್ಸೆ ನೀಡುವ ಬದಲಿಗೆ, ಕುಳಿತಲ್ಲೇ ತೂಗಾ ಡುತ್ತಿದ್ದು ಅಸಂಬದ್ಧವಾಗಿ ಮಾತನಾಡಿದ್ದಾರೆ. ಕುಡಿದ ಮತ್ತಿನಲ್ಲಿ, ಅಸ್ಪಷ್ಟ ಮಾತಿನಿಂದ ಮತ್ತು ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗದೆ ಇರುವುದನ್ನು ವಿಡಿಯೊ ತೋರಿಸುತ್ತದೆ.
Viral Video: ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ವೈದ್ಯರ ಈ ವರ್ತನೆಯನ್ನು ಕಂಡು ರೋಗಿಯ ಸಂಬಂಧಿಕರ ಪ್ರಶ್ನಿಸಿದಾಗ ಕೋಪಗೊಂಡು ರೋಗಿಗೆ ಚಿಕಿತ್ಸೆ ನೀಡುವ ಬದಲು ಅದನ್ನು ಹರಿದು ಹಾಕಿದ್ದಾರೆ ಎಂದು ಲಲ್ಲು ಸಿಂಗ್ ಆರೋಪಿಸಿ ದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಭಾರೀ ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಜೀವಕ್ಕೆ ಬೆಲೆಯೇ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ವಿಷಯ ದೊಡ್ಡದಾಗುತ್ತಿದ್ದಂತೆ ಆಸ್ಪತ್ರೆ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ. ಆರ್‌ಎಂಒ ಮತ್ತು ಆಸ್ಪತ್ರೆ ವ್ಯವ ಸ್ಥಾಪಕರು ಸ್ಥಳಕ್ಕೆ ತಲುಪಿ ವೈದ್ಯರನ್ನು ತಕ್ಷಣ ಮನೆಗೆ ಕಳುಹಿಸಿದರು. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಅವರು ಡಾ. ರಾಥೋಡ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು 7 ದಿನಗಳ ಕಾಲ ಸೇವೆಯಿಂದ ಅಮಾನತುಗೊಳಿಸಿದ್ದಾರೆ.