ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಗಾಡಿ ಓಡಿಸಿದ್ದಲ್ಲದೇ, ವೃದ್ಧನಿಗೆ ಥಳಿಸಿದ ಬೈಕ್‌ ಸವಾರ; ವಿಡಿಯೊ ಪುಲ್‌ ವೈರಲ್

ಕುಡಿದ ಮತ್ತಿನಲ್ಲಿ ಬೈಕ್ ಸವಾರನೊಬ್ಬ ವೃದ್ಧ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಡಿಯೊವನ್ನು ನಗರ ಪೊಲೀಸರ ಅಧಿಕೃತ ಹ್ಯಾಂಡಲ್‍ಗೆ ಟ್ಯಾಗ್ ಮಾಡಲಾಗಿದೆ.

ಫುಟ್‌ಪಾತ್‌ ಮೇಲೆ ಗಾಡಿ ಓಡಿಸಿ ವೃದ್ಧನಿಗೆ ಕಪಾಳಮೋಕ್ಷ!‌ ವಿಡಿಯೊ ವೈರಲ್‌

Profile pavithra Feb 28, 2025 1:05 PM

ಮುಂಬೈ: ಕುಡಿದ ಮತ್ತಿನಲ್ಲಿ ಬೈಕ್ ಸವಾರನೊಬ್ಬ ಫುಟ್‍ಪಾತ್‍ ಮೇಲೆ ಗಾಡಿ ಓಡಿಸಿದ್ದಾನೆ. ಈ ಕುರಿತು ಪ್ರಶ್ನಿಸಿದ ವೃದ್ಧನ ಜೊತೆ ಬೈಕ್‌ ಸವಾರ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಹೆಲ್ಮೆಟ್ ಇಲ್ಲದ ವ್ಯಕ್ತಿ ತನ್ನ ಬೈಕ್‍ ಅನ್ನು ಫುಟ್‍ಪಾತ್‍ನಲ್ಲಿ ಓಡಿಸಿದ್ದಲ್ಲದೇ, ಮುಖ್ಯ ರಸ್ತೆಯಲ್ಲಿ ಬೈಕ್ ಓಡಿಸುವಂತೆ ಹೇಳಿದ ವೃದ್ಧನಿಗೆ ಮನಬಂದಂತೆ ಥಳಿಸಿದ್ದಾನೆ. ವೈರಲ್ ವಿಡಿಯೊದಲ್ಲಿ ಕುಡಿದ ಮತ್ತಿನಲ್ಲಿದ್ದ ಬೈಕ್ ಸವಾರ ಫುಟ್‍ಪಾತ್‍ನಲ್ಲಿ ಬೈಕ್ ಓಡಿಸುವಾಗ ಅಲ್ಲಿ ನಡೆದು ಹೋಗುತ್ತಿದ್ದ ವೃದ್ಧ ವ್ಯಕ್ತಿ ಮೈನ್ ರೋಡ್‍ನಲ್ಲಿ ಹೋಗುವಂತೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಬೈಕ್‍ ಸವಾರ ಬೈಕ್‍ನಿಂದ ಕೆಳಗಿಳಿದು ವೃದ್ಧ ವ್ಯಕ್ತಿಯನ್ನು ನೆಲಕ್ಕೆ ತಳ್ಳಿ ಕಪಾಳಮೋಕ್ಷ ಮಾಡಿದ್ದಾನೆ.



ನಡೆದಿದ್ದೇನು?

ವರದಿ ಪ್ರಕಾರ, ವೃದ್ಧ ವ್ಯಕ್ತಿ ಫುಟ್‍ಪಾತ್‍ನಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಬೈಕ್ ಸವಾರ ದಾರಿ ಬಿಡುವಂತೆ ಹಾರ್ನ್ ಮಾಡಿದ್ದಾನೆ. ಆದರೆ ಅವನ ಹಾರ್ನ್ ಅನ್ನು ವೃದ್ಧನು ನಿರ್ಲಕ್ಷಿಸಿದ್ದಾನೆ. ಬೈಕ್ ಸವಾರ ಮತ್ತೆ ಮತ್ತೆ ಹಾರ್ನ್ ಮಾಡಿದರೂ ವೃದ್ಧ ತನ್ನ ದಾರಿಯಿಂದ ಸರಿಯಲಿಲ್ಲವಂತೆ. ಇದರಿಂದ ಕೋಪಗೊಂಡ ಬೈಕ್ ಸವಾರ ವೃದ್ಧನ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಪರೇಶ್ ಪಟೇಲ್ ಎಂಬಾತ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಘಟನೆಯನ್ನು ಮುಂಬೈ ಟ್ರಾಫಿಕ್ ಪೊಲೀಸರಿಗೆ ವರದಿ ಮಾಡಿದ್ದಾನೆ.

ಮುಂಬೈ ಪೊಲೀಸರು ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಮೊದಲು ಘಟನೆಯ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಪಟೇಲ್ ಅನ್ನು ಕೇಳಿದ್ದಾರೆ. ಹಾಗಾಗಿ ವೈಯಕ್ತಿಕ ಚಾಟ್ ಮೂಲಕ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾನಂತೆ. ಆದರೆ ಅಗತ್ಯ ಕ್ರಮಕ್ಕಾಗಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಅವನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಕುಡಿತದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸ್‌ಗೆ ಕಪಾಳ ಮೋಕ್ಷ ಮಾಡಿದ ಯುವಕ; ವಿಡಿಯೊ ವೈರಲ್‌

ಕುಡಿದ ಮತ್ತಿನಲ್ಲಿ ಗಾಡಿ ಓಡಿಸಿ ಕೆಲವರು ಮಾಡಿದ ಅವಾಂತರಗಳು ಸಾಕಷ್ಟು ಇವೆ. ಇತ್ತೀಚೆಗೆ ಪುಣೆಯಲ್ಲಿ ಕರ್ತವ್ಯನಿರತ ಟ್ರಾಫಿಕ್‌ ಸಿಬ್ಬಂದಿ ಮೇಲೆ ಮದ್ಯಪಾನ ಮಾಡಿದ್ದ  ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ವಿಡಿಯೊ‌ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೂಲಗಳ ಪ್ರಕಾರ ಈ ಘಟನೆ ಪುಣೆಯ ಮಗರಪಟ್ಟಾ ಬಳಿ ನಡೆದಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿದ್ದ ಯುವಕ ಮಾತಿನ ಚಕಮಕಿ ನಡೆಸಿದ ಬಳಿಕ ಸಂಚಾರ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನಂತೆ.

ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸ್ ಮೇಲೆ  ವ್ಯಕ್ತಿ ಹಲ್ಲೆ ಮಾಡುವ ವಿಡಿಯೊ ಭಾರೀ ವೈರಲ್ ಆಗಿದೆ. ಪುಣೆಯ ಮಗರಪಟ್ಟಾ ಪ್ರದೇಶದಲ್ಲಿ ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಮೇಲೆ ಕುಡಿದ  ಅಮಲಿನಲ್ಲಿ ಯುವಕ ಕಪಾಳಮೋಕ್ಷ ಮಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.