ತಿರುವನಂತಪುರಂ, ಮೇ 2: ಇತ್ತೀಚಿನ ದಿನದಲ್ಲಿ ಪ್ರಾಣಿಗಳ ಅಟ್ಟಹಾಸದಿಂದ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೇರಳಂನ ದೇವಾಲಯ ಉತ್ಸವಗಳಲ್ಲಿ ಆನೆಯ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಘಟನೆ ನಡೆದಿದ್ದುಓರ್ವ ಮಾವುತ ಹಾಗೂ ಲಾರಿ ಚಾಲಕ ಮೃತಪಟ್ಟಿದ್ದಾರೆ. ಆನೆ ಅಟ್ಟಹಾಸ ಮೆರೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ಕೇರಳಂ ದೇವಾಲಯ ಉತ್ಸವ ಸ್ಥಳಗಳಲ್ಲಿ ಎರಡು ಆನೆಗಳ ದಾಳಿ ನಿಜಕ್ಕೂ ಮೈ ಜುಮ್ಮೆನಿಸುವಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಧಾರ್ಮಿಕ ಆಚರಣೆಗಳಲ್ಲಿ ಪ್ರಾಣಿಗಳನ್ನು ಬಳಸುವುದರ ಬಗ್ಗೆ ಗಂಭೀರ ಪ್ರಶ್ನೆ ಮೂಡಿದೆ. ಮೇ 1ರಂದು ಈ ದುರಂತ ನಡೆದಿದೆ. ವಿಡಿಯೊ ನೋಡಿ ಆನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ.
ವಿಡಿಯೊ ನೋಡಿ:
ಎರ್ನಾಕುಲಂ ಜಿಲ್ಲೆಯ ಅಂಗಮಾಲಿ ಬಳಿಯ ಕಿಡಂಗೂರ್ ಶ್ರೀ ಮಹಾವಿಷ್ಣು ದೇವಸ್ಥಾನ ಜಾತ್ರೆಯ ಸಮಯದಲ್ಲಿ ಮೊದಲ ದುರಂತ ಸಂಭವಿಸಿದೆ. ಸ್ನಾನ ಮಾಡಿಸಲೆಂದು ಕರೆದುಕೊಂಡು ಹೋಗುವಾಗ ಆನೆ ಏಕಾಏಕಿ ದಾಳಿ ಮಾಡಿದೆ. ಆನೆಯನ್ನ ಕರೆತಂದಿದ್ದ ಲಾರಿ ಚಾಲಕ ವಿಷ್ಣು ಎಂಬುವವರ ಮೇಲೆ ದಾಳಿ ಮಾಡಿದೆ. ಆನೆ ತನ್ನ ಸೊಂಡಿಲಿನಿಂದ ಎತ್ತಿ, ತುಳಿದು, ಸ್ಥಳದಲ್ಲೇ ಕೊಂದಿದೆ.
25 ಸಾವಿರ ರೂ.ಗೆ ಎಐ ಶಿಕ್ಷಕಿ ಸೃಷ್ಟಿಸಿದ 17 ವರ್ಷದ ವಿದ್ಯಾರ್ಥಿ; ರೋಬೋಟ್ ಉಪನ್ಯಾಸದ ವಿಡಿಯೊ ವೈರಲ್
ಅಷ್ಟೇ ಅಲ್ಲದೆ ಕೋಪಗೊಂಡ ಆನೆಯೂ ನಿಲ್ಲಿಸಿದ್ದ ಕಾರನ್ನು ಹಲವು ಬಾರಿ ಉರುಳಿಸಿ ನೆಲಕ್ಕೆ ಅಪ್ಪಳಿಸಿದೆ.ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಭಕ್ತರು ಮತ್ತು ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ಧಾವಿಸಿದರು.
ವೈರಲ್ ವಿಡಿಯೊ ಇಲ್ಲಿದೆ:
ಇನ್ನೊಂದು ಘಟನೆ ತ್ರಿಶೂರ್‌ನ ಕೂಡಲ್‌ಮಾಣಿಕ್ಯಂ ದೇವಸ್ಥಾನದಲ್ಲಿ ನಡೆದಿದೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಿಂದಿನ ದಿನ ರಾತ್ರಿ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಆನೆಯು ಕೆರಳಿರುವ ಲಕ್ಷಣ ತೋರಿಸಿತ್ತು. ಮಧ್ಯಾಹ್ನ ಆನೆ ತನ್ನ ತಾತ್ಕಾಲಿಕ ಆವರಣದಿಂದ ಹೊರ ಬಂದು ಸ್ಥಳದಲ್ಲಿದ್ದ ನಿರ್ವಾಹಕರ ಮೇಲೆ ದಾಳಿ ಮಾಡಿದ್ದು ಮಾವುತ ಶ್ರೀಕುಟ್ಟನ್‌ನ ಎದೆಗೆ ತುಳಿದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಮಾವುತ ಅಮಲ್ ಕೂಡ ಗಾಯಗೊಂಡಿದ್ದಾರೆ. ಸದ್ಯ ಎರಡೂ ಘಟನೆಗಳು ಭಕ್ತರಲ್ಲಿ ಭೀತಿಯನ್ನು ಉಂಟು ಮಾಡಿದೆ.