ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elon Musk: ಎಲಾನ್‌ ಮಸ್ಕ್ ʼಡಿನ್ನರ್ ಎಂಟರ್‌ಟೈನ್‌ಮೆಂಟ್ʼ ನೋಡಿ ನೆಟ್ಟಿಗರು ಫುಲ್‌ ಫಿದಾ! ವಿಡಿಯೊ ಇಲ್ಲದೆ

Elon Musk: ಇತ್ತೀಚಿನ ವಿಡಿಯೊವೊಂದರಲ್ಲಿ ಉದ್ಯಮಿ ಎಲೋನ್ ಮಸ್ಕ್ ತಮ್ಮ ಬೆರಳಿನ ತುದಿಯಲ್ಲಿ ಫೋರ್ಕ್ ಮತ್ತು ಎರಡು ಚಮಚಗಳನ್ನು ಸಲೀಸಾಗಿ ಹಿಡಿದುಕೊಂಡು ಸಮತೋಲನಗೊಳಿಸುತ್ತಿರುವ ಸ್ಟಂಟ್ ಅನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನವನ್ನು ಸೆಳೆದಿದೆ.

ಟ್ರಂಪ್‌ ಡಿನ್ನರ್‌ ಪಾರ್ಟಿಯಲ್ಲಿ ಎಲಾನ್ ಮಸ್ಕ್ ಸ್ಟಂಟ್

Profile pavithra Mar 24, 2025 6:11 PM

ವಾಷಿಂಗ್ಟನ್‌: ಸಾಮಾನ್ಯವಾಗಿ ವಿದ್ಯಾರ್ಥಿಗಳು ಬುಕ್, ಪೆನ್‍ ಅನ್ನು ಕೈಯಲ್ಲಿ ಹಿಡಿದುಕೊಂಡು ಸ್ಟಂಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲಿ ಖ್ಯಾತ ಉದ್ಯಮಿಯೊಬ್ಬರು ಚಮಚ ಮತ್ತು ಫೋರ್ಕ್‌ ಬಳಸಿ ಕೈಯಲ್ಲಿ ಸ್ಟಂಟ್‌ ಮಾಡಿದ್ದಾರೆ. ಇತ್ತೀಚಿನ ವಿಡಿಯೊವೊಂದರಲ್ಲಿ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್ (Elon Musk) ತಮ್ಮ ಬೆರಳಿನ ತುದಿಯಲ್ಲಿ ಫೋರ್ಕ್ ಮತ್ತು ಎರಡು ಚಮಚಗಳನ್ನು ಸಲೀಸಾಗಿ ಹಿಡಿದುಕೊಂಡು ಸಮತೋಲನಗೊಳಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

2025ರ ಮಾರ್ಚ್ 15ರಂದು ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋದಲ್ಲಿ ನಡೆದ ವಿಶೇಷ , ಎಲಾನ್‌ ಮಸ್ಕ್ ಭಾಗವಹಿಸಿದ್ದರು. ಆ ವೇಳೆ ಅವರು ತಮ್ಮ ಬೆರಳಿನ ತುದಿಯಲ್ಲಿ ಚಮಚಗಳನ್ನು ಬ್ಯಾಲೆನ್ಸ್‌ ಮಾಡುತ್ತಿರುವುದು ಕಂಡುಬಂದಿದೆ. ಈ ಮೂಲಕ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಎಲಾನ್‌ ಮಸ್ಕ್‌ನ ಈ ತಮಾಷೆಯ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಎಲಾನ್‌ ಮಸ್ಕ್‌ ಸ್ಟಂಟ್‌ ವಿಡಿಯೊ ಇಲ್ಲಿದೆ ನೋಡಿ...



ವೈರಲ್ ಆದ ವಿಡಿಯೊದಲ್ಲಿ ಎಲಾನ್‍ ಮಸ್ಕ್ ಟ್ರಂಪ್ ಬಳಿ ಮೇಜಿನ ಮೇಲೆ ಕುಳಿತಿರುವುದು ಸೆರೆಯಾಗಿದೆ. ಅವರು ಆಹಾರವನ್ನು ಬಡಿಸುವುದನ್ನು ಕಾಯುತ್ತಿದ್ದ ವೇಳೆ ಈ ಫನ್ನಿ ಸ್ಟಂಟ್‌ ಮಾಡಿದ್ದಾರೆ. ಅವರ ಮೇಜಿನ ಬಳಿ ಕುಳಿತಿದ್ದ ಇತರ ಅತಿಥಿಗಳು ಎಲಾನ್‍ ಮಸ್ಕ್ ಅವರ ತಮಾಷೆಯ ಕೃತ್ಯವನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಲಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಕೊಂಡಾಗ ಇದು ನೆಟ್ಟಿಗರ ಗಮನವನ್ನು ಸೆಳೆದು ಮೆಚ್ಚುಗೆಯನ್ನು ಗಳಿಸಿದೆ.

ಮಸ್ಕ್ ಬೆರಳ ತುದಿಯಲ್ಲಿ ಫೋರ್ಕ್ ಮತ್ತು ಎರಡು ಚಮಚಗಳನ್ನು ಸಮತೋಲನಗೊಳಿಸುವ ಮೂಲಕ ನೆಟ್ಟಿಗರನ್ನು ರಂಜಿಸಿದ್ದಾರೆ. ಹಾಗಾಗಿ ಈ ವಿಡಿಯೊವನ್ನು ಅನೇಕ ನೆಟ್ಟಿಗರು ಹಂಚಿಕೊಂಡಿದ್ದಾರೆ. ಮಾರ್ಚ್ 22ರಂದು ಈ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅದು ಈಗ ವೈರಲ್ ಆಗಿದೆ. ಈ ವಿಡಿಯೊವನ್ನು ಇದುವರೆಗೆ 7.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಒಬ್ಬರು ಈ ದೃಶ್ಯವನ್ನು "ಡಿನ್ನರ್ ಎಂಟರ್‌ಟೈನ್‌ಮೆಂಟ್" ಎಂದು ಕರೆಯುವ ಮೂಲಕ ಹಂಚಿಕೊಂಡಿದ್ದಾರೆ.

ಎಲಾನ್ ಮಸ್ಕ್ ಟ್ರಿಕ್‌ಗೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. "ಭೌತಶಾಸ್ತ್ರ ಮತ್ತು ಕೌಶಲ್ಯದ ತಮಾಷೆಯ ಕ್ರಿಯೆಯ ಮೂಲಕ ಅವರ ಕುತೂಹಲಕಾರಿ, ವೈಜ್ಞಾನಿಕ ಮನಸ್ಸು ಕಂಡು ಬಂದಿದೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಸಮತೋಲನದ ಉತ್ತಮ ಅಭ್ಯಾಸ" ಎಂದು ಇನ್ನೊಬ್ಬರು ಹೇಳಿದ್ದಾರೆ. "ಎಲಾನ್ ಎಲ್ಲಿಗೆ ಹೋದರೂ, ಅವರು ಆ ಕ್ಷಣವನ್ನು ಆನಂದಿಸಲು ಒಂದು ಮಾರ್ಗವನ್ನು ಹುಡುಕುತ್ತಾರೆ" ಎಂದು ನೆಟ್ಟಿಗರೊಬ್ಬರು ಮಸ್ಕ್ ಅವರನ್ನು ಹೊಗಳಿದ್ದಾರೆ.