ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪ್ಪ ಐ ಲವ್‌ ಯೂ: ಮಗಳಿಗಾಗಿ ಮನೆ ಊಟ ತಂದು ರೈಲ್ವೇ ಸ್ಟೇಶನ್‌ನಲ್ಲಿ ಚಳಿಯಲ್ಲಿ ನಡುಗುತ್ತಾ ಕಾದ ತಂದೆ: ಭಾವುಕ ಕ್ಷಣ ಇಲ್ಲಿದೆ

ತಂದೆ ಮತ್ತು ಮಗಳ ನಡುವೆ ಇರುವ ಪ್ರೀತಿ , ವಾತ್ಸಲ್ಯವು ಎಲ್ಲದಕ್ಕೂ ಮಿಗಿಲಾಗಿದೆ. ತಂದೆಯಾದವನು ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನು ಕೂಡ ಸಹಿಸಬಲ್ಲ, ಮಕ್ಕಳ ಏಳ್ಗೆಗಾಗಿ ಏನು ಬೇಕಾದರೂ ಮಾಡುತ್ತಾನೆ. ಅಂತೆಯೇ ದೆಹಲಿಯಿಂದ ಉದಯಪುರಕ್ಕೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ತಂದೆಯ ಬಗ್ಗೆ ಭಾವನಾತ್ಮಕ ವಿಡಿಯೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿ ದ್ದಾರೆ.

ಮಗಳಿಗಾಗಿ ಮನೆ ಊಟ ತಂದು ರೈಲ್ವೇ ಸ್ಟೇಶನ್‌ನಲ್ಲಿ ಕಾದ ತಂದೆ

ನವದೆಹಲಿ, ಡಿ. 12: ತಂದೆ ಮತ್ತು ಮಕ್ಕಳ ನಡುವೆ ಒಂದು ಉತ್ತಮ ಬಾಂಧವ್ಯ ಇದ್ದಾಗ ಸಂಸಾರ , ಸಂಬಂಧ ಎಲ್ಲ ಬಹಳ ಚೆನ್ನಾಗಿಯೇ ಇರುತ್ತದೆ. ಅದರಲ್ಲೂ ತಂದೆ ಮತ್ತು ಮಗಳ ನಡುವೆ ಇರುವ ಪ್ರೀತಿ, ವಾತ್ಸಲ್ಯಕ್ಕೆ ಎಣೆಯೇ ಇಲ್ಲ. ತಂದೆಯಾದವನು ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನು ಕೂಡ ಸಹಿಸಬಲ್ಲ, ಮಕ್ಕಳ ಏಳ್ಗೆಗಾಗಿ ಏನು ಬೇಕಾದರೂ ಮಾಡಬಲ್ಲ. ಇದಕ್ಕೆ ಉತ್ತಮ ಉದಾಹರಣೆ ದೆಹಲಿಯ ಈ ಘಟನೆ. ದೆಹಲಿಯಿಂದ ಉದಯಪುರಕ್ಕೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ತಂದೆಯ ಬಗ್ಗೆ ಭಾವನಾತ್ಮಕ ವಿಡಿಯೊ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼʼರಾತ್ರಿ ಪ್ರಯಾಣ ನನಗೆ ಅನಿವಾರ್ಯವಾಗಿತ್ತು. ನನ್ನ ತಂದೆ ನನಗೋಸ್ಕರ ರೈಲ್ವೇ ಸ್ಟೇಶನ್ ಗೆ ಬಂದಿದ್ದಾರೆʼʼ ಎಂದು ತನ್ನ ತಂದೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ (Viral Video) ಆಗುತ್ತಿದೆ. ತಂದೆ ಮತ್ತು ಮಗಳ ಬಾಂಧವ್ಯವು ನೆಟ್ಟಿಗರ ಗಮನ ಸೆಳೆದಿದೆ.

ʼʼದೆಹಲಿಯಿಂದ ಉದಯಪುರಕ್ಕೆ ಹೋಗುವ ಮಾರ್ಗದ ಮಧ್ಯೆ ನಾನು ಹೊರಟಿರುವ ರೈಲು ನಮ್ಮ ಊರಿನಲ್ಲಿ ಕೇವಲ ಎರಡು ನಿಮಿಷಗಳ ಕಾಲ ನಿಲ್ಲುತ್ತದೆ. ಅದೇ ಸಮಯಕ್ಕೆ ಸರಿಯಾಗಿ ನನಗೆ ಮನೆಯ ಊಟ, ತಿಂಡಿ ನೀಡಲು ರೈಲ್ವೇ ಸ್ಟೇಷನ್‌ಗೆ ತಂದೆ ಬಂದಿದ್ದಾರೆ. ನಿಜಕ್ಕೂ ತುಂಬಾ ಎಮೋಶನಲ್ ಮೂಮೆಂಟ್ ಇದಾಗಿದ್ದು ಈ ಕ್ಷಣ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ನನಗೆ ಸಿಕ್ಕಂತ ಬೆಸ್ಟ್ ಫಾದರ್ ಸಿಗಲಿ...ʼʼ ಎಂದು ಆ ಯುವತಿ ಹೇಳಿದ್ದಾಳೆ.

ವಿಡಿಯೊ ನೋಡಿ:



ಚಳಿಯ ವಾತಾವರಣದ ನಡುವೆಯೂ ರಾತ್ರಿ 11 ಗಂಟೆ ಸುಮಾರಿಗೆ ತಂದೆ ನಿಲ್ದಾಣಕ್ಕೆ ಬಂದಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಆ ಯುವತಿ ಹೇಳಿದಂತೆ ಆಕೆಯ ತಂದೆಯು ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಅಗತ್ಯ ವಸ್ತುಗಳ ಸಾಮಗ್ರಿಗಳನ್ನು ಹಿಡಿದುಕೊಂಡು ಸ್ಟೇಶನ್‌ನಲ್ಲಿ ನಿಂತಿದ್ದರು. ರೈಲು ಬರೀ 2 ನಿಮಿಷ ಅಲ್ಲಿ ನಿಲ್ಲುವ ಕಾರಣ ತಂದೆ ಬಳಿ ಹೆಚ್ಚು ಮಾತನಾಡಲು ಸಾಧ್ಯವಾಗಿಲಲ ಎಂದು ಹೇಳಿದ್ದಾಳೆ.

ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು

ರೀಲ್‌ನಲ್ಲಿ ಪೋಷಕರು ತಮ್ಮ ಮಕ್ಕಳಿಗಾಗಿ ಎಲ್ಲವನ್ನು ಮಾಡುತ್ತಾರೆ ಎಂದು ಬರೆಯಲಾಗಿದ್ದನ್ನು ಕಾಣಬಹುದು.‌ ವಿಡಿಯೊ ಪೋಷಕರು ಮತ್ತು ಮಗುವಿನ ನಡುವಿನ ಭಾವನಾತ್ಮಕ ಬಾಂಧವ್ಯವು ಎಲ್ಲ ಸಂಬಂಧಕ್ಕು ಮಿಗಿಲಾದದ್ದು ಎನ್ನುವುದನ್ನು ಎತ್ತಿ ಹಿಡಿದಿದೆ. ಈ ವಿಡಿಯೊ ನೋಡಿ ಅನೇಕರು ಕಮೆಂಟ್‌ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ತಂದೆ ಮತ್ತು ಮಗಳ ಬಾಂಧವ್ಯಕ್ಕೆ ಸರಿಸಾಟಿ ಇಲ್ಲ, ಕೊರೆಯುವ ಚಳಿಯಲ್ಲಿಯೂ ತನ್ನ ಮಗಳಿಗಾಗಿ ರೈಲ್ವೇ ಸ್ಟೇಶನ್‌ನಲ್ಲಿ ಕಾಯುವ ಇಂತಹ ವ್ಯಕ್ತಿಯನ್ನು ತಂದೆಯಾಗಿ ಪಡೆದ ನೀವು ಧನ್ಯರು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಈ ದೃಶ್ಯವು ಎಲ್ಲ ಸಿನಿಮಾದ ಎಮೋಶನಲ್ ಸೀನ್ ಮೀರಿಸುವಂತಿದೆ. ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ, ಅವರ ಜೀವ, ಜೀವನ ಎಲ್ಲ ನೀವೇ ಆಗಿರಬಹುದು. ಆ ಮನಸ್ಸಿಗೆ ಎಂದು ನೋವು ಕೊಡಬೇಡಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.