ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಫುಡ್‌ ಎಮೋಜಿಗಳನ್ನು ನೋಡಿ ಬಾಯಿ ಚಪಲ ತಡೆಯಲಾರದೇ ಈತ ಮಾಡಿದ್ದೇನು ನೋಡಿ....ವಿಡಿಯೊ ವೈರಲ್

ಬಾಯಲ್ಲಿ ನೀರೂರಿಸುವ ಆಹಾರ ಸಿಕ್ಕರೆ ಯಾರು ಬೇಡ ಅನ್ನುತ್ತಾರೆ ಹೇಳಿ...ಹೌದು ದಾಸರು ಹೇಳಿದಂತೆ ʼಎಲ್ಲರೂ ಮಾಡುವುದು ಹೊಟ್ಟೆಗಾಗಿ....ʼ ಅನ್ನುವ ಹಾಗೆ ಇಲ್ಲೊಬ್ಬ ಫೋನಿನ ಕೀಬೋರ್ಡ್‌ನ ಮೇಲಿದ್ದ ಫುಡ್‌ ಎಮೋಜಿಗಳನ್ನು ಹುಡುಕಿಕೊಂಡು ಅಮೆರಿಕಾದಿಂದ ಜಪಾನಿಗೆ ಹೋಗಿದ್ದಾನೆ. ಜಪಾನಿನಲ್ಲಿ ಅವನು ಫುಡ್‌ ಸವಿದ ವಿಡಿಯೊ ಇಲ್ಲಿದೆ ನೋಡಿ.ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಫುಡ್‌ ಎಮೋಜಿಗಳನ್ನು ನೋಡಿ ಈತ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

Profile pavithra Mar 27, 2025 3:25 PM

ವಾಷಿಂಗ್ಟನ್‌: ರುಚಿ ರುಚಿಯಾದ ಆಹಾರವೆಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ! ಕೆಲವರಿಗಂತೂ ಟೇಸ್ಟಿ ಫುಡ್‌ ನೋಡುತ್ತಿದ್ದಂತೇ ಬಾಯಲ್ಲಿ ನೀರು ಬರುತ್ತದೆ.ಅದು ಅಲ್ಲದೇ, ಒಳ್ಳೆಯ ಆಹಾರ ಸಿಗುತ್ತದೆ ಎಂದರೆ ಕೆಲವರು ಎಷ್ಟು ದೂರ ಬೇಕಾದರೂ ಹೋಗುವುದಕ್ಕೆ ತಯಾರಿರುತ್ತಾರೆ. ಆಹಾರ ಪ್ರಿಯನಾದ ಈ ವ್ಯಕ್ತಿ ಕೂಡ ತನ್ನಿಷ್ಟದ ಆಹಾರ ಹುಡುಕಿಕೊಂಡು ಹೋದ ಕತೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ತನ್ನ ಫೋನ್‌ನ ಕಿಬೋರ್ಡ್‌ನಲ್ಲಿದ್ದ ಕಣ್ಮನ ಸೆಳೆಯುವ ಫುಡ್‌ ಎಮೋಜಿಗಳನ್ನು ಸವಿಯಲು ಈತ ತನ್ನ ಬ್ಯಾಗ್ ಪ್ಯಾಕ್‌ ಮಾಡಿಕೊಂಡು ಅಮೆರಿಕಾದಿಂದ ಜಪಾನ್‌ಗೆ ಹೋಗಿದ್ದಾನಂತೆ. ಅಂದಹಾಗೇ ಈ ಆಹಾರ ಪ್ರಿಯನ ಹೆಸರು ರಿಕ್‌ ಶಾಪರ್‌. ಇವನಿಗೆ ಆಹಾರದ ಜೊತೆಗೆ ದೂರದೂರಿಗೆ ಪ್ರಯಾಣ ಬೆಳೆಸುವುದು ಕೂಡ ತುಂಬಾ ಇಷ್ಟವಂತೆ. ಈತ ಜಪಾನ್‌ನಲ್ಲಿ ಫುಡ್‌ ಸವಿದ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ರಿಕ್‌ ಶಾಪರ್‌ ಜಪಾನ್‍ನ ಬೀದಿಗಳಲ್ಲಿ ತರಹೇವಾರಿ ಭಕ್ಷ್ಯಗಳನ್ನು ಸವಿಯುವ ದೃಶ್ಯ ಸೆರೆಯಾಗಿದೆ. ಸುಶಿಯಿಂದ ರಾಮೆನ್‍ವರೆಗೆ ತನಗಿಷ್ಟವಾದ ಎಲ್ಲವನ್ನೂ ಅವನು ಬಾಯಿ ಚಪ್ಪರಿಸಿಕೊಂಡು ರುಚಿ ನೋಡಿದ್ದಾನೆ. ಆನ್‍ಲೈನ್‍ನಲ್ಲಿರುವ ಪ್ರತಿಯೊಂದು ಖಾದ್ಯವನ್ನು ತಿನ್ನಲು ಆತ ಪ್ರಯತ್ನಿಸಿದ್ದಾನಂತೆ. ವಿಡಿಯೊದಲ್ಲಿ ಅವನು ರೆಸ್ಟೋರೆಂಟ್‍ನಲ್ಲಿ ಆಹಾರ ತುಂಬಿದ ಪ್ಲೇಟ್‍ನೊಂದಿಗೆ ಕುಳಿತಿರುವುದು ಸೆರೆಯಾಗಿದೆ. ಅವನು ಮೊದಲು ಜಪಾನ್‍ನ ಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದಾದ ಗ್ಯೋಜಾವನ್ನು "ಪ್ಯಾನ್-ಫ್ರೈಡ್ ಡಂಪ್ಲಿಂಗ್" ಅನ್ನು ತಿಂದಿದ್ದಾನೆ. ನಂತರ ಒನಿಗಿರಿ, ಡಾಂಗೊ, ಸುಶಿ ಮತ್ತು ರಾಮೆನ್‍ ಮುಂತಾದ ವಿವಿಧ ಆಹಾರವನ್ನು ಸೇವಿಸಿದ್ದಾನೆ.

ಈ ಎಲ್ಲಾ ಆಹಾರಗಳನ್ನು ತಿನ್ನಲು ಜಪಾನ್‍ಗೆ ಹೋಗಿರುವುದಾಗಿ ಆತ ತನ್ನ ವಿಡಿಯೊದ ಶೀರ್ಷಿಕೆಯಲ್ಲಿ ತಿಳಿಸಿದ್ದಾನೆ. ಹಾಗೂ ತನ್ನ ಪೋಸ್ಟ್‌ನಲ್ಲಿ, ಜನರು ಅದ್ಭುತ ಜಪಾನೀಸ್ ಭಕ್ಷ್ಯಗಳು ಎಲ್ಲಿ ಸಿಗುತ್ತವೆ, ಅವು ಯಾವುವು ಎಂಬ ಪಟ್ಟಿಯನ್ನು ಅವನು ಮಾಡಿದ್ದಾನಂತೆ. ಹಾಗೇ ಸುಶಿಯನ್ನು ಆನಂದಿಸಲು ಶಿಂಜುಕುವಿನ ಶಿಂಜುಕು ಸಕೇಜುಶಿಗೆ ಭೇಟಿ ನೀಡುವಂತೆ ಮತ್ತು ಕೋಬ್ ಚೈನಾಟೌನ್‍ನ ಆಹಾರ ಬೀದಿಗಳಲ್ಲಿ ರಾಮೆನ್‍ಗಾಗಿ ಭೇಟಿ ನೀಡಲು ಆತ ಫುಡ್‌ ಪ್ರಿಯರಿಗೆ ಹೇಳಿದ್ದಾನೆ.

ರಿಕ್‌ನ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಈಗಾಗಲೇ 4.4 ಮಿಲಿಯನ್ ವ್ಯೂವ್ಸ್ ಮತ್ತು ಸಾಕಷ್ಟು ಕಾಮೆಂಟ್‍ಗಳನ್ನು ಪಡೆದಿದೆ. "ಇದು ತುಂಬಾ ತಮಾಷೆಯಾಗಿ ಕಾಣುತ್ತದೆ!" ಎಂದು ಒಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. "ಓಹ್, ನಾನು ಇದನ್ನು ಪ್ರೀತಿಸುತ್ತೇನೆ ಆಹಾರ ಸೇವಿಸುವುದು ನನಗೂ ಇಷ್ಟ" ಎಂದು ಇನ್ನೊಬ್ಬರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ರೆಸ್ಟೋರೆಂಟ್‍ನಲ್ಲಿ ಲೋಟದೊಳಗೆ ಮೂತ್ರ ವಿಸರ್ಜಸಿದ ಬಾಲಕ; ಸಿಬ್ಬಂದಿ ಮಾಡಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಫುಡ್‍ಗೆ ಸಂಬಂಧಪಟ್ಟ ಹಲವು ವಿಡಿಯೊಗಳು ಆಗಾಗ ಹರಿದಾಡುತ್ತಿರುತ್ತದೆ. ಅದು ವಿಲಕ್ಷಣವಾದ ಕಾರಣಗಳಿಗಾಗಿ ವೈರಲ್ ಆಗುತ್ತದೆ. ಈ ಹಿಂದೆ ಕಾಫಿ, ಚಹಾಗೆ ಮ್ಯಾಗಿ ಮಿಕ್ಸ್ ಮಾಡುವಂತಹುದು, ಇಡ್ಲಿಗೆ ವಿವಿಧ ಸಾಸ್‍ಗಳನ್ನು ಹಚ್ಚುವಂತಹುದು, ಮ್ಯಾಗಿಯನ್ನು ತಯಾರಿಸಲು ನೀರಿನ ಬದಲು ಕೊಕೊಕೋಲಾ ಬಳಸಿದ್ದು ಹೀಗೆ ಹಲವಾರು ವಿಡಿಯೊಗಳು ಕಂಡುಬಂದಿದ್ದವು. ಇದು ನೆಟ್ಟಿಗರಲ್ಲಿ ಕೆಲವರು ಇಷ್ಟಪಟ್ಟರೆ, ಇನ್ನೂ ಕೆಲವರು ಅಸಹ್ಯ ಪಟ್ಟುಕೊಂಡಿದ್ದಾರೆ.