ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮಾಜಿ ಕಾರ್ಪೊರೇಟರ್ ಒಬ್ಬರನ್ನು ಶಿವಸೇನೆಯ ಮಹಿಳಾ ಕಾರ್ಯಕರ್ತೆಯೊಬ್ಬಳು ಥಳಿಸಿದ ಘಟನೆ ಇತ್ತೀಚೆಗೆ ಕಲ್ಯಾಣ್‍ನಲ್ಲಿ ನಡೆದಿದೆ. ಹಲ್ಲೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಕಲ್ಯಾಣ್‍ನ ಅಹಲ್ಯಾಬಾಯಿ ಚೌಕ್‍ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಾರ್ಚ್ 23 ರಂದು ಭಾನುವಾರ ರಸ್ತೆ ಕಾಮಗಾರಿಕೆಗಾಗಿ ಭೂಮಿ ಪೂಜೆ ನಡೆಸಲಾಗಿತ್ತು. ಆ ವೇಳೆ ಇವರ ನಡುವೆ ಮನಸ್ತಾಪ ಶುರುವಾಗಿತ್ತು. ರಸ್ತೆಯ ಕಾಮಗಾರಿಗಾಗಿ ಹಣವನ್ನು ಪಡೆದ ಕೀರ್ತಿಯನ್ನು ತೆಗೆದುಕೊಳ್ಳುವ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದು ಮರುದಿನ ಇಬ್ಬರ ನಡುವೆ ತೀವ್ರ ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ವ್ಯಕ್ತಿಯನ್ನು ಶಿವಸೇನೆಯ ಮಾಜಿ ಕಾರ್ಪೊರೇಟರ್ ಮೋಹನ್ ಉಗ್ಲೆ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಶಿಂಧೆ ಸೇನೆಯ ಕಾರ್ಯಕರ್ತೆ ರಾಣಿ ಕಪೋಟೆ ಎಂದು ಗುರುತಿಸಲಾಗಿದೆ. ಮಹೀಂದ್ರಾ ಸಿಂಗ್ ಕಾಬೂಲ್ ಸಿಂಗ್ ಶಾಲೆಯ ಬಳಿಯ ರಸ್ತೆಯ ಭೂಮಿ ಪೂಜೆ ಏರ್ಪಡಿಸಲಾಗಿತ್ತಂತೆ. ಮಾಜಿ ಕಾರ್ಪೊರೇಟರ್ ಮೋಹನ್ ಉಗ್ಲೆ ಸೇರಿದಂತೆ ಮಹಿಳಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿವಸೇನೆ ಮಹಿಳಾ ಕಾರ್ಯಕರ್ತೆ ರಾಣಿ ಕಪೋಟೆ ಅಲ್ಲಿಗೆ ಬಂದಾಗ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತಂತೆ.
ರಾಣಿ ಕಪೋಟೆ ಮತ್ತು ಮೋಹನ್ ಉಗ್ಲೆ ಇಬ್ಬರು ಸೋಮವಾರ(ಮಾರ್ಚ್ 24) ಮಧ್ಯಾಹ್ನ ಅಹಲ್ಯಾಬಾಯಿ ಚೌಕ್‌ನಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಕೋಪಗೊಂಡ ರಾಣಿ ಕಪೋಟೆ ಮೋಹನ್ ಉಗ್ಲೆ ಅವರಿಗೆ ಹೊಡೆದಿದ್ದಾಳೆ. ಇದರಿಂದ ಉಗ್ಲೆ ಕಣ್ಣಿಗೆ ತೀವ್ರವಾಗಿ ಗಾಯವಾಗಿ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನಂತೆ. ರಾಣಿ ಕಪೋಟೆ ಉಗ್ಲೆ ವಿರುದ್ಧ ದುರ್ನಡತೆ ಆರೋಪ ಮಾಡಿದ್ದಾಳೆ.ಇವರಿಬ್ಬರ ಗಲಾಟೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೀದಿ ಜಗಳದ ವಿಡಿಯೊ ಇಲ್ಲಿದೆ ನೋಡಿ...
ಮಾಜಿ ಕಾರ್ಪೊರೇಟರ್ ಮೋಹನ್ ಉಗ್ಲೆ ಅಹಲ್ಯಾಬಾಯಿ ಚೌಕ್‍ನಲ್ಲಿದ್ದಾಗ ನಿಂದಿಸಿದ್ದಾನೆ ಹಾಗಾಗಿ ಆತ್ಮರಕ್ಷಣೆಗಾಗಿ ಆಕ್ರಮಣ ಮಾಡಿದ್ದೇನೆ ಎಂದು ರಾಣಿ ಕಪೋಟೆ ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral News:'ಐಟಿ ಇಲ್ಲದಿದ್ದರೆ ಬೆಂಗಳೂರು ಮತ್ತೊಂದು ಬಿಹಾರ ಆಗ್ತಿತ್ತು; ರಾಜಧಾನಿ ಬಗ್ಗೆ ನಾಲಿಗೆ ಹರಿಬಿಟ್ಟ ಕಿಡಿಗೇಡಿ
ಈ ಬಗ್ಗೆ ಕೆಡಿಎಂಸಿಯ ಮಾಜಿ ಕಾರ್ಪೊರೇಟರ್ ಮೋಹನ್ ಉಗ್ಲೆ ಮಾತನಾಡಿ, 'ಮಹಿಳೆಯರಿಗೆ ಕಾನೂನಿನಿಂದ ರಕ್ಷಣೆ ಇದೆ. ನಮ್ಮ ಪಕ್ಷವು ಈ ಬಗ್ಗೆ ಗಮನ ಹರಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಘಟನೆಯ ಬಗ್ಗೆ ನಾವು ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಉಗ್ಲೆ ಹೇಳಿದ್ದಾನೆ.